• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಪ್ರವಾಹ: 9 ಮಂದಿ ವಿಪತ್ತು ನಿರ್ವಹಣಾಧಿಕಾರಿ ನೇಮಕಕ್ಕೆ ಮುಂದಾದ ಬಿಬಿಎಂಪಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 05: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷ ಭಾರಿ ಪ್ರವಾಹ, ನೆರೆ ಭೀತಿ ಉಂಟಾಗಿದ್ದರ ಹಿನ್ನೆಲೆಯಲ್ಲಿ ಬಿಬಿಎಂಪಿ ಇದೀಗ ಒಂಬತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳನ್ನು ನೇಮಕಕ್ಕೆ ನಿರ್ಧರಿಸಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರದಲ್ಲಿ ಭವಿಷ್ಯದಲ್ಲಿ ಉಂಟಾಗುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಆದಷ್ಟು ಶೀಘ್ರವೇ ಒಂಬತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳನ್ನು ನೇಮಿಸಲಿದೆ. ಈ ಸಂಬಂಧ ಕಾರ್ಯಕಾರಿ ಸಮಿತಿಯು ಹೊಸ ಸಿಬ್ಬಂದಿ ನೇಮಕಾತಿಗಾಗಿ ಸಲ್ಲಿಸಿದ್ದ ಪ್ರಸ್ತಾವನೆಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು (ಕೆಎಸ್‌ಡಿಎಂಎ) ಅನುಮೋದನೆ ನೀಡಿದೆ.

ಬೆಂಗಳೂರಿಗೆ ಕಳೆದ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿರಂತವಾಗಿ ಭಾರಿ ಮಳೆ ಸುರಿದಿತ್ತು. ಅದರಿಂದ ಬೆಂಗಳೂರು ಎಂದೂ ಕಂಡರಿಯದ ಪ್ರವಾಹಕ್ಕೆ ಸಾಕ್ಷಿಯಾಗಿತ್ತು. ಈ ಹಿನ್ನೆಲೆಯಲ್ಲಿ ಭವಿಷ್ಯದ ದೃಷ್ಟಿಯಿಂದ ಬಿಬಿಎಂಪಿ ಈ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚೆಗೆ ಪ್ರವಾಹ ಉಂಟಾದ ಸಂದರ್ಭದಲ್ಲಿ 7,000 ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಅದರಲ್ಲಿ 170 ಮನೆಗಳು ಭಾಗಶಃ ಹಾನಿಗೀಡಾಗಿದ್ದವು. ಸುಮಾರು 350 ಕಿಮೀ ರಸ್ತೆಗಳು ನಾಶವಾಗಿದೆ. ಒಟ್ಟಾರೆ 350 ಕೋಟಿಗೂ ಹೆಚ್ಚು ನಷ್ಟವಾಗಿದೆ.

ವಿಪತ್ತು ನಿರ್ವಹಣಾ ಸಂಯೋಜಕ ಹುದ್ದೆ ಖಾಲಿ

ವಿಪತ್ತು ನಿರ್ವಹಣಾ ಸಂಯೋಜಕ ಹುದ್ದೆ ಖಾಲಿ

ಬಿಬಿಎಂಪಿ ಈಗಾಗಲೇ ಒಬ್ಬರು ವಿಪತ್ತು ನಿರ್ವಹಣಾ ಸಂಯೋಜಕರನ್ನು ಹೊಂದಿದೆ. ಸದ್ಯ ಆ ಹುದ್ದೆ ಖಾಲಿಯಾಗಿದೆ. ಈ ಹುದ್ದೆಯನ್ನು ಭರ್ತಿ ಮಾಡಿಕೊಳ್ಳಲು ಬಿಬಿಎಂಪಿ ಪಾಲಿಕೆಯು ಸೆಪ್ಟೆಂಬರ್ 30 ರಂದು ಅಧಿಸೂಚನೆ ಹೊರಡಿಸಿತ್ತು. ಇದರೊಂದಿಗೆ ಹೊಸದಾಗಿ ಮತ್ತು ಹಳೆಯ ಸೇರಿ ಒಟ್ಟು ಹತ್ತು ಮಂದಿ ಅಧಿಕಾರಿಗಳು ನೇಮಕವಾಗಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಬಿಎಂಪಿಯ ಹೊಸದಾಗಿ ವಿಪತ್ತು ನಿರ್ವಹಣಾ ಅಧಿಕಾರಿಗಳ ನೇಮಕಾತಿಗೆ ಕೆಎಸ್‌ಡಿಎಂಎ ಒಪ್ಪಿಗೆ ಸೂಚಿಸಿದೆ.ಈ ಸಂಬಂಧ ಅನುಮೋದನೆಯ ಕಡತವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಶೀಲಿಸಬೇಕಿದೆ. ಇದೆಲ್ಲ ಮುಗಿದು ಆದೇಶ ಹೊರಬಿದ್ದ ತಕ್ಷಣವೇ ನಾವು ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ಬೆಂಗಳೂರು: ಅಕ್ರಮ ಕಟ್ಟಡ: ತೆರವು ಮಾಡದೇ ಬಿಬಿಎಂಪಿ ನಿರ್ಲಕ್ಷ್ಯ, ಮಾಹಿತಿ ಕೇಳಿದ ಲೋಕಾಯುಕ್ತಬೆಂಗಳೂರು: ಅಕ್ರಮ ಕಟ್ಟಡ: ತೆರವು ಮಾಡದೇ ಬಿಬಿಎಂಪಿ ನಿರ್ಲಕ್ಷ್ಯ, ಮಾಹಿತಿ ಕೇಳಿದ ಲೋಕಾಯುಕ್ತ

ಎಂಟು ಮಂದಿ ಜತೆ ಇಬ್ಬರು ಸಮನ್ವಯ

ಎಂಟು ಮಂದಿ ಜತೆ ಇಬ್ಬರು ಸಮನ್ವಯ

ಒಟ್ಟು 10 ಮಂದಿ ವಿಪತ್ತು ನಿರ್ವಹಣಾ ಅಧಿಕಾರಿಗಳಲ್ಲಿ ಎಂಟು ಮಂದಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ನೇಮಕವಾಗಲಿದ್ದಾರೆ. ಉಳಿದಂತೆ ಇಬ್ಬರು ಅಧಿಕಾರಿಗಳು ಆ ಎಂಟು ಮಂದಿ ಜತೆ ನಿರಂತರವಾಗಿ ಸಮನ್ವಯ ಸಾಧಿಸಲಿದ್ದಾರೆ. ಈ ಮೂಲಕ ಮಳೆಯಿಂದಾಗಿ ತೊಂದರೆ ಉಂಟಾಗದಂತೆ ನೋಡಿಕೊಳ್ಳಲಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ವಿವರಿಸಿದರು.

ಅದಕ್ಕು ಮೊದಲು ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಳ್ಳಬೇಕಿದೆ. ನಂತರ ಪ್ರವಾಹವನ್ನು ತಡೆಗಟ್ಟಲು ಮತ್ತು ತ್ವರಿತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮಳೆ, ಪ್ರವಾಹ, ನಗರದ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ. ಬಿಬಿಎಂಪಿಯಲ್ಲಿ ವಿಪತ್ತು ನಿರ್ವಹಣಾ ಸಂಯೋಜಕರ ಒಂದು ಹುದ್ದೆ ಇದ್ದರೂ ಅದಕ್ಕೆ ಮೀಸಲಾದ ತಂಡವೇ ಇಲ್ಲ ಎಂದು ಅವರು ಹೇಳಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ

ಸೆಪ್ಟೆಂಬರ್ ಪ್ರವಾಹದ ಸಂದರ್ಭದಲ್ಲಿ ಬಿಬಿಎಂಪಿಗೆ ಸಮರ್ಪಿತ ಅಧಿಕಾರಿಗಳ ತಂಡದ ಅಗತ್ಯವಿತ್ತು. ಈ ಕಾರಣಕ್ಕಾಗಿಯೇ ಪ್ರಸ್ತಾವನೆ ಕಳುಹಿಸಲಾಗಿತ್ತು. ನೇಮಕವಾಗುವ ಹತ್ತು ಮಂದಿ ಅಧಿಕಾರಿಗಳು ಬಿಬಿಎಂಪಿ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಅವರ ಮಾಸಿಕ ವೇತನವನ್ನು ಸಂಬಳವನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಪಾವತಿಸುತ್ತದೆ ಎಂದು ಅವರು ಹೇಳಿದರು.

ದೂರದೃಷ್ಟಿಯತ್ತ ಬಿಬಿಎಂಪಿ ಚಿತ್ತ

ದೂರದೃಷ್ಟಿಯತ್ತ ಬಿಬಿಎಂಪಿ ಚಿತ್ತ

ಬೆಂಗಳೂರಿಗೆ ಐದು ದಶಕದಲ್ಲೇ ಅತ್ಯಧಿಕ ಭಾರಿ ಮಳೆ ಸುರಿದ ಪರಿಣಾಮ ಇಲ್ಲಿನ ವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆ, ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೆ ಬಿಬಿಎಂಪಿಯು ಸಾಕಷ್ಟು ಪರಿಹಾರೋಪಾಯಗಳನ್ನು ಕಂಡು ಕೊಂಡಿದೆ. ಇದರ ಭಾಗವಾಗಿ ಇದೀಗ 9ಮಂದಿ ಅಧಿಕಾರಿಗಳ ನೇಮಕಕ್ಕೆ ಮುಂದಾಗಿದೆ. ಈ ಮೂಲಕ ಬೆಂಗಳೂರಿನಲ್ಲಿ ಭವಿಷ್ಯದಲ್ಲಿ ಪ್ರವಾಹ, ನೆರೆ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಬಿಬಿಎಂಪಿ ದೃಷ್ಟಿ ಹರಿಸಿದೆ.

English summary
Bengaluru flood. Bruhat Bengaluru Mahanagara Palike (BBMP) will 9 nine disaster management officer appoint soon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X