ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಿಐಪಿ ಸೇವೆ: ಇನ್ಮುಂದೆ ಮನೆಯಿಂದಲೇ ಲಗೇಜ್ ಪಿಕ್-ಅಪ್

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (KIA)ದಿಂದ ದೇಶ ವಿದೇಶಗಳಿಗೆ ಪ್ರಯಾಣಿಸುವವರಿಗೆ ಇದೀಗ ಒಂದು ಭರ್ಜರಿ ಸಿಹಿಸುದ್ದಿ ಕಾದಿದೆ. ವಿಮಾನ ನಿಲ್ದಾಣಕ್ಕೆ ಹೋಗುವಾಗ ಭಾರೀ ಲಗೇಜ್ ಹೊತ್ತುಕೊಂಡು ಟ್ರಾಫಿಕ್‌ನಲ್ಲಿ ಪರದಾಡುವ ದಿನಗಳು ಶೀಘ್ರದಲ್ಲೇ ದೂರವಾಗಲಿವೆ.

ಹೌದು, ಪ್ರಯಾಣಿಕರ ಅನುಕೂಲಕ್ಕಾಗಿ ವಿಮಾನ ನಿಲ್ದಾಣದ ಆಡಳಿತ ಮಂಡಳಿಯು ತನ್ನ ಕೇರ್ ಬೈ ಬಿಎಲ್ಆರ್ ಎಂಬ ವಿನೂತನ ಯೋಜನೆಯನ್ನ ಮತ್ತಷ್ಟು ವಿಸ್ತರಿಸಲು ಮುಂದಾಗಿದೆ. ಈ ಯೋಜನೆಯಡಿ, ನಿಮ್ಮ ಮನೆಯಿಂದಲೇ ವಿಮಾನ ನಿಲ್ದಾಣದವರೆಗೆ ಒಳ್ಳೆಯ ರಾಜಾತಿಥ್ಯ ಸಿಗಲಿದೆ ನೋಡಿ.

Bengaluru International Airport New Care by BLR Plan Experience Home Baggage Pickup amp amp Chauffeur Services

ಮನೆಯಿಂದಲೇ ಲಗೇಜ್ ಪಿಕ್-ಅಪ್ ಮತ್ತು ಹೋಮ್ ಚೆಕ್-ಇನ್ ಸರ್ವಿಸ್‌

ಹೊಸದಾಗಿ ಪ್ರಸ್ತಾಪಿಸಲಾಗಿರುವ ಈ ಯೋಜನೆಯ ಒಂದು ವಿಶೇಷ ಎಂದರೆ 'ಹೋಮ್ ಚೆಕ್-ಇನ್' ಸೇವೆ. ಹೌದು, ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಹೊರಡುವ ಮುನ್ನ ಅವರನ್ನ ಎಚ್ಚರಿಸಲು ವೇಕ್-ಅಪ್ ಕಾಲ್ ನೀಡಲಾಗುತ್ತದೆ. ಬಳಿಕ ವಿಮಾನ ನಿಲ್ದಾಣದ ಸಿಬ್ಬಂದಿಯೇ ನಿಮ್ಮ ಮನೆ ಬಾಗಿಲಿಗೆ ಬಂದು ಲಗೇಜ್ ಸಂಗ್ರಹಿಸುತ್ತಾರೆ.

ಅಷ್ಟೇ ಅಲ್ಲದೆ, ಪ್ರಯಾಣಿಕರನ್ನು ಮನೆಯಿಂದ ವಿಮಾನ ನಿಲ್ದಾಣಕ್ಕೆ ಕರೆದೊಯ್ಯಲು ವಿಶೇಷ ಚಾಲಕ ಚಾಲಿತ (Chauffeur-driven) ವಾಹನದ ವ್ಯವಸ್ಥೆಯನ್ನ ಸಹ ಮಾಡಲಾಗುತ್ತದೆ. ಒಮ್ಮೆ ನೀವು ಏರ್‌ಪೋರ್ಟ್ ತಲುಪಿದ ಮೇಲೆ, ಮುಂದಿನ ಎಲ್ಲಾ ತಪಾಸಣಾ ಪ್ರಕ್ರಿಯೆಗಳನ್ನ ಕೇರ್ ಬೈ ಬಿಎಲ್ಆರ್ ತಂಡವೇ ನಿಭಾಯಿಸಲಿದೆ. ಇದರಿಂದ ಪ್ರಯಾಣಿಕರ ಮೇಲಿನ ಒತ್ತಡ ಗಣನೀಯವಾಗಿ ಕಡಿಮೆಯಾಗಲಿದೆ.

ಮೊದಲ ಬಾರಿ ಪ್ರಯಾಣಿಸುವವರಿಗೆ ಪರ್ಸನಲ್ ಶಾಪರ್ ಸೌಲಭ್ಯ

ಈ ಯೋಜನೆಯ ಮತ್ತೊಂದು ಪ್ರಮುಖ ಸೇವೆ ಎಂದರೆ 'ಪರ್ಸನಲ್ ಶಾಪರ್ʼ. ವಿಮಾನ ನಿಲ್ದಾಣಕ್ಕೆ ಹೊಸದಾಗಿ ಬರುವವರಿಗೆ ಅಥವಾ ಒಳಗೆ ಇರುವ ಬೃಹತ್ ಮಳಿಗೆಗಳು ಮತ್ತು ಫುಡ್ ಕೋರ್ಟ್‌ಗಳ ಬಗ್ಗೆ ಅರಿವಿಲ್ಲದವರಿಗೆ ಸಹಾಯ ಮಾಡಲು ಈ ಸೇವೆ ಜಾರಿಗೆ ತರಲಾಗುತ್ತಿದೆ.

ಕೇರ್ ಬೈ ಬಿಎಲ್ಆರ್ ಸಿಬ್ಬಂದಿ ಪ್ರಯಾಣಿಕರ ಜೊತೆಗಿದ್ದು, ಅವರಿಗೆ ಇಷ್ಟವಾದ ಆಹಾರ ಆಯ್ಕೆ ಮಾಡಲು ಮತ್ತು ಶಾಪಿಂಗ್ ಮಾಡಲು ಮಾರ್ಗದರ್ಶನ ನೀಡಲಿದ್ದಾರೆ. ಇದು ವಿಶೇಷವಾಗಿ ವಯಸ್ಸಾದವರಿಗೆ, ಒಂಟಿಯಾಗಿ ಪ್ರಯಾಣಿಸುವವರಿಗೆ ಹಾಗೂ ಮೊದಲ ಬಾರಿ ವಿಮಾನ ನಿಲ್ದಾಣಕ್ಕೆ ಆಗಮಿಸುವವರಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದು ಕೇರ್ ಬೈ ಬಿಎಲ್ಆರ್ ಬ್ರ್ಯಾಂಡ್ ಹೆಡ್ ಆಗಿರುವ ನೋಯೆಲ್ ಪ್ಯಾಟ್ರಿಕ್ ಲುಯಿಸ್ ತಿಳಿಸಿದ್ದಾರೆ.

ಭದ್ರತಾ ತಪಾಸಣೆ ವೇಳೆ ಕೊರಿಯರ್ ಸೇವೆ

ನಿಯಮಗಳ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ಮಾಡುವಾಗ ಕೆಲವು ನಿರ್ದಿಷ್ಟ ವಸ್ತುಗಳನ್ನ ಒಳಗೆ ತೆಗೆದುಕೊಂಡು ಹೋಗಲು ಅವಕಾಶವಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಪ್ರಯಾಣಿಕರು ಆ ವಸ್ತುಗಳನ್ನ ಅಲ್ಲೇ ಕಸದ ಬುಟ್ಟಿಗೆ ಬಿಸಾಕಿ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ.

ಈ ಸಮಸ್ಯೆಯನ್ನು ಬಗೆಹರಿಸಲು ವಿಮಾನ ನಿಲ್ದಾಣವು ಹೊಸದಾಗಿ ಕೊರಿಯರ್ ಸೇವೆಯನ್ನು ಪರಿಚಯಿಸಲು ಚಿಂತಿಸಿದೆ. ತಪಾಸಣೆ ವೇಳೆ ತಿರಸ್ಕರಿಸಲ್ಪಟ್ಟ ನಿಮ್ಮ ಪ್ರಮುಖ ವಸ್ತುಗಳನ್ನು ಸುರಕ್ಷಿತವಾಗಿ ಕೊರಿಯರ್ ಮೂಲಕ ನಿಮ್ಮ ಮನೆಗೆ ಅಥವಾ ನೀವು ಸೂಚಿಸಿದ ಬೇರೆ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆಯನ್ನ ಈ ಸೇವೆ ಒದಗಿಸಲಿದೆ.

ಒಟ್ಟಾರೆಯಾಗಿ, ಪ್ರಯಾಣಿಕರ ಸಂಪೂರ್ಣ ಪ್ರಯಾಣವನ್ನು ಆರಂಭದಿಂದ ಅಂತ್ಯದವರೆಗೆ ಅತ್ಯಂತ ಆರಾಮದಾಯಕ ಹಾಗೂ ಸುಗಮವಾಗಿಸಲು ಬೆಂಗಳೂರು ವಿಮಾನ ನಿಲ್ದಾಣ ಈ ಅದ್ಭುತ ಯೋಜನೆಗಳನ್ನು ಶೀಘ್ರದಲ್ಲೇ ಜಾರಿಗೆ ತರಲು ಸಜ್ಜಾಗಿದೆ.

ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಗ್ರಾಹಕ ಸ್ನೇಹಿ ಸೇವೆಗಳಲ್ಲಿ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸುವುದು ಖಚಿತ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+