Bengaluru Crime: ಬೆಳ್ಳಂಬೆಳಗ್ಗೆ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ; ನಡು ರಸ್ತೆಯಲ್ಲಿ ಯುವತಿಯನ್ನ ಒತ್ತೆಯಾಳು ಮಾಡಿದವ ಅಂದರ್!

ಬೆಂಗಳೂರು: ಬೆಂಗಳೂರು ನಗರದಲ್ಲಿ ಬೆಳ್ಳಂ ಬೆಳಗ್ಗೆಯೇ ಕಳ್ಳತನಕ್ಕೆ ಪ್ರಯತ್ನಿಸಿದ ವ್ಯಕ್ತಿಯೊಬ್ಬ ಜನರಿಗೆ ಸಿಕ್ಕಿ ಬಿದಿದ್ದಾನೆ. ಯುವತಿಯ ಕತ್ತುಪಟ್ಟಿ ಹಿಡಿದುಕೊಂಡು ರಸ್ತೆಯಲ್ಲಿ ರದ್ಧಾಂತ ಸೃಷ್ಟಿ ಮಾಡಿದ್ದಾನೆ. ಕಳ್ಳತನ ಮಾಡುವುದಕ್ಕೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯುವತಿಯನ್ನೇ ನಡು ರಸ್ತೆಯಲ್ಲಿ ಎಳೆದಾಡಿ, ಬೆದರಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳ್ಳನನ್ನು ಪೊಲೀಸರು ಥಳಿಸಿದ್ದಾರೆ.

ಕಳ್ಳನನ್ನು ಹಿಡಿಯಲು ಬಂದ ಸಾರ್ವಜನಿಕರಿಗೆ ನನ್ನನ್ನು ಹಿಡಿಯಲು ಬಂದರೆ ಯುವತಿಯನ್ನ ಕೊಲೆ ಮಾಡುವುದಾಗಿ ಆರೋಪಿ ಬೆದರಿಕೆ ಹಾಕಿರುವುದು ವೈರಲ್ ವಿಡಿಯೋದಲ್ಲಿದೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಭುರಾಜ್ ಅಲಿಯಾಸ್ ರಾಜ್ ಎನ್ನುವ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈಚೆಗೆ ಕಳ್ಳತನಕ್ಕೆ ಬಂದಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

Bengaluru Crime Man Caught Attempting Theft Holds Woman Hostage on Busy Road

ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಆರೋಪಿ ಅಂಗಡಿಯಲ್ಲಿದ್ದ ಯುವತಿಯೊಬ್ಬಳನ್ನು ಎಳೆದಾಡಿರುವುದು ಆಟೋದ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವುದು ವೈರಲ್ ವಿಡಿಯೋದಲ್ಲಿದೆ. ಅಲ್ಲದೆ ತನ್ನನ್ನು ಹಿಡಿಯಲು ಯಾರಾದರೂ ಬಂದರೆ ಯುವತಿಯನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಆರೋಪಿಯು ಯುವತಿಯ ಮೇಲೆ ಹಲ್ಲೆ ಮಾಡುವುದಕ್ಕೆ ಪ್ರಯತ್ನಿಸಿದಾಗ ಸಾರ್ವಜನಿಕರು ಆತನಿಗೆ ಗೂಸ ಕೊಟ್ಟು ಹಿಡಿದಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸರು ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

Bengaluru Crime: ಸರಳ ಕಳ್ಳನತ ಮಾಡಲು ಬಂದು ಸಿಕ್ಕಿ ಬಿದ್ದ

ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ಅಂಗಡಿಯಲ್ಲಿದ್ದ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಆಕೆಯನ್ನು ಒತ್ತೆಯಾಳಾಗಿಟ್ಟುಕೊಂಡಿದ್ದ, ಚಿನ್ನದ ಸರ ಕಳ್ಳತನ ಮಾಡಲು ಬಂದಿದ್ದ ಎಂದು ಹೇಳಲಾಗಿದೆ. ಕಳ್ಳತನಕ್ಕೆ ಪ್ರಯತ್ನಿಸಿದ ವ್ಯಕ್ತಿಯು ಆಕೆಯ ಕುತ್ತಿಗೆ ಬಿಗಿಯಾಗಿ ಹಿಡಿಯಲು ಯತ್ನಿಸಿದ್ದಾನೆ, ನಂತರ ಸಾರ್ವಜನಿಕರು ಆತನನ್ನು ಹಿಡಿದು ಇಂದಿರಾನಗರದಲ್ಲಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಪ್ರಭುರಾಜ್ (40) ಎಂದು ಗುರುತಿಸಲಾಗಿದೆ. ಪೊಲೀಸರ ತನಿಖೆಯಲ್ಲಿ ಆರೋಪಿ ಮಾನಸಿಕ ಅಸ್ವಸ್ಥನಂತೆ ಕಾಣುತ್ತಿದ್ದಾನೆ ಎಂದು ತಿಳಿದುಬಂದಿದೆ ಎಂದಿದ್ದಾರೆ.

ಪೊಲೀಸರು ಪ್ರಸ್ತುತ ಆರೋಪಿಯ ಹಿನ್ನೆಲೆಯನ್ನು ಪರಿಶೀಲಿಸುತ್ತಿದ್ದಾರೆ. ಏಕೆಂದರೆ ಅವನು ಮಾನಸಿಕವಾಗಿ ಅಸ್ವಸ್ಥ ಮತ್ತು ಖಿನ್ನತೆಗೆ ಒಳಗಾಗಿದ್ದಾನೆಂದು ತೋರುತ್ತದೆ ಎಂದು ಉಪ ಪೊಲೀಸ್ ಆಯುಕ್ತ (ಪೂರ್ವ) ವಿಕ್ರಮ್ ಅಮಾಥೆ ಹೇಳಿದ್ದಾರೆ. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಶಂಕಿತನು ಹೆಲ್ಮೆಟ್ ಧರಿಸಿ ಸಂತ್ರಸ್ತೆಯ ಕುತ್ತಿಗೆಯನ್ನು ಬಿಗಿಯಾಗಿ ಹಿಡಿದಿರುವುದು ಇದೆ.

Bengaluru Crime: ಪ್ರಕರಣದ ಹಿನ್ನೆಲೆ ಏನು ?

ಬೆಂಗಳೂರಿನ ಇಂದಿರಾನಗರದ 100 ಅಡಿ ರಸ್ತೆಯಲ್ಲಿ ಶೂ ರಿಪೇರಿ ಅಂಗಡಿಗೆ ಅಕ್ಟೋಬರ್ 31ರಂದು ಬೆಳಿಗ್ಗೆ 11:45 ರ ಸುಮಾರಿಗೆ ಬಂದ 40 ವರ್ಷದ ಪ್ರಭುರಾಜ್ ಆಶ್ರಯ ಪಡೆಯುವಂತೆ ನಟಿಸಿದ್ದಾನೆ. ಈ ಶೂ ರಿಪೇರಿ ಅಂಗಡಿಯಲ್ಲಿದ್ದ ಮಹಿಳೆಯನ್ನು ಬೆದರಿಸಿ, ಆಕೆಯ 4.5 ಲಕ್ಷ ರೂ. ಮೌಲ್ಯದ 35 ಗ್ರಾಂ ಚಿನ್ನದ ಮಂಗಳಸೂತ್ರವನ್ನು ಕದಿಯಲು ಪ್ರಯತ್ನಿಸಿದ್ದಾನೆ. ಆಕೆಯ ಕೂಗು ಕೇಳಿ ಜಾಗೃತರಾದ ಸ್ಥಳೀಯರು, ಆತನ ಬಳಿ ಚಾಕುವಿದ್ದರೂ, ಆತನನ್ನು ಸ್ಥಳದಲ್ಲೇ ಹಿಡಿದು, ಪೊಲೀಸರಿಗೆ ಒಪ್ಪಿಸಿದ್ದಾರೆ. ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+