ಬೆಂಗಳೂರಿನಲ್ಲಿ 29ನೇ ವಯಸ್ಸಿಗೆ ಸ್ವಂತ ಮನೆ: ಶೂನ್ಯದಿಂದ ಶುರುವಾದ ಈ ದಂಪತಿಯ ಜರ್ನಿ ಈಗ Viral

ಬೆಂಗಳೂರಿನಂತಹ ಮಹಾನಗರಗಳಲ್ಲಿ ಸ್ವಂತ ಮನೆ ಹೊಂದಬೇಕು ಎಂಬುದು ಲಕ್ಷಾಂತರ ಜನರ ಕನಸು. ಆದರೆ ಗಗನಕ್ಕೇರುತ್ತಿರುವ ರಿಯಲ್ ಎಸ್ಟೇಟ್ ಬೆಲೆ ಹಾಗೂ ಬಿಲ್ಡರ್‌ಗಳ ನಿಯಮಗಳ ನಡುವೆ ಸಾಮಾನ್ಯ ಜನರಿಗೆ ಇದು ಸುಲಭದ ಮಾತಲ್ಲ. ಇದೀಗ ಬೆಂಗಳೂರಿನ ದಂಪತಿಗಳು ಬೆಂಗಳೂರಿನಲ್ಲಿ ತಮ್ಮ ಮೊದಲ ಸ್ವಂತ ಮನೆ ಖರೀದಿಸಿದ ಭಾವುಕ ಪಯಣದ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದು ನೆಟ್ಟಿಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಜೆನಿತ್ ರಾಯ್ ಚಕ್ರವರ್ತಿ (Zenith Roy Chakraborty) ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಪ್ರೈಮ್ ಲೊಕೇಶನ್‌ನಲ್ಲಿ ಆಸ್ತಿ ಖರೀದಿಸುವಾಗ ಎದುರಾದ ಆರ್ಥಿಕ ಹಾಗೂ ಮಾನಸಿಕ ಸವಾಲುಗಳ ಬಗ್ಗೆ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಕಷ್ಟು ವೈರಲ್ ಆಗಿದ್ದು, ಮನೆ ಖರೀದಿಸುವ ಆಸೆ ಹೊಂದಿರುವ ಅನೇಕ ಯುವ ದಂಪತಿಗಳಿಗೆ ಸ್ಫೂರ್ತಿಯಾಗಿದೆ.

Bengaluru Couple

ವೈರಲ್‌ ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಮಾತನಾಡಿರುವ ಜೆನಿತ್, "ಹದಿನೆಂಟು ತಿಂಗಳ ಹಿಂದೆ, ನಮಗೆ ಸಂಪೂರ್ಣವಾಗಿ ಅರ್ಥವಾಗದ ವಿಷಯವೊಂದಕ್ಕೆ ನಾವು ಒಪ್ಪಿಗೆ ಸೂಚಿಸಿದ್ದೇವು. ಅದೇ ಬೆಂಗಳೂರಿನ ಹಾಟ್‌ಸ್ಪಾಟ್ ಪ್ರದೇಶದಲ್ಲಿ ಸ್ವಂತ ಮನೆ ಖರೀದಿಸುವ ನಿರ್ಧಾರ. ಇದು ಸುಲಭವಾಗಿ ಆಗುವಂತದ್ದಲ್ಲ ಎಂಬುದು ನಮಗೆ ಮೊದಲೇ ತಿಳಿದಿತ್ತು. ನಿರ್ಮಾಣ ಹಂತದಲ್ಲಿದ್ದ ಮನೆ, ಅನಿಶ್ಚಿತ ಟೈಮ್‌ಲೈನ್, ನೂರಾರು ಪ್ರಶ್ನೆಗಳು ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಸ್ವಲ್ಪ ಭಯವೂ ನಮ್ಮಲ್ಲಿತ್ತು" ಎಂದು ಹೇಳಿಕೊಂಡಿದ್ದಾರೆ.

"ನಮಗೆ ರಿಯಲ್ ಎಸ್ಟೇಟ್ ಬಗ್ಗೆ ಏನು ಗೊತ್ತಿರಲಿಲ್ಲ. ನಮಗೆ ಯಾವುದೇ ಅನುಭವ ಅಥವಾ ಯಾರ ಮಾರ್ಗದರ್ಶನ ಕೂಡ ಇರಲಿಲ್ಲ. ಹೀಗಾಗಿ ನಾವೇ ಓದಿಕೊಂಡು, ಸಂಶೋಧನೆ ಮಾಡಿ ಹಂತ ಹಂತವಾಗಿ ಎಲ್ಲವನ್ನೂ ತಿಳಿದುಕೊಂಡೆವು. ನಿದ್ದೆಯಿಲ್ಲದ ರಾತ್ರಿಗಳು, ಪ್ರತಿಯೊಂದರ ಬಗ್ಗೆಯೂ ಅನುಮಾನ ಪಡುತ್ತಿದ್ದ ಕ್ಷಣಗಳು ನಮ್ಮದಾಗಿದ್ದವು. ಕೆಲವು ದಿನಗಳಂತೂ ಈ ಜವಾಬ್ದಾರಿ ನಮ್ಮಿಂದ ಸಾಧ್ಯವಿಲ್ಲ ಎನಿಸುತ್ತಿತ್ತು. ಆದರೆ ಈ ಎಲ್ಲ ಏಳುಬೀಳುಗಳಲ್ಲಿ ನಮ್ಮ ಕುಟುಂಬ ಮಾತ್ರ ಸದಾ ನಮ್ಮ ಬೆಂಬಲಕ್ಕೆ ನಿಂತಿತ್ತು" ಎಂದು ಅವರು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

"ಕೆಲಸಗಳು ನಿಧಾನವಾಗಿ, ಕೆಲವೊಮ್ಮೆ ನೋವು ತರಿಸುವಷ್ಟು ನಿಧಾನವಾಗಿ ಸಾಗಿದವು. ಆದರೆ ಇಟ್ಟಿಗೆಯ ಮೇಲೆ ಇಟ್ಟಿಗೆ ಇಡುತ್ತಾ ಹೋದಂತೆ, ಕನಸು ನನಸಾಗಲು ಪ್ರಾರಂಭಿಸಿತು. ನಾವು ಹಂತ ಹಂತವಾಗಿ ಮನೆ ಬೆಳೆಯುವುದನ್ನು ನೋಡಿದೆವು. ಇದರೊಂದಿಗೆ ನಾವೂ ಕೂಡ ಬೆಳೆದೆವು. ಅನೇಕರಿಗೆ ಇದೊಂದು ದೊಡ್ಡ ವಿಷಯವಾಗಿ ಕಾಣದಿರಬಹುದು. ಆದರೆ ನಮಗೆ ಇದೇ ಸರ್ವಸ್ವ. ಶೂನ್ಯದಿಂದ ನಮ್ಮ ಮನೆಯನ್ನು ಕಟ್ಟುವವರೆಗೆ, ನಮ್ಮ ಕನಸು ಕೊನೆಗೂ ನನಸಾಗುತ್ತಿದೆ" ಎಂದು ಜೆನಿತ್ ಭಾವುಕವಾಗಿ ಬರೆದುಕೊಂಡಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಯಾರ ಮಾರ್ಗದರ್ಶನವಿಲ್ಲದೆ, ಬೆಂಗಳೂರಿನಲ್ಲಿ ಸ್ವಂತ ಮನೆ ಖರೀದಿಸಿದ ಈ ದಂಪತಿಯ ಕಥೆಗೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ. ಅನೇಕರು ಕಾಮೆಂಟ್ ವಿಭಾಗದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

"ಬೆಂಗಳೂರಿನಂತಹ ನಗರಗಳಲ್ಲಿ ಸ್ವಂತ ಮನೆ ಖರೀದಿಸುವುದು ಅಸಾಧ್ಯ ಎಂದು ಭಾವಿಸುವ ಈ ದಿನಗಳಲ್ಲಿ, ನಿಮ್ಮ ಈ ಜರ್ನಿ ಎಲ್ಲರಿಗೂ ಸ್ಪೂರ್ತಿ ಆಗುವಂತಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. "ಸ್ವಂತವಾಗಿ ಏನನ್ನಾದರೂ ಪ್ರಯತ್ನಿಸುತ್ತಿರುವ ಅನೇಕರಿಗೆ ನಿಮ್ಮ ಪ್ರಯಾಣ ಭರವಸೆ ನೀಡುತ್ತದೆ" ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ಕೇವಲ ಮನೆಯಲ್ಲ, ಧೈರ್ಯದಿಂದ ಕಟ್ಟಿದ ಕನಸು" ಎಂದು ಹಲವರು ಶ್ಲಾಘಿಸಿದ್ದಾರೆ.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+