1 ಲಕ್ಷ ಸಂಬಳವಿಲ್ಲದಿದ್ರೆ ಬೆಂಗಳೂರಿಗೆ ಬರ್ಬೇಡಿ ಎಂದ ಯುವತಿ! ಮಧ್ಯಮ ವರ್ಗದವರ ಪಾಲಿಗೆ ಸಿಲಿಕಾನ್ ಸಿಟಿ ದುಬಾರಿಯೇ?

ಬೆಂಗಳೂರು ಎಂದರೆ ಲಕ್ಷಾಂತರ ಯುವಜನರ ಪಾಲಿನ ಕನಸಿನ ನಗರ. ಐಟಿ-ಬಿಟಿ ರಾಜಧಾನಿಯಾಗಿರುವ ಈ ಸಿಲಿಕಾನ್ ಸಿಟಿಯಲ್ಲಿ ಉದ್ಯೋಗ ಅರಸಿ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಜೀವನ ವೆಚ್ಚ ಗಗನಕ್ಕೇರುತ್ತಿದೆ ಎಂಬ ಮಾತು ಜೋರು ಕೇಳಿಬರುತ್ತಿದೆ. ಇದೇ ವಿಚಾರವಾಗಿ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ನಿಮ್ಮ ಮಾಸಿಕ ಆದಾಯ ಒಂದು ಲಕ್ಷ ರೂಪಾಯಿಗಿಂತ ಕಡಿಮೆಯಿದ್ದರೆ ಬೆಂಗಳೂರಿನ ಕಡೆ ತಲೆಹಾಕಿ ಮಲಗಬೇಡಿ ಎಂಬುದು ಆಕೆಯ ಮಾತು.

ಗಗನಕ್ಕೇರುತ್ತಿದೆ ಬೆಂಗಳೂರಿನಲ್ಲಿ ಮನೆ ಬಾಡಿಗೆ

ಹೌದು, ಅತ್ರೇಯಿ ಎಂಬ ಹೆಸರಿನ ಮಹಿಳೆಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿದ್ದು, ಬೆಂಗಳೂರಿನ ದುಬಾರಿ ಜೀವನ ಶೈಲಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ನಿಮ್ಮ ಮಾಸಿಕ ಆದಾಯ ಕನಿಷ್ಠ 1 ಲಕ್ಷ ರೂಪಾಯಿ ಇಲ್ಲದಿದ್ದರೆ, ದಯವಿಟ್ಟು ಬೆಂಗಳೂರಿಗೆ ಬರಬೇಡಿ. ಇದು ಕೇಳಲು ಸ್ವಲ್ಪ ವಿವಾದಾತ್ಮಕ ಎನಿಸಬಹುದು, ಆದರೆ ಇದು ಕಟು ಸತ್ಯ," ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.

Bengaluru Cost of Living Woman Claims 1 Lakh Monthly Income Needed To Survive Sparks Viral Debate

ವಿಶೇಷವಾಗಿ ಮನೆ ಬಾಡಿಗೆಯ ಬಗ್ಗೆ ಪ್ರಸ್ತಾಪಿಸಿರುವ ಅವರು, ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಬಾಡಿಗೆ ದರಗಳು ಮಿತಿ ಮೀರಿವೆ ಎಂದಿದ್ದಾರೆ. ಒಂದು ಸಾಮಾನ್ಯ ಅಪಾರ್ಟ್‌ಮೆಂಟ್ ಅಥವಾ ಗೇಟೆಡ್ ಸೊಸೈಟಿಯಲ್ಲಿ 2BHK ಮನೆ ಬಾಡಿಗೆಗೆ ಪಡೆಯಬೇಕೆಂದರೆ ತಿಂಗಳಿಗೆ 40,000 ದಿಂದ 45,000 ರೂಪಾಯಿ ನೀಡಬೇಕು.

ಇನ್ನು ಸೊಸೈಟಿಯಿಂದ ಹೊರಗೆ ಸಾಮಾನ್ಯವಾದ ಸ್ವತಂತ್ರ ಮನೆಯಲ್ಲಿ ವಾಸಿಸಲು ನಿರ್ಧರಿಸಿದರೂ ಕನಿಷ್ಠ 30,000 ರೂಪಾಯಿ ಬಾಡಿಗೆ ಪಾವತಿಸುವುದು ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದ್ದಾರೆ. ಕೇವಲ ಮನೆ ಬಾಡಿಗೆಗೆ ಇಷ್ಟು ಹಣ ವ್ಯಯಿಸಿದರೆ, ದಿನಸಿ, ಸಾರಿಗೆ ಹಾಗೂ ಮಕ್ಕಳ ಶಾಲಾ ಶುಲ್ಕ ಭರಿಸುವುದು ಹೇಗೆ ಎಂಬುದು ಸಾಮಾನ್ಯರ ಪ್ರಶ್ನೆಯಾಗಿದೆ.

ಮಧ್ಯಮ ವರ್ಗದವರ ಕೈಗೆಟುಕದ ಬೆಂಗಳೂರು ರಿಯಲ್ ಎಸ್ಟೇಟ್

ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸ್ವಂತ ಮನೆ ಕಟ್ಟಿಕೊಳ್ಳಬೇಕು ಅಥವಾ ಖರೀದಿಸಬೇಕು ಎಂಬ ದೊಡ್ಡ ಕನಸಿರುತ್ತದೆ. ಆದರೆ, ಬೆಂಗಳೂರಿನಲ್ಲಿ ಈ ಕನಸು ನನಸಾಗುವುದು ಬಹುತೇಕ ಅಸಾಧ್ಯ ಎಂಬ ಹಂತಕ್ಕೆ ತಲುಪಿದೆ. ಈ ಬಗ್ಗೆ ಮಾತನಾಡಿರುವ ಅತ್ರೇಯಿ, "ಬೆಂಗಳೂರಿನಲ್ಲಿ ಮನೆ ಖರೀದಿಸಲು ಹೋದರೆ ಕನಿಷ್ಠ ಬೆಲೆಯೇ 2 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಇನ್ನು ಐಷಾರಾಮಿ ಪ್ರದೇಶಗಳು, ಆಫೀಸ್ ಹತ್ತಿರವಿರುವ ಜಾಗಗಳು ಅಥವಾ ಉತ್ತಮ ಸೌಲಭ್ಯಗಳಿರುವ ಹೌಸಿಂಗ್ ಸೊಸೈಟಿಗಳಲ್ಲಿ 2 ಅಥವಾ 3 ಬಿಎಚ್‌‌ಕೆ ಫ್ಲಾಟ್ ಖರೀದಿಸಬೇಕೆಂದರೆ 3 ರಿಂದ 4 ಕೋಟಿ ರೂಪಾಯಿ ಬೆಲೆ ತೆರಬೇಕಾಗುತ್ತದೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತವನ್ನ ಭರಿಸುವುದು ಸಾಮಾನ್ಯ ಉದ್ಯೋಗಿಗಳಿಗೆ, ಅದರಲ್ಲೂ ಹೊಸದಾಗಿ ಕೆಲಸಕ್ಕೆ ಸೇರಿದವರಿಗೆ ಸಾಧ್ಯವಿಲ್ಲದ ಮಾತು.

ಮಧ್ಯಮ ವರ್ಗದವರಿಗೆ ಬೆಂಗಳೂರು ಸೂಕ್ತವಲ್ಲವೇ?

ವಿಡಿಯೋದ ಕೊನೆಯಲ್ಲಿ ಆಘಾತಕಾರಿ ಹೇಳಿಕೆಯೊಂದನ್ನ ನೀಡಿರುವ ಅವರು, "ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರು ಖಂಡಿತವಾಗಿಯೂ ಮಧ್ಯಮ ವರ್ಗದ ಜನರಿಗಾಗಿಯಲ್ಲ. ತಿಂಗಳಿಗೆ 3 ರಿಂದ 4 ಲಕ್ಷ ರೂಪಾಯಿ ದುಡಿಯುವವರಿಗೆ ಮಾತ್ರ ಈ ನಗರ ಮೀಸಲಾಗಿದೆ," ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಟ್ರಾಫಿಕ್ ಸಮಸ್ಯೆ ಮತ್ತು ಏರುತ್ತಿರುವ ಬಾಡಿಗೆಯಿಂದಾಗಿ ಮಧ್ಯಮ ವರ್ಗದ ಜನರು ಇಲ್ಲಿ ಬದುಕು ಸಾಗಿಸಲು ಹರಸಾಹಸ ಪಡುವಂತಾಗಿದೆ ಎನ್ನುವುದು ಅವರ ಮಾತಿನ ಅರ್ಥವಾಗಿತ್ತು.

ವೈರಲ್ ವಿಡಿಯೋಗೆ ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಪರ-ವಿರೋಧ ಪ್ರತಿಕ್ರಿಯೆಗಳನ್ನ ನೀಡುತ್ತಿದ್ದಾರೆ. ಕೆಲವರು ಮಹಿಳೆಯ ಮಾತಿಗೆ ಸಂಪೂರ್ಣ ಸಹಮತ ವ್ಯಕ್ತಪಡಿಸಿದ್ದು, "ನಿಜ, ಬೆಂಗಳೂರಿನಲ್ಲಿ ಮನೆ ಬಾಡಿಗೆ ನಿಯಂತ್ರಣ ತಪ್ಪುತ್ತಿದೆ. ಇಲ್ಲಿ ಸ್ವಂತ ಮನೆ ಖರೀದಿಸುವುದು ಸಾಮಾನ್ಯರಿಗೆ ಅಸಾಧ್ಯದ ಮಾತು," ಎಂದಿದ್ದಾರೆ.

ಆದರೆ, ಮತ್ತೆ ಕೆಲವರು ಈ ಹೇಳಿಕೆಯನ್ನು ವಿರೋಧಿಸಿದ್ದಾರೆ. "ಬೆಂಗಳೂರು ದುಬಾರಿಯಾಗಿದೆ ಎಂಬುದು ನಿಜ. ಆದರೆ ಬದುಕಲು 1 ಲಕ್ಷ ರೂ. ಬೇಕೇ ಬೇಕು ಎಂಬುದು ಅತಿಶಯೋಕ್ತಿ. ಎಲ್ಲರೂ ದುಬಾರಿ ಗೇಟೆಡ್ ಕಮ್ಯುನಿಟಿಗಳಲ್ಲೇ ವಾಸಿಸಬೇಕೆಂಬ ನಿಯಮವೇನಿಲ್ಲ. ನಗರದ ಹೊರವಲಯದಲ್ಲಿ ಹಾಗೂ ಅನೇಕ ಬಡಾವಣೆಗಳಲ್ಲಿ ಕಡಿಮೆ ಬಾಡಿಗೆ ಇರುವ ಮನೆಗಳು ಈಗಲೂ ಲಭ್ಯವಿವೆ," ಎಂದು ಕಮೆಂಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+