ವಿಧಾನಸೌಧ ಬಳಿ ಹೆವಿ ಟ್ರಾಫಿಕ್, ಮೆಟ್ರೋದಲ್ಲಿ ಪ್ರಯಾಣಿಸಿದ ಡಿಕೆಶಿ
Recommended Video
ಮೆಟ್ರೋದಲ್ಲಿ ಪ್ರಯಾಣಿಸಿದ ಡಿಕೆಶಿ, ಕಾರಣ ಬೇರೆ | Oneindia Kannada
ಬೆಂಗಳೂರು, ಜೂನ್ 25: ಅಕ್ರಮ ಆಸ್ತಿ ಪ್ರಕರಣದ ತೀರ್ಪು ಆಲಿಸಲು ವಿಶೇಷ ನ್ಯಾಯಾಲಯಕ್ಕೆ ತೆರಳಬೇಕಿದ್ದ ಸಚಿವ ಡಿಕೆ ಶಿವಕುಮಾರ್ ಅವರು ಟ್ರಾಫಿಕ್ ಸಮಸ್ಯೆಯಿಂದಾಗಿ ಮಂಗಳವಾರ ನಮ್ಮ ಮೆಟ್ರೋದಲ್ಲಿ ಪ್ರಯಾಣ ಮಾಡಿದರು.
ವಾಲ್ಮೀಕಿ ಸಮುದಾಯದ ಪರಿಶಿಷ್ಟ ಪಂಗಡಕ್ಕೆ ನೀಡುವ ಮೀಸಲಾತಿಯನ್ನು ಶೇ.3 ರಿಂದ ಶೇ. 7.5% ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರದೇಶದಲ್ಲಿ ಹೆವಿ ಟ್ರಾಫಿಕ್ ಕಂಡುಬಂದಿತ್ತು.

ದೆಹಲಿಯಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲಿನ ಆದಾಯ ತೆರಿಗೆ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಇಂದು ತೀರ್ಪು ನೀಡಲಿರುವ ಹಿನ್ನೆಲೆಯಲ್ಲಿ ಡಿಕೆಶಿ ಅವರು ನ್ಯಾಯಾಲಯಕ್ಕೆ ತೆರಳಬೇಕಿತ್ತು.

ನ್ಯಾಯಾಲಯಕ್ಕೆ ತೆರಳಲು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಅವರು ತಕ್ಷಣವೇ ಕಾರಿನಿಂದ ಇಳಿದು, ನಮ್ಮ ಮೆಟ್ರೋ ಮೂಲಕ ಪ್ರಯಾಣಿಸಿಸಿ, ವಿಶೇಷ ನ್ಯಾಯಾಲಯ ತಲುಪಿದರು.












Click it and Unblock the Notifications