Bengaluru E-Khata: ‘ನನ್ನ ಇ-ಖಾತಾ, ನನ್ನ ಹಕ್ಕು’ ಕಾರ್ಯಕ್ರಮದಡಿ ಇ-ಖಾತಾ ಮೇಳ ಆಯೋಜನೆ

ಬೆಂಗಳೂರು: ಬೆಂಗಳೂರಿನ ಆಸ್ತಿದಾರರಿಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಇ ಖಾತಾ ವಿಚಾರಕ್ಕೆ ಸಂಬಂಧಿಸಿದಂತೆ ಗುಡ್‌ನ್ಯೂಸ್ ಕೊಡಲಾಗಿದೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪ್ರಾಧಿಕಾರದ ವಿವಿಧ ಪಾಲಿಕೆಗಳ ವ್ಯಾಪ್ತಿಯಲ್ಲಿ ಇ ಖಾತಾ ಮೇಳವನ್ನು ಆಯೋಜಿಸಲಾಗುತ್ತಿದೆ.

ಇದೀಗ ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ಮನೆ ಬಾಗಿಲಿಗೆ ಸೇವೆ ಕಲ್ಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ನನ್ನ ಇ-ಖಾತಾ ನನ್ನ ಹಕ್ಕು' ಅಭಿಯಾನದ ಹಿನ್ನೆಲೆಯಲ್ಲಿ, ಜೆ.ಪಿ. ನಗರದ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ನಡೆಯುತ್ತಿರುವ ಖಾತಾ ಮೇಳಕ್ಕೆ ಪಾಲಿಕೆ ಆಯುಕ್ತರಾದ ಕೆ. ಎನ್. ರಮೇಶ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Bengaluru E-Khata E-Khata Camps Organised Under My E-Khata My Right Initiative

ಸ್ಥಳದಲ್ಲೇ ಇ-ಖಾತಾ ಪಡೆಯುವ ಪ್ರಕ್ರಿಯೆ ಪರಿಶೀಲನೆ

ಖಾತಾ ಮೇಳದಲ್ಲಿ ನಾಗರಿಕರಿಗೆ ಒದಗಿಸಲಾಗುತ್ತಿರುವ ಸೌಲಭ್ಯಗಳನ್ನು ಖುದ್ದಾಗಿ ಪರಿಶೀಲಿಸಿದ ಆಯುಕ್ತರು, ಮ್ಯಾನುಯಲ್ ಖಾತಾದಿಂದ ಇ-ಖಾತಾಗೆ ಬದಲಾವಣೆ, ಹೊಸ ಖಾತಾ ನೋಂದಣಿ ಹಾಗೂ ತಿದ್ದುಪಡಿಗಾಗಿ ಸಾರ್ವಜನಿಕರು ಸಲ್ಲಿಸುತ್ತಿರುವ ಅರ್ಜಿಗಳ ಪ್ರಕ್ರಿಯೆಯನ್ನು ಪರಿಶೀಲಿಸಿದರು. ಸಾರ್ವಜನಿಕರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳದಲ್ಲೇ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ತಕ್ಷಣವೇ ಇ-ಖಾತಾ ವಿತರಿಸುವ ನಿಟ್ಟಿನಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಖಾತಾ ಮೇಳದ ಅಂಕಿ - ಅಂಶಗಳ ವಿವರ

ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ 108 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 1 ಬಾಕಿ ಅರ್ಜಿ ಸೇರಿದಂತೆ ಒಟ್ಟು 26 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. 83 ಅರ್ಜಿಗಳು ಬಾಕಿ ಇವೆ. ಖಾತಾ ವರ್ಗಾವಣೆ (ಮ್ಯುಟೇಷನ್) ವಿಭಾಗದಲ್ಲಿ 21 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 14 ಬಾಕಿ ಅರ್ಜಿಗಳು ಸೇರಿದಂತೆ ಒಟ್ಟು 21 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಇನ್ನು 14 ಅರ್ಜಿಗಳು ಬಾಕಿ ಉಳಿದಿವೆ.

ಖಾತಾ ತಿದ್ದುಪಡಿ ಕೋರಿ 96 ಅರ್ಜಿಗಳು ಸಲ್ಲಿಕೆಯಾಗಿದ್ದು, ಹಿಂದಿನ 4 ಬಾಕಿ ಅರ್ಜಿಗಳೊಂದಿಗೆ ಒಟ್ಟು 42 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, 58 ಅರ್ಜಿಗಳು ಬಾಕಿ ಇವೆ. ಬಿ ಖಾತಾದಿಂದ ಎ ಖಾತೆಗೆ ಸಂಬಂಧಿಸಿದಂತೆ 13 ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 4 ಬಾಕಿ ಅರ್ಜಿಗಳ ಪೈಕಿ 4 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ, 13 ಅರ್ಜಿಗಳು ಬಾಕಿ ಇವೆ. ಹೊಸ ಖಾತೆಗೆ ಸಂಬಂಧಿಸಿದಂತೆ 16 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, ಪರಿಶೀಲನೆ ಬಾಕಿ ಇವೆ ಎಂದು ಪಾಲಿಕೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಒಂದೇ ದಿನ 93 ಅರ್ಜಿಗಳನ್ನು ವಿಲೇವಾರಿ

ಒಟ್ಟಾರೆಯಾಗಿ ದಿನದಂದು ವಿವಿಧ ಸೇವೆಗಳಿಗೆ ಸಂಬಂಧಿಸಿದಂತೆ 254 ಹೊಸ ಅರ್ಜಿಗಳು ಸ್ವೀಕೃತವಾಗಿದ್ದು, ಹಿಂದಿನ 23 ಬಾಕಿ ಅರ್ಜಿಗಳು ಸೇರಿದಂತೆ ಒಟ್ಟು 93 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಪ್ರಸ್ತುತ 184 ಅರ್ಜಿಗಳು ಪರಿಶೀಲನೆಯಲ್ಲಿವೆ. ಇ-ಖಾತಾ, ಹೊಸ ಖಾತಾ ಹಾಗೂ ಬಿ ಯಿಂದ ಎ ಖಾತೆಗೆ ಸಂಬಂಧಿಸಿದಂತೆ 17 ಪ್ರತ್ಯೇಕ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಮೇಳದ ಸಂದರ್ಭದಲ್ಲಿ ತಾಂತ್ರಿಕ ಸಹಾಯಕ್ಕಾಗಿ 2 ಇ-ಟಿಕೆಟ್‌ಗಳನ್ನು ದಾಖಲಿಸಲಾಗಿದೆ. ಖಾತಾ ಮೇಳದಲ್ಲಿ ಒಟ್ಟು 305 ನಾಗರಿಕರು ಪಾಲ್ಗೊಂಡಿದ್ದರು.

ವಿವಿಧ ಉಪವಿಭಾಗಗಳಲ್ಲಿ ಮೇಳ ಆಯೋಜನೆ

ಪಾಲಿಕೆಯ ವ್ಯಾಪ್ತಿಯ ಅಂಜನಾಪುರ, ಯಲಚೇನಹಳ್ಳಿ, ಉತ್ತರಹಳ್ಳಿ, ಬೇಗೂರು, ಜೆ.ಪಿ. ನಗರ, ಪದ್ಮನಾಭನಗರ, ಜಯನಗರ, ಬೊಮ್ಮನಹಳ್ಳಿ, ಕೋರಮಂಗಲ, ಬಿ.ಟಿ.ಎಂ. ಲೇಔಟ್, ಅರಕೆರೆ ಮತ್ತು ಎಚ್.ಎಸ್.ಆರ್. ಲೇಔಟ್ ಸೇರಿದಂತೆ ಜಯನಗರ ಹಾಗೂ ಬೊಮ್ಮನಹಳ್ಳಿ ವಲಯಗಳ 12 ಉಪವಿಭಾಗಗಳ ಕೇಂದ್ರಗಳಲ್ಲಿ ಏಕಕಾಲಕ್ಕೆ ಈ ಇ-ಖಾತಾ ಮೇಳವನ್ನು ಆಯೋಜಿಸಲಾಯಿತು.

ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದನೆ: ಮೇಳದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳನ್ನು ಅಧಿಕಾರಿಗಳು ಸ್ಥಳದಲ್ಲೇ ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸಿದರು. ಖಾತಾ ಸೇವೆಗಳ ಪ್ರಕ್ರಿಯೆ, ದಾಖಲೆಗಳ ದೃಢೀಕರಣ ಮತ್ತು ಬಾಕಿ ಅರ್ಜಿಗಳ ಸ್ಥಿತಿಗತಿ ಕುರಿತು ಸಾರ್ವಜನಿಕರಿಗೆ ವಿವರವಾದ ಮಾಹಿತಿ ನೀಡಲಾಯಿತು.

'ನನ್ನ ಇ-ಖಾತಾ, ನನ್ನ ಹಕ್ಕು' ಕಾರ್ಯಕ್ರಮದ ಮೂಲಕ ನಾಗರಿಕರಿಗೆ ಆಸ್ತಿ ಸಂಬಂಧಿತ ಸೇವೆಗಳನ್ನು ಅತ್ಯಂತ ಪಾರದರ್ಶಕವಾಗಿ, ಕಾಲಮಿತಿಯೊಳಗೆ ಒದಗಿಸುವುದು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವುದು ಪಾಲಿಕೆಯ ಮುಖ್ಯ ಉದ್ದೇಶವಾಗಿದೆ ಎಂದು ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+