Bengaluru IT - BT: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್: ಸಿಲಿಕಾನ್ ಸಿಟಿ ಬಿರುದು ಕೈತಪ್ಪುವ ಆತಂಕ!
Bengaluru IT - BT: ಬೆಂಗಳೂರು ದೇಶದ ಐಟಿ ಕ್ಷೇತ್ರದಲ್ಲೇ ಭಾರೀ ಮುಂಚೂಣಿಯಲ್ಲಿದೆ. ಬೆಂಗಳೂರು ನಗರವನ್ನು ದೇಶದ ಐಟಿ ರಾಜಧಾನಿ, ಸಿಲಿಕಾನ್ ಸಿಟಿ ಎಂದು ಸಹ ಕರೆಯುವುದು ಇದೆ. ಆದರೆ ಕಳೆದ ಕೆಲವು ದಿನಗಳಿಂದ ತೆಲುಗು ರಾಜ್ಯಗಳು ಕರ್ನಾಟಕಕ್ಕೆ ತೀವ್ರ ಪೈಪೋಟಿಯನ್ನು ನೀಡುತ್ತಿವೆ. ತೆಲಂಗಾಣದ ಹೈದರಾಬಾದ್ ಹಾಗೂ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಗರಗಳು ಬೆಂಗಳೂರಿಗೆ ತೀವ್ರ ಪೈಪೋಟಿ ನೀಡುತ್ತಿವೆ. ಈ ರೀತಿ ಇರುವಾಗಲೇ ಹೈದರಾಬಾದ್ ನಗರವು ಬೆಂಗಳೂರು ನಗರವನ್ನು ಹಿಂದಿಕ್ಕಿದ್ದು, ಮುಂದಿನ ದಿನಗಳಲ್ಲಿ "ಸಿಲಿಕಾನ್ ಸಿಟಿ" ಎನ್ನುವ ಬಿರುದು ಹೈದರಾಬಾದ್ ಪಾಲಾಗುವ ಆತಂಕ ಎದುರಾಗಿದೆ.
ದಕ್ಷಿಣ ಭಾರತದಲ್ಲಿ ಐಟಿ - ಬಿಟಿ ವಿಚಾರವಾಗಿ ಕಳೆದ ಎರಡು ದಶಕಕ್ಕೂ ಹೆಚ್ಚು ಅವಧಿಯಿಂದ ಅಖಂಡ ಆಂಧ್ರಪ್ರದೇಶದ ಭಾಗವಾಗಿದ್ದ ಹೈದರಾಬಾದ್ ನಗರ ಹಾಗೂ ಬೆಂಗಳೂರಿನ ನಡುವೆ ಭಾರೀ ಪೈಪೋಟಿ ಇದೆ. ಆದರೆ ಹೈದರಾಬಾದ್ - ಬೆಂಗಳೂರು ನಗರವನ್ನು ಅದರಲ್ಲೂ ಪ್ರಮುಖವಾಗಿ ಐಟಿ - ಬಿಟಿ ಕ್ಷೇತ್ರದಲ್ಲಿ ಹಿಂದಿಕ್ಕುವಂತಹ ಪರಿಸ್ಥಿತಿ ನಿರ್ಮಾಣವಾಗಿಯೇ ಇರಲಿಲ್ಲ. ಆದರೆ ಇದೀಗ ಬದಲಾದ ಸನ್ನಿವೇಶದಲ್ಲಿ ಹೈದರಾಬಾದ್ ನಗರವು ಬೆಂಗಳೂರನ್ನು ಹಿಂದಿಕ್ಕಿದ್ದು, ಸಿಲಿಕಾನ್ ಸಿಟಿ ಎನ್ನುವ ಬ್ರ್ಯಾಂಡ್ ಎಲ್ಲಿ ಕಳೆದುಕೊಳ್ಳಬೇಕಾಗುತ್ತದೆಯೋ ಎನ್ನುವ ಪ್ರಶ್ನೆ ಮೂಡಿದೆ.

UnearthIQ ನಡೆಸಿದ ಅಧ್ಯಯನ ವರದಿಯ ಪ್ರಕಾರ, ವೆಚ್ಚದ ಅನುಕೂಲತೆ, ಮೂಲಸೌಕರ್ಯ ಮತ್ತು ಬ್ಯುಸಿನೆಸ್ - ಪ್ರೋ ಪರಿಸರ ವ್ಯವಸ್ಥೆ ಸೇರಿದಂತೆ ಹಲವು ವಿಷಯಗಳಲ್ಲಿ ಬೆಂಗಳೂರಿಗಿಂತ ಹೈದರಾಬಾದ್ ಪೂರಕವಾಗಿದೆ. ಭಾರತದಲ್ಲಿ GCC ಗಳಲ್ಲಿ ಬೆಂಗಳೂರು ನಗರವನ್ನು ಹೈದರಾಬಾದ್ ಹಿಂದಿಕ್ಕಿದೆ. 2025ನೇ ಸಾಲಿನಲ್ಲಿ ಎಲ್ಲಾ ಹೊಸ GCC ಗಳಲ್ಲಿ ಹೈದರಾಬಾದ್ ರಾಜ್ಯವು ಶೇಕಡಾ 46 ರಷ್ಟನ್ನು ಹೊಂದಿದ್ದರೆ, 2025ನೇ ಸಾಲಿನಲ್ಲಿ ಕರ್ನಾಟಕದ ಬೆಂಗಳೂರು 2025ನೇ ಸಾಲಿನ ಜನವರಿ-ನವೆಂಬರ್ ರಲ್ಲಿ ಶೇ33 ರಷ್ಟು Gcc ಹೊಂದಿದೆ.
ಹೌದು, UnearthIQನ ನವೆಂಬರ್ 2025ರ ಅಧ್ಯಯನದ ಪ್ರಕಾರ, ಹೈದರಾಬಾದ್ ಬೆಂಗಳೂರನ್ನು ಹಿಂದಿಕ್ಕಿದೆ. ಭಾರತದಲ್ಲಿ ಹೊಸ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ (GCC ಗಳು) ಅಗ್ರ ತಾಣವಾಗಿದೆ. ಈ ಬದಲಾವಣೆಗೆ ಹೈದರಾಬಾದ್‌ನ ವೆಚ್ಚದ ಅನುಕೂಲಗಳು, ಉತ್ತಮ ಮೂಲಸೌಕರ್ಯ ಮತ್ತು ತೆಲಂಗಾಣ ಸರ್ಕಾರದ ಬಲವಾದ ಸರ್ಕಾರಿ ನೀತಿಗಳು ಸೇರಿದಂತೆ ಹಲವು ಕಾರಣಕ್ಕೆ ಉದ್ಯಮಿಗಳು, ಹೂಡಿಕೆ ಹೈದರಾಬಾದ್ ಪಾಲಾಗುತ್ತಿವೆ ಅಥವಾ ಹೈದರಾಬಾದ್ ಆಕರ್ಷಿಸುತ್ತಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ಬೆಂಗಳೂರಿಗೆ ಬರಬೇಕಾದ ಬಹುದೊಡ್ಡ ಯೋಜನೆಗಳಲ್ಲಿ ಒಂದಾಗಿರುವ ಎಐ ಹಬ್ ಕೇಂದ್ರವು ಸಹ ಬೆಂಗಳೂರಿನ ಕೈತಪ್ಪಿತ್ತು. ಈ ಯೋಜನೆಯು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದ ಪಾಲಾಗಿತ್ತು.
ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ವರ್ಚಸ್ಸು ಕಳೆದು ಹೋಗದಂತೆ ನೋಡಿಕೊಳ್ಳಬೇಕು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರವು ಕೂಡಲೇ ಎಚ್ಚೆತ್ತುಕೊಳ್ಳಬೇಕು ಎನ್ನುವ ಮಾತುಗಳು ಇದೀಗ ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ.
ಬೆಂಗಳೂರಿಗಿಂತ ಹೈದರಾಬಾದ್ ಮುನ್ನುಗ್ಗುತ್ತಿರುವುದಕ್ಕೆ ಐದು ಪ್ರಮುಖ ಕಾರಣಗಳು
1. ವೆಚ್ಚ - ಪರಿಣಾಮಕಾರಿ: ಬೆಂಗಳೂರಿಗೆ ಹೋಲಿಸಿದರೆ ಹೈದರಾಬಾದ್ ಕಡಿಮೆ ಜೀವನ ವೆಚ್ಚ ಮತ್ತು ಕಾರ್ಯಾಚರಣೆಯ ವೆಚ್ಚವನ್ನು ನೀಡುತ್ತಿದೆ.
2. ಸರ್ಕಾರಿ ನೀತಿ: AI ಕಾರ್ಯಾಚರಣೆಗಳು, ಕೌಶಲ್ಯ ಕಾರ್ಯಕ್ರಮಗಳು ಮತ್ತು ಫಾಸ್ಟ್-ಟ್ರ್ಯಾಕ್ ಕ್ಲಿಯರೆನ್ಸ್‌ಗಳಂತಹ ತೆಲಂಗಾಣ ಸರ್ಕಾರದ ಬೆಂಬಲಿತ ನೀತಿಗಳು ಹೂಡಿಕೆದಾರರ ವಿಶ್ವಾಸವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ.
3. ಮೂಲಸೌಕರ್ಯ ಮತ್ತು ಜೀವನದ ಗುಣಮಟ್ಟ: ಹೈದರಾಬಾದ್ ಆಧುನಿಕ ಮೂಲಸೌಕರ್ಯ ಅಭಿವೃದ್ಧಿಪಡಿಸಿದೆ. ಕಡಿಮೆ ಸಂಚಾರ ದಟ್ಟಣೆ ಮತ್ತು ಕಡಿಮೆ ಮಾಲಿನ್ಯ ಇರುವುದು ಪ್ಲಸ್ ಪಾಯಿಂಟ್ಸ್ ಆಗಿದೆ. ಅಲ್ಲದೇ ಉತ್ತಮ ಗುಣಮಟ್ಟದ ಜೀವನ ಸಾಧ್ಯವಾಗುತ್ತಿದೆ ಎನ್ನುವ ಅಂಶವು ಕಂಪನಿಗಳು ಮತ್ತು ಉದ್ಯೋಗಿಗಳಿಗೆ ಆಕರ್ಷಕವಾಗಿ ಕಾಣುತ್ತಿದೆ.
4. ಪ್ರತಿಭಾವಂತರು: ಬೆಂಗಳೂರು ಐತಿಹಾಸಿಕವಾಗಿ ಪ್ರಬಲವಾಗಿದ್ದರೂ, ಹೈದರಾಬಾದ್ ಈಗ ಹಣಕಾಸು, ಜೀವ ವಿಜ್ಞಾನ ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದೆ ಎಂದು ಹೇಳಲಾಗಿದೆ.
5. ಅನುಕೂಲಕರ ಗುತ್ತಿಗೆ ಮಾರುಕಟ್ಟೆ: ಹೈದರಾಬಾದ್ 2024 ರಲ್ಲಿ ದಾಖಲೆಯ GCC ಕಚೇರಿ ಗುತ್ತಿಗೆಯನ್ನು ಕಂಡಿದೆ. GCCಗಳು ನಗರದ ಒಟ್ಟು ಕಚೇರಿ ಗುತ್ತಿಗೆಯಲ್ಲಿ ಗಮನಾರ್ಹ ಭಾಗವನ್ನು ಹೊಂದಿವೆ ಎಂದು ಹೇಳಲಾಗಿದೆ.
-
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ..












Click it and Unblock the Notifications