Bengaluru: ನವೆಂಬರ್ 1ರಿಂದ ಜಿಬಿಎ ವಾರ್ಡ್ ಒನ್ ಅಭಿಯಾನ ಆರಂಭ: ಮಹೇಶ್ವರ್ ರಾವ್ ಹೇಳಿದ್ದೇನು

ಬೆಂಗಳೂರು: ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ನವೆಂಬರ್ 1ರಿಂದ ಹೊಸ ಅಭಿಯಾನ ಪ್ರಾರಂಭಿಸುವುದಕ್ಕೆ ಮುಂದಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಹತ್ವದ ಅಪ್ಡೇಟ್ಸ್‌ ಕೊಟ್ಟಿದ್ದಾರೆ. ಜಿಬಿಎ ವಾರ್ಡ್ ಒನ್ ಅಭಿಯಾನದ ಸಿದ್ಧತೆ ಚುರುಕುಗೊಳಿಸುವುದಕ್ಕೆ ಮಹೇಶ್ವರ ರಾವ್ ಸೂಚನೆ ಕೊಟ್ಟಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನವೆಂಬರ್ 1ರಿಂದ ಆರಂಭವಾಗಲಿರುವ ವಾರ್ಡ್ ಒನ್ ಅಭಿಯಾನದ ಪೂರ್ವಸಿದ್ಧತೆಗಳನ್ನು ಸಮರ್ಪಕವಾಗಿ ಕೈಗೊಳ್ಳಬೇಕು. ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯ ಸಾಧಿಸಿ, ವಾರ್ಡ್‌ವಾರು ಕಾರ್ಯಯೋಜನೆ ಸಿದ್ಧಪಡಿಸುವಂತೆ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Bengaluru GBA Ward One Campaign to Begin on November 1 Maheshwar Rao Shares Details

ಮುಂದುವರಿದು ವಾರ್ಡ್ ಒನ್ ಅಭಿಯಾನದ ಪೂರ್ವಸಿದ್ಧತೆಗಳ ಕುರಿತು ಅಕ್ಟೋಬರ್ 29ರ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಯ್ಕೆಯಾದ ವಾರ್ಡ್‌ಗಳಲ್ಲಿ ಕೈಗೊಳ್ಳಬೇಕಿರುವ ಕಾಮಗಾರಿಗಳನ್ನು ಗುರುತಿಸಿ, ಅವುಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಯಾವ ದಿನ ಯಾವ ವಾರ್ಡ್‌ನಲ್ಲಿ ಯಾವ ಕಾರ್ಯ ಕೈಗೊಳ್ಳಲಾಗುವುದು ಎಂಬುದರ ಕುರಿತು ನಿಖರವಾದ ಕಾರ್ಯಯೋಜನೆ ರೂಪಿಸಿ ಸಲ್ಲಿಸುವಂತೆ ಐದು ನಗರ ಪಾಲಿಕೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ವಾರ್ಡ್‌ವಾರು ಸಮಗ್ರ ಅಭಿವೃದ್ಧಿಗೆ ಆದ್ಯತೆ

ನವೆಂಬರ್ 1ರಿಂದ ಆರಂಭವಾಗಲಿರುವ ಅಭಿಯಾನದಡಿ ಆಯ್ಕೆಯಾದ ವಾರ್ಡ್‌ಗಳಲ್ಲಿ ರಸ್ತೆ ಮತ್ತು ಜಂಕ್ಷನ್‌ಗಳ ದುರಸ್ತಿ, ರಸ್ತೆ ಗುಂಡಿಗಳ ಮುಚ್ಚುವಿಕೆ, ತೀವ್ರ ಸ್ವಚ್ಛತಾ ಕಾರ್ಯ, ಪಾದಚಾರಿ ಮಾರ್ಗಗಳ ಕರ್ಬ್‌ಸ್ಟೋನ್‌ಗಳು ಹಾಗೂ ಸ್ಲ್ಯಾಬ್‌ಗಳ ದುರಸ್ತಿ, ಒಳಚರಂಡಿ ಚೇಂಬರ್‌ಗಳ ಮುಚ್ಚಳಗಳ ದುರಸ್ತಿ, ಬೀದಿ ದೀಪಗಳ ದುರಸ್ತಿ, ಒಣಗಿದ ಮರದ ರೆಂಬೆ-ಕೊಂಬೆಗಳ ತೆರವು ಹಾಗೂ ತ್ಯಾಜ್ಯ ಮತ್ತು ಮಣ್ಣಿನ ರಾಶಿಗಳ ತೆರವು ಕಾರ್ಯಗಳಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಜಲಮಂಡಳಿ ಮತ್ತು ಬೆಸ್ಕಾಂ ನೋಡಲ್ ಅಧಿಕಾರಿಗಳ ನಿಯೋಜನೆ

ವಾರ್ಡ್ ಒನ್ ಅಭಿಯಾನದ ಸುಗಮ ಅನುಷ್ಠಾನಕ್ಕಾಗಿ ಆಯ್ಕೆಯಾದ ವಾರ್ಡ್‌ಗಳಿಗೆ ಸಂಬಂಧಿಸಿದಂತೆ ಜಲಮಂಡಳಿ ಹಾಗೂ ಬೆಸ್ಕಾಂ ವತಿಯಿಂದ ನೋಡಲ್ ಅಧಿಕಾರಿಗಳನ್ನು ನಿಯೋಜಿಸಬೇಕು. ನಗರ ಪಾಲಿಕೆಗಳ ಕಾರ್ಯಪಾಲಕ ಅಭಿಯಂತರರು ಹಾಗೂ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವಂತೆ ಸೂಚಿಸಿದ್ದಾರೆ.

ಜಲಮಂಡಳಿಯ ವತಿಯಿಂದ ಪೈಪ್‌ಲೈನ್ ಕಾಮಗಾರಿಗಳಿಗಾಗಿ ಕತ್ತರಿಸಲಾದ ರಸ್ತೆಗಳ ವಿವರಗಳನ್ನು ಸಂಗ್ರಹಿಸಿ ಸಲ್ಲಿಸಬೇಕು. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಪಟ್ಟ ನಗರ ಪಾಲಿಕೆಗಳೊಂದಿಗೆ ಸಮನ್ವಯ ಸಾಧಿಸಿ, ಹಾನಿಗೊಳಗಾದ ರಸ್ತೆಗಳನ್ನು ದುರಸ್ತಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಬಿಡಾಡಿ ವಾಹನಗಳ ತೆರವು ಮತ್ತು ಹರಾಜಿಗೆ ಕ್ರಮ

ಸಾರ್ವಜನಿಕ ಸ್ಥಳಗಳು ಹಾಗೂ ರಸ್ತೆಗಳಲ್ಲಿ ದೀರ್ಘಕಾಲದಿಂದ ನಿಲುಗಡೆ ಮಾಡಿರುವ ಬಿಡಾಡಿ ವಾಹನಗಳನ್ನು ನಿಯಮಾನುಸಾರ ತೆರವುಗೊಳಿಸಬೇಕು. ವಾಹನಗಳಿಗೆ ನೋಟಿಸ್ ಅಂಟಿಸಿ, ಟೋಯಿಂಗ್ ಮಾಡಿದ ಬಳಿಕ ನಿಯಮಾನುಸಾರ ನಿಗದಿತ ಕಾಲಾವಕಾಶ ನೀಡಬೇಕು. ಈ ಅವಧಿಯೊಳಗೆ ಮಾಲೀಕರು ದಂಡ ನೀಡಿ ವಾಹನಗಳನ್ನು ಹಿಂಪಡೆಯದಿದ್ದಲ್ಲಿ, ಅನ್ವಯಿಸುವ ನಿಯಮಗಳ ಪ್ರಕಾರ ವಾಹನಗಳನ್ನು ಹರಾಜು ಹಾಕಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+