Ejipura Flyover: 'ಚೀನಾದಲ್ಲಿ 5 ತಿಂಗಳಲ್ಲಿ ರೆಡಿಯಾಗೋ ಫ್ಲೈಓವರ್‌ ಈಜಿಪುರದಲ್ಲಿ 10 ವರ್ಷವಾದ್ರೂ ಆಗ್ತಿಲ್ಲ'

ದಶಕ ಪೂರೈಸುತ್ತಿರುವ ಬೆಂಗಳೂರಿನ ಈಜಿಪುರ ಮೇಲ್ಸೇತುವೆ ಕಾಮಗಾರಿ ವಿಳಂಬದ ಬಗ್ಗೆ ನಗರವಾಸಿಗಳು ಹಿಡಿಶಾಪ ಹಾಕುತ್ತಲೇ ನಿತ್ಯ ಈ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಲೇ ಇವೆ. ಈಜಿಪುರ ಫ್ಲೈಓವರ್‌ ಅನ್ನು ಭ್ರಷ್ಟಾಚಾರದ ಸ್ಮಾರಕ, ಪಾರಂಪರಿಕ ತಾಣವನ್ನಾಗಿ ಘೋಷಿಸಿ ಎಂದು ವ್ಯಂಗ್ಯ ಮಾಡುತ್ತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಇದೀಗ ಚೀನಾದಲ್ಲಿ ಒಂದು ಫ್ಲೈಓವರ್‌ ಕೆಡವಲು ಕೇವಲ ಎರಡು ಗಂಟೆ ಸಾಕು, ಅದನ್ನು ಮತ್ತೆ ಕೇವಲ ಐದು ತಿಂಗಳಲ್ಲಿ ನಿರ್ಮಿಸಲಾಗಿದೆ ಎಂದು ವಿಡಿಯೋ ಹಂಚಿಕೊಂಡಿದ್ದಾರೆ. ಹತ್ತು ವರ್ಷ ಕಳೆಯುತ್ತಾ ಬಂದರೂ ಈಜಿಪುರ ಫ್ಲೈಓವರ್‌ ಕಾಮಗಾರಿ ಏಕೆ ಪೂರ್ಣಗೊಂಡಿಲ್ಲ ಎಂದು ದಂಡಿಸಲು ಶುರು ಮಾಡಿದ್ದಾರೆ.

ಚೀನಾದಂತಹ ದೇಶಗಳು ಕೇವಲ ಐದು ತಿಂಗಳಲ್ಲಿ ಬೃಹತ್ ಫ್ಲೈಓವರ್‌ಗಳನ್ನು ನಿರ್ಮಿಸುತ್ತಿವೆ. ಆದರೆ ಬೆಂಗಳೂರಿನ ಈಜಿಪುರ ಫ್ಲೈಓವರ್ 2017ರಿಂದಲೂ ಆಮೆಗತಿಯಲ್ಲಿ ತೆವಳುತ್ತಿದೆ. ಒಂದು ದಶಕ ಕಳೆಯುತ್ತಿದ್ದರೂ ಕೇವಲ ಶೇ 10ರಷ್ಟು ಕೆಲಸ ಕೂಡ ಸರಿಯಾಗಿ ಪೂರ್ಣಗೊಂಡಿಲ್ಲ. ಇದು ಭ್ರಷ್ಟಾಚಾರ ಹಾಗೂ ಸರ್ಕಾರಗಳಿಂದ ಸಾರ್ವಜನಿಕ ಸಮಸ್ಯೆಗಳನ್ನು ನಿರ್ಲಕ್ಷಿಸುವುದರ ಸ್ಪಷ್ಟ ಸಂಕೇತ ಎಂದು ದೂರುತ್ತಿದ್ದಾರೆ.

Bengaluru Ejipura Flyover Delay Sparks Criticism As China Builds In 5 Months

ಸೋಶಿಯಲ್‌ ಮೀಡಿಯಾದಲ್ಲಿ ಚೀನಾದ ವಿಡಿಯೋವೊಂದನ್ನು ಹಂಚಿಕೊಂಡಿರುವ ಬೆಂಗಳೂರಿಗರು, ಅಲ್ಲಿ ಫ್ಲೈಓವರ್‌ ಎರಡನೇ ದಿನದಲ್ಲಿ ಕೆಡವಿ ಐದು ತಿಂಗಳಲ್ಲಿ ವೇಗವಾಗಿ ನಿರ್ಮಿಸುವುದನ್ನು ಈಜಿಪುರ ಫ್ಲೈಓವರ್‌ನ ಈಗಿನ ಸ್ಥಿತಿಗತಿಯೊಂದಿಗೆ ಹೋಲಿಸಿಕೊಂಡಿದ್ದಾರೆ. ಎರಡೂ ಕೂಡ ಫ್ಲೈಓವರ್‌ ಕಾಮಗಾರಿಯೇ, ಆದರೆ ಅಲ್ಲಿನ ವೇಗವಾಗಿ ಕೆಲಸ ಮಾಡುತ್ತಾರೆ. ನಮ್ಮಲ್ಲಿ ಒಂದು ದಶಕ ಕಳೆಯುತ್ತಾ ಬಂದರೂ ಫ್ಲೈಓವರ್‌ ಆಗಿಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Take a Poll

ಈ ಯೋಜನೆಯ ಹಿಂದಿನ ಮೂಲ ಉದ್ದೇಶ ಕೋರಮಂಗಲ-ಈಜಿಪುರ ಪ್ರದೇಶದಲ್ಲಿನ ದೀರ್ಘಕಾಲದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದು. ಆದರೆ ವಿಪರ್ಯಾಸವೆಂದರೆ ಈ ಫ್ಲೈಓವರ್‌ ಈ ಪ್ರದೇಶದಲ್ಲಿ ಸಂಚಾರ ದಟ್ಟಣೆಗೆ ಅತಿ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಸಾರ್ವಜನಿಕರಿಗೆ ಪರಿಹಾರ ನೀಡುವ ಬದಲು, ಈ ಅಪೂರ್ಣ ಅವ್ಯವಸ್ಥೆ ಸಾವಿರಾರು ಪ್ರಯಾಣಿಕರು ಮತ್ತು ಸ್ಥಳೀಯ ನಿವಾಸಿಗಳಿಗೆ ಅವ್ಯವಸ್ಥೆ, ಧೂಳು, ಮಾಲಿನ್ಯದಂತಹ ಸಮಸ್ಯೆಗಳನ್ನು ತಂದಿಟ್ಟಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕಾಮಗಾರಿ ಶುರುವಾದಾಗಿನಿಂದ ಹಲವು ಸರ್ಕಾರಗಳು ಬಂದು ಹೋಗಿವೆ. ಪ್ರತಿ ಚುನಾವಣೆಗೂ ಮೊದಲು ಭರವಸೆಗಳನ್ನು ನೀಡಿ, ರಾಜಕೀಯ ನಾಯಕರು ಫೋಟೋ ತೆಗೆಸಿಕೊಂಡಿದ್ದಾರೆ. ಆದರೆ ಇಲ್ಲಿನ ವಾಸ್ತವ ಚೂರು ಕೂಡ ಬದಲಾಗಿಲ್ಲ ಆಕ್ರೋಶ ಹೊರಹಾಕುತ್ತಿದ್ದಾರೆ.

ತೆರೆದ ಸ್ಥಳದಲ್ಲಿ ತುಕ್ಕು ಹಿಡಿಯುತ್ತಿರುವ ಉಕ್ಕಿನ ಕಂಬಗಳು, ಅಡ್ಡಾದಿಡ್ಡಿಯಾಗಿ ಬಿದ್ದಿರುವ ಬ್ಯಾರಿಕೇಡ್‌ಗಳು, ಅಗೆದ ರಸ್ತೆಗಳಿಂದ ವಾಹನ ಸವಾರರು ಬೇಸತ್ತಿದ್ದಾರೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಹೇಳಲಾಗುವ ನಗರದಲ್ಲಿ ಒಂದೇ ಫ್ಲೈಓವರ್‌ಗೆ 10 ವರ್ಷ ವಿಳಂಬವನ್ನು ಯಾವ ನೆಪ ಸಮರ್ಥಿಸಲು ಸಾಧ್ಯ? ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್‌ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಜಾಗತಿಕ ತಂತ್ರಜ್ಞಾನ ಕೇಂದ್ರಕ್ಕೆ ಅರ್ಹವಾದ ಮೂಲಸೌಕರ್ಯ ಇದೇನಾ? ಹೊಣೆಗಾರಿಕೆ ಎಲ್ಲಿದೆ? ಇದು ಕೇವಲ ವಿಫಲ ಯೋಜನೆಯಲ್ಲ, ಇದು ನಾವು ವಾಸಿಸುವ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದು ದೂರುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+