Bengaluru: ಬೆಂಗಳೂರು ದುಬಾರಿ: 23 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮಾಸಿಕ ₹30-35 ಸಾವಿರ ರೂ. ಖರ್ಚು, ನೆಟ್ಟಿಗರು ಹೇಳಿದ್ದೇನು

Bengaluru: ಬೆಂಗಳೂರಲ್ಲಿ ಬಾಡಿಗೆ ಹಾಗೂ ವೆಚ್ಚಗಳನ್ನು ಸರಿದೂಗಿಸುವುದು ಇಂದಿಗೂ ಸವಾಲಾಗಿಯೇ ಇದೆ. ಇದೀಗ ಬೆಂಗಳೂರಿನ ಜೆಪಿ ಮಾರ್ಗನ್‌ನಲ್ಲಿ ಕೆಲಸ ಮಾಡುತ್ತಿರುವ 23 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವತಿ ಬೆಂಗಳೂರಿನ ದುಬಾರಿ ವೆಚ್ಚ ಹಾಗೂ ಮನೆ ಬಾಡಿಗೆಯ ವೆಚ್ಚದ ವಿವರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರಲಲಿ ತಮ್ಮ ಮಾಸಿಕ ಖರ್ಚುಗಳ ವಿವರವನ್ನು ಹಂಚಿಕೊಂಡ ನಂತರ ಆನ್‌ಲೈನ್‌ನಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ಶುರುವಾಗಿದೆ.

ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಆರುಷಿ ಗಾರ್ಗ್ ಎನ್ನುವವರು ಬೆಂಗಳೂರು ನಗರದಲ್ಲಿ ವಾಸಿಸುವಾಗ ಎಷ್ಟು ಖರ್ಚು ಆಗುತ್ತಿದೆ ಎನ್ನುವ ವಿವರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಇದು ಯುವ ವೃತ್ತಿಪರರು ಬೆಂಗಳೂರಿನಲ್ಲಿ ಎದುರಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ಹಿಡಿದ ಕೈ ಕನ್ನಡಿಯಾಗಿದೆ.

Bengaluru

ಬೆಂಗಳೂರು ಮಹಾನಗರದಲ್ಲಿ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಲ್ಲದೆ ಮನೆಗಳ ಬಾಡಿಗೆಯೂ ದುಬಾರಿ ಆಗಿದೆ. ಈ ರೀತಿ ಇರುವಾಗ ಕಡಿಮೆ ಖರ್ಚಿನಲ್ಲಿ ಎಲ್ಲವನ್ನೂ ಸರಿದೂಗಿಸುವುದು ಸರ್ಕಸ್ ಮಾಡಿದಂತೆಯೇ ಸರಿ. ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ಆರುಷಿ ಗಾರ್ಗ್ ಎನ್ನುವವರು ಬೆಂಗಳೂರು ನಗರದಲ್ಲಿ ತಾವು ಎಷ್ಟು ಹಣವನ್ನು ವಿನಿಯೋಗಿಸುತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಡಿಯೋದಲ್ಲಿ ಅವರು ಬೆಂಗಳೂರಿನ ಜೆಪಿ ಮಾರ್ಗನ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದು, ಒಂದು ತಿಂಗಳಲ್ಲಿ ಖರ್ಚು ಮಾಡುವ ಮೊತ್ತದ ವಿವರ ಹಂಚಿಕೊಂಡಿದ್ದಾರೆ. ಪ್ರತಿ ತಿಂಗಳಿಗೆ ದೊಡ್ಡ ವೆಚ್ಚವೆಂದರೆ ಬಾಡಿಗೆ ಮತ್ತು ನನ್ನ ಪಾಲು ಸುಮಾರು 17,000 ರೂ. ನಮಗೆ ಒಬ್ಬ ಸೇವಕಿ ಇದ್ದಾರೆ ಮತ್ತು ಅದಕ್ಕಾಗಿ ನನ್ನ ಪಾಲು ತಿಂಗಳಿಗೆ ಸುಮಾರು 2 ಸಾವಿರ ರೂಪಾಯಿ ಬರುತ್ತದೆ.

ಅಲ್ಲದೆ ದಿನಸಿಗೆ ತಿಂಗಳಿಗೆ ಸುಮಾರು 5 ಸಾವಿರ ರೂಪಾಯಿ ಖರ್ಚಾಗುತ್ತದೆ. ನಾನು ಹೊರಗೆ ತಿನ್ನುತ್ತೇನೆ ಮತ್ತು ಅದು 3 ಸಾವಿರದಿಂದ 6 ಸಾವಿರದವರೆಗೆ ಆಗುತ್ತದೆ. ಶಾಪಿಂಗ್ ಮತ್ತೊಂದು ದೊಡ್ಡ ವೆಚ್ಚವಾಗಿದೆ. ಅದೂ ಸಹ ಅಂದಾಜು 3 ಸಾವಿರದಿಂದ 7 ಸಾವಿರದವರೆಗೆ ಇರುತ್ತದೆ. ಇನ್ನೊಂದು ಖರ್ಚು ಉಡುಗೊರೆ, ಔಷಧಿಗಳಂತಹ ವಿವಿಧ ವಸ್ತುಗಳು ಅದು ಸಹ 2 ಸಾವಿರದಿಂದ 6 ಸಾವಿರದವರೆಗೆ ಇರುತ್ತದೆ. ಪ್ರಯಾಣದ ವೆಚ್ಚ ಸುಮಾರು 1 ಸಾವಿರದಿಂದ 2 ಸಾವಿರದವರೆಗೆ ಇರುತ್ತದೆ. ಅವು ಪ್ರತಿ ತಿಂಗಳು ನನ್ನ ಪ್ರಮುಖ ವೆಚ್ಚಗಳಾಗಿವೆ. ಈ ಎಲ್ಲಾ ವೆಚ್ಚಗಳನ್ನು ಸೇರಿಸಿದರೆ 30,000 ರಿಂದ 35,000 ವರೆಗೆ ಬರುತ್ತದೆ ಎಂದು ಅವರು ಹೇಳಿದ್ದಾರೆ.

Bengaluru: ಈ ವೈರಲ್ ವಿಡಿಯೋಗೆ ನೆಟ್ಟಿಗರು ಹೇಳಿದ್ದೇನು

ಇನ್ನು ಈ ವೈರಲ್ ವಿಡಿಯೋಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವರು ಈ ವೆಚ್ಚವು ಬೆಂಗಳೂರಿನಲ್ಲಿ ಹೆಚ್ಚು ದುಬಾರಿಯೇ ಅಥವಾ ಬೆಂಗಳೂರಿನಲ್ಲಿ ಇಷ್ಟು ವೆಚ್ಚವಾಗುತ್ತದೆಯೇ ಎಂದು ಚರ್ಚೆ ಮಾಡುತ್ತಿದ್ದಾರೆ. ದೊಡ್ಡ ನಗರ ದೊಡ್ಡ ವೆಚ್ಚ ಎಂದು ಕೆಲವರು ಅಭಿಪ್ರಾಯಪಟ್ಟರೆ ಬೆಂಗಳೂರಿನಂತಹ ದೊಡ್ಡ ನಗರದಲ್ಲಿ ಇಷ್ಟು ಬಾಡಿಗೆ ಸಾಮಾನ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಸಿಕ ದಿನಸಿ ಮೊತ್ತ ಹಾಗೂ ಶಾಪಿಂಗ್‌ ಮೊತ್ತ ಚುರು ದುಬಾರಿಯಾಗಿದೆ ಎಂದೂ ಕೆಲವರು ಹೇಳಿದ್ದಾರೆ. ಒಟ್ಟಾರೆ ಮಧ್ಯಮ ಮೊತ್ತದ ಸಂಬಳವಿದ್ದರೆ ಮಾತ್ರ ಇಷ್ಟು ಖರ್ಚು ಮಾಡಲು ಸಾಧ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ವಿಚಾರಕ್ಕೆ ಹಲವು ನೆಟ್ಟಿಗರು ಪ್ರತಿಕ್ರಿಯೆ ನೀಡಿದ್ದಾರೆ. ದುಬಾರಿ ಸಂಬಳ ಬರುವವರಿಗೆ ಮಾತ್ರ ಈ ಮಾದರಿಯ ಜೀವನ ನಡೆಸುವುದಕ್ಕೆ ಸಾಧ್ಯ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+