Bengaluru Property: 2026ರಲ್ಲಿ ಬೆಂಗಳೂರಿನ ಈ ಭಾಗದಲ್ಲಿ ಪ್ರಾಪರ್ಟಿ ಖರೀದಿ, ಹೂಡಿಕೆಗೆ ಬೆಸ್ಟ್
ಬೆಂಗಳೂರು: ಬೆಂಗಳೂರಿನಲ್ಲಿ ಆಸ್ತಿಗಳ ಮೇಲೆ ಹೂಡಿಕೆ ಹಾಗೂ ಆಸ್ತಿ ಮತ್ತು ಪ್ರಾಪರ್ಟಿ ಖರೀದಿ ಪ್ರಕ್ರಿಯೆಯು ಜೋರಾಗಿದೆ. ಬೆಂಗಳೂರಿನ ವಿವಿಧ ಭಾಗದಲ್ಲಿ ಪ್ರಾಪರ್ಟಿ ಹಾಗೂ ಭೂಮಿಗೆ ಬಂಗಾರದ ಬೆಲೆ ಬಂದಿದೆ. ಬೆಂಗಳೂರಿನಲ್ಲಿ 2026ನೇ ಸಾಲಿನಲ್ಲಿ ಬೆಂಗಳೂರು ಪೂರ್ವ ಭಾಗದಲ್ಲಿ ಎಲ್ಲೆಲ್ಲಿ ಹೂಡಿಕೆ ಮಾಡಬಹುದು ಹಾಗೂ ಯಾವ ಭಾಗದಲ್ಲಿ ಭೂಮಿ, ಪ್ರಾಪರ್ಟಿಗೆ ಒಳ್ಳೆಯ ಬೆಲೆ ಇದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ದಿನೇ ದಿನೆ ಪ್ರಾಪರ್ಟಿ ಬೆಲೆ ಹೆಚ್ಚಾಗುತ್ತಿದ್ದು. ಒಂದಿಲ್ಲೊಂದು ಕಾರಣಕ್ಕೆ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಗುತ್ತಿದೆ. ಬೆಂಗಳೂರಿನ ಹೃದಯಭಾಗ ಸೇರಿದಂತೆ ಕೆಲವೊಂದು ಪ್ರದೇಶಗಳಲ್ಲಿ ಭೂಮಿಗೆ ಬಂಗಾರದ ಬೆಲೆ ದಶಕಗಳಿಂದಲೂ ಇದೆ. ಇದಕ್ಕೆ ಹೊಸ ಹೊಸ ಪ್ರದೇಶಗಳು ಸೇರ್ಪಡೆ ಆಗುತ್ತಿವೆ. ಬೆಂಗಳೂರಿನ ಪೂರ್ವ ಪ್ರದೇಶದಲ್ಲಿ ಈ ವರ್ಷ ಹೂಡಿಕೆಗೆ ಉತ್ತಮವಾಗಿರುವ ಪ್ರದೇಶಗಳ ವಿವರ ಹಾಗೂ ಯಾಕೆ ಈ ಭಾಗದಲ್ಲಿ ಪ್ರಾಪರ್ಟಿ ಇನ್ವೆಸ್ಟ್‌ಮೆಂಟ್ ಹಾಗೂ ಖರೀದಿ ಒಳ್ಳೆಯದು ಎನ್ನುವ ವಿವರ ಇಲ್ಲಿದೆ.

ಕುಶ್ಮನ್ & ವೇಕ್‌ಫೀಲ್ಡ್ ವರದಿಯ 2025 ರ ಪ್ರಕಾರ, ಪೂರ್ವ ಬೆಂಗಳೂರು ನಗರದ ಕೆಲವು ಪ್ರದೇಶಗಳಲ್ಲಿ ಭೂಮಿ ಮತ್ತು ಪ್ರಾಪರ್ಟಿಗೆ ಒಳ್ಳೆಯ ಬೆಲೆ ಇದೆ. ಈ ಪ್ರದೇಶದಲ್ಲಿ ಕಳೆದ 5 ವರ್ಷಗಳಲ್ಲಿ ಬಾಡಿಗೆ ಹೆಚ್ಚಾಗುತ್ತಿದ್ದು. ಆಸ್ತಿ ಖರೀದಿ ಪ್ರಕ್ರಿಯೆ ಜೋರಾಗಿದೆ. ವಸತಿ ಬೇಡಿಕೆ ಮತ್ತು ಹೆಚ್ಚು ಬಾಡಿಗೆಗೆ ಪೂರಕ ವಾತಾವರಣ ಈ ಭಾಗದಲ್ಲಿ ಇರುವುದು ಆಸ್ತಿ ಖರೀದಿ ಮಾಡುವವರು ಈ ಭಾಗದಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.
1. ವೈಟ್‌ಫೀಲ್ಡ್: ವೈಟ್‌ಫೀಲ್ಡ್ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಪರ್ಟಿ ಬೆಲೆಯು ಭರ್ಜರಿ ಹೆಚ್ಚಳ ಕಂಡಿದೆ. ಕಳೆದ ವರ್ಷ ಭಾರೀ ಪ್ರಗತಿ ಕಂಡಿರುವುದರಿಂದ 2026ನೇ ಸಾಲಿನಲ್ಲಿ ಈ ಭಾಗದಲ್ಲಿ ಪ್ರಾಪರ್ಟಿ ಖರೀದಿ ಮಾಡುವುದು ಅತ್ಯುತ್ತಮ ಆಯ್ಕೆಗಳಲ್ಲಿ ಒಂದಾಗಿದೆ. 2 ಮತ್ತು 3 ಬಿಎಚ್‌ಕೆ ಮನೆಗಳ ಮೇಲೆ ಶೇ 3.5 ರಿಂದ ಶೇ 5% ಪ್ರಾಪರ್ಟಿ ವ್ಯಾಲ್ಯೂ ಹೆಚ್ಚಳವಾಗಿದೆ. ಐಟಿ ಕಂಪನಿಗಳು ಹಾಗೂ ಮೆಟ್ರೋ ಸಂಪರ್ಕ ವಿಸ್ತರಣೆ ಈ ಭಾಗದಲ್ಲಿ ರಿಯಲ್ ಎಸ್ಟೇಟ್ ಬೂಸ್ಟ್‌ಗೆ ಕಾರಣವಾಗಿದೆ.
2. ಸರ್ಜಾಪುರ ರಸ್ತೆ: ಇನ್ನು 2025ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್‌ನಲ್ಲಿ ಅತಿ ಹೆಚ್ಚು ಸುದ್ದಿ ಮಾಡಿದ ಪ್ರದೇಶಗಳಲ್ಲಿ ಸರ್ಜಾಪುರ ರಸ್ತೆಯೂ ಒಂದಾಗಿದೆ. ಈ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಪರ್ಟಿ ಬೆಲೆಯು ಭರ್ಜರಿ ಹೆಚ್ಚಳ ಕಂಡಿದೆ. ಅದರಲ್ಲೂ ಪ್ರಮುಖ ಐಟಿ ಪ್ರದೇಶಗಳಿಗೆ ಸರ್ಜಾಪುರ ಸಂಪರ್ಕ ಕಲ್ಪಿಸುವುದು ಹಾಗೂ ಸಮೀಪವಿರುವುದು ಸೇರಿದಂತೆ ಹಲವು ಕಾರಣಗಳಿಗೆ ಈ ಭಾಗದಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಳವಾಗಿದೆ. ಎಲೆಕ್ಟ್ರಾನಿಕ್ ಸಿಟಿ ಹಾಗೂ ವೈಟ್‌ಫೀಲ್ಡ್ ಎರಡೂ ಪ್ರದೇಶಕ್ಕೂ ಇದು ಸಮೀಪದಲ್ಲಿದೆ. ಸರ್ಜಾಪುರ - ಹೆಬ್ಬಾಳ ಮೆಟ್ರೋ ಲಿಂಕ್ ಮತ್ತು ಪೆರಿಫೆರಲ್ ರಿಂಗ್ ರಸ್ತೆ ಇನ್ನಷ್ಟು ಪ್ರಾಪರ್ಟಿ ವ್ಯಾಲ್ಯೂ ಹೆಚ್ಚಳಕ್ಕೆ ಕಾರಣವಾಗಿದೆ.
3. ಬೆಳ್ಳಂದೂರು ಹಾಗೂ ಹೊರ ವರ್ತುಲ ರಸ್ತೆ: ಬೆಂಗಳೂರಿನ ಹೊರ ವರ್ತುಲ ರಸ್ತೆ ಭಾಗದಲ್ಲಿ ಮೂಲಸೌಕರ್ಯ ಸಮಸ್ಯೆ ಹಾಗೂ ಕಂಪನಿಗಳು ಬೆಂಗಳೂರು ಬಿಡುವುದಾಗಿ ಹೇಳಿದರ ಹೊರತಾಗಿಯೂ ಪ್ರಾಪರ್ಟಿ ವ್ಯಾಲ್ಯೂನಲ್ಲಿ ಪ್ರಗತಿ ಕಂಡಿದೆ. ಬೆಳ್ಳಂದೂರು - ಮಾರತ್ತಹಳ್ಳಿ - ಹೊರ ವರ್ತುಲ ರಸ್ತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾಪರ್ಟಿ ವ್ಯಾಲ್ಯೂಗೆ ಉತ್ತಮವಾಗಿದೆ. ಈ ಪ್ರದೇಶಗಳಲ್ಲಿ ಐಟಿ - ಬಿಟಿ ಕಂಪನಿಗಳು ಹೆಚ್ಚಾಗಿ ಇರುವುದು ಸಹ ವರದಾನವಾಗಿದೆ.
ಈ ಭಾಗದಲ್ಲಿ ನಿರಂತರ ಬಾಡಿಗೆ ಹೆಚ್ಚಳ
ಇನ್ನು ಬೆಂಗಳೂರಿನ ಈ ಪ್ರದೇಶಗಳಲ್ಲಿ ಮನೆಗಳ ಹಾಗೂ ವಿವಿಧ ಪ್ರಾಪರ್ಟಿಗಳ ಬಾಡಿಗೆ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಈ ಪ್ರದೇಶಗಳಲ್ಲಿ ಬಾಡಿಗೆಗಳು 86,000 ಸಾವಿರ ರೂಪಾಯಿಯಿಂದ 3.1 ಲಕ್ಷಕ್ಕೆ ಏರಿಕೆ ಕಂಡಿವೆ. ಇದು ಐಷಾರಾಮಿ ಪ್ರಾಪರ್ಟಿಗಳಿಗೆ ಸಂಬಂಧಿಸಿದಂತೆ ಆಗಿದೆ. ಇನ್ನು ಸಾಧಾರಣ ಪ್ರಾಪರ್ಟಿಗಳಿಗೂ ಬಾಡಿಗೆ ಬೆಲೆಗಳು ಹೆಚ್ಚಾಗುತ್ತಿವೆ. ರಿಯಲ್ ಎಸ್ಟೇಟ್‌ನಲ್ಲಿ ಕಳೆದ ವರ್ಷ ಈ ಭಾಗದ ಪ್ರಾಪರ್ಟಿಗಳ ಬೆಲೆಯು ಶೇ 6% ಹೆಚ್ಚಳವನ್ನು ದಾಖಲಿಸಿದೆ.












Click it and Unblock the Notifications