Expressway: ಕರ್ನಾಟಕ ಭಾಗದಲ್ಲಿನ 71 ಕಿ.ಮೀ. ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಪ್ರಯೋಜನೆಗಳು

Bengaluru-Chennai Expressway: ರಾಜ್ಯದಲ್ಲಿ ರಾಷ್ಟ್ರೀ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯಲ್ಲಿ ಕ್ರಾಂತಿಯಾಗುತ್ತಿದೆ. ಹಾಗೆಯೇ ಎಕ್ಸ್‌ಪ್ರೆಸ್‌ವೇ ಜಾಲ ಕೂಡ ವಿಸ್ತರಣೆ ಆಗುತ್ತಲಿದೆ. ಇದೀಗ ಬಹುನಿರೀಕ್ಷಿತ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕರ್ನಾಟಕ ವಿಭಾಗದಲ್ಲಿ ಪೂರ್ಣಗೊಂಡು ವಾಹನಗಳು ಸಂಚಾರ ಮಾಡುತ್ತಿವೆ. ಜೊತೆಗೆ ಉದ್ಘಾಟನೆಗೂ ಮುನ್ನ ಟೋಲ್‌ ಸಂಗ್ರಹ ಕೂಡ ಆರಂಭವಾಗಿದೆ. ಹಾಗಾದ್ರೆ, ಕರ್ನಾಟಕದಲ್ಲಿ ಎಲ್ಲೆಲ್ಲಿ ಎಷ್ಟು ಕಿಲೋ ಮೀಟರ್ ಹಾದುಹೋಗಿದೆ ಹಾಗೂ ಪ್ರಯೋಜನೆಗಳೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಬೆಂಗಳೂರು -ಚೆನ್ನೈ ಎಕ್ಸ್‌ಪ್ರೆಸ್‌ವೇ ಒಟ್ಟು ಉದ್ದ 262 ಕಿಲೋ ಮೀಟರ್ ಆಗಿದ್ದು, ನಿರ್ಮಾಣ ವೆಚ್ಚ ಅಂದಾಜು ₹17,930 ಆಗಿದೆ ಎಂದು ಹೇಳಲಾಗುತ್ತಿದೆ. ಇದರ ಉದ್ಘಾಟನೆ ದಿನಾಂಕ ಮುಂದೂಡಿಕೆ ಆಗುತ್ತಲೇ ಬಂದಿದೆ. ಇದಕ್ಕೇ ಕಾರಣವೂ ಇದೆ. ಈಗಾಗಲೇ ಕರ್ನಾಟಕ ವಿಭಾಗದಲ್ಲಿನ 71 ಕಿಲೋ ಮೀಟರ್ ವಾಹನ ಸವಾರರಿಗೆ ಮುಕ್ತವಾಗಿದ್ದು, ಉದ್ಘಾಟನೆಗೂ ಮುನ್ನವೇ ಟೋಲ್‌ ಸಂಗ್ರಹ ಆರಂಭವಾಗಿದೆ.

Bengaluru Chennai Expressway Karnataka Section Completed Toll Collection Begins Know benefits

ಕರ್ನಾಟಕ ಭಾಗದಲ್ಲಿನ 71 ಕಿಲೋ ಮೀಟರ್ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಕಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ವಾಹನ ಸಂಚಾರ ಕೂಡ ಆರಂಭವಾಗಿದೆ. ಜೊತೆಗೆ ಇದೀಗ ಟೋಲ್‌ ಸಂಗ್ರಹ ಕೂಡ ಆರಂಭವಾಗಿದೆ. ಆದರೆ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಭಾಗದಲ್ಲಿ ಕಾಮಗಾರಿ ಬಾಕಿ ಉಳಿದ ಕಾರಣ ಉದ್ಘಾಟನೆ ದಿನಾಂಕ ಮುಂದೂಡಿಕೆಯಾಗುತ್ತಾ ಬಂದಿದೆ. ಇದೇ ವರ್ಷದ ಡಿಸೆಂಬರ್ ಅಂತ್ಯ ಅಥವಾ ಮುಂದಿನ ವರ್ಷದ ಜುಲೈ ವೇಳೆಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಂಡು ಉದ್ಘಾಟನೆಯಾಗಲಿದೆ ಎನ್ನುವ ಮಾಹಿತಿ ಇದೆ.

ಕರ್ನಾಟಕದಲ್ಲಿ ಎಲ್ಲೆಲ್ಲಿ ಹಾದುಹೋಗಿದೆ?: ಈಗಾಗಲೇ ಕರ್ನಾಟಕ ಭಾಗದಲ್ಲಿ ಕಾಮಗಾರಿ ಪೂರ್ಣಗೊಂಡು ವಾಹನ ಸಂಚಾರಕ್ಕೂ ಮುಕ್ತವಾಗಿದೆ. ಅಲ್ಲದೆ, ಟೋಲ್‌ ಸಂಗ್ರಹ ಕೂಡ ಆರಂಭವಾಗಿದೆ. ಈ ಎಕ್ಸ್‌ಪ್ರೆಸ್‌ ವೇ ಕರ್ನಾಟಕದಲ್ಲಿ ಹೋಸಕೋಟೆಯಿಂದ ಆರಂಭಗೊಂಡು, ಬೆಂಗಳೂರು ನಗರ ಪೂರ್ವ ಭಾಗ, ಮಾಲೂರು, ಬಂಗಾರಪೇಟೆ, ಕೋಲಾರ್ ಗೋಲ್ಡ್ ಫೀಲ್ಡ್ಸ್, ಬೆಥಮಂಗಲದವರೆಗೂ ವ್ಯಾಪಿಸಿದೆ. ಬಳಿಕ ಆಂಧ್ರಪ್ರದೇಶ ಗಡಿ ಆರಂಭವಾಗಲಿದೆ.

ರಾಜ್ಯದಲ್ಲಿ ಎಲ್ಲೆಲ್ಲಿ ಹಾದುಹೋಗಲಿದೆ?

* ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೋಸಕೋಟೆ
* ಕೋಲಾರ ಜಿಲ್ಲೆಯ ಮಾಲೂರು, ಬಂಗಾರಪೇಟೆ, ಬೇಥಮಂಗಲ

ಕರ್ನಾಟಕ ಭಾಗದಲ್ಲಿ 71 ಕಿಲೋ ಮೀಟರ್ ಎಕ್ಸ್‌ಪ್ರೆಸ್‌ ವೇ ಹಾದುಹೋವ ಭಾಗದಲ್ಲಿ ಭೂಮಿ ಬೆಲೆ ಈಗಾಗಲೇ ಗಗನಕ್ಕೆ ಮುಟ್ಟೊತ್ತು. ಇನ್ನು ಇದೀಗ ಟೋಲ್‌ ಸಂಗ್ರಹ ಆರಂಭವಾದ ಬಳಿಕ ಅಂತೂ ಇನ್ನೂ ಏರುಗತಿಯಲ್ಲೇ ಸಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾದರೂ ಆಶ್ಚರ್ಯವಿಲ್ಲ. ಯಾಕಂದ್ರೆ ಹೂಡಿಕೆದಾರರು, ನಾ ಮುಂದು, ತಾ ಮುಂದಿ ಅಂತಾ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಇದರಿಂದ ಈ ಭಾಗಗಳ ಭೂಮಾಲೀಕರು ಕೋಟ್ಯಾಧೀಪತಿಗಳು ಸಹ ಆಗಲಿದ್ದಾರೆ.

3 ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಎಕ್ಸ್‌ಪ್ರೆಸ್‌ ವೇ: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ಸರಿಸುಮಾರು 262 ಕಿಲೋ ಮೀಟರ್ ಉದ್ದ ಇದೆ. ಇದು ಬೆಂಗಳೂರಿನ ಬಳಿಯ ಹೊಸಕೋಟೆಯಲ್ಲಿ ಪ್ರಾರಂಭವಾಗಿ, ಚೆನ್ನೈ ಬಳಿಯ ಶ್ರೀಪೆರಂಬುದೂರಿನಲ್ಲಿ ಕೊನೆಗೊಳ್ಳುತ್ತದೆ. ಒಟ್ಟಿನಲ್ಲು ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ಮೂರು ರಾಜ್ಯಗಳಿಗೆ ಸಂಪರ್ಕ ಕಲ್ಪಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+