CCB: ಬೆಂಗಳೂರಿನಲ್ಲಿ ಸಿಸಿಬಿ ಭರ್ಜರಿ ಕಾರ್ಯಾಚರಣೆ, ಕೋಟಿ ಕೋಟಿ ಮೌಲ್ಯದ ನಿಕೋಟಿನ್ ಸೀಜ್
ಬೆಂಗಳೂರು, ಫೆಬ್ರವರಿ 13: ಸಿಸಿಬಿ ಪೊಲೀಸರು ನಗರದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 1.45 ಕೋಟಿ ರೂ. ಮೌಲ್ಯದ ನಿಕೋಟಿನ್ ಉತ್ಪನ್ನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣ ಸಂಬಂಧ ಒಂಬತ್ತು ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಬೆಂಗಳೂರು ನಗರದ ಚಾಮರಾಜಪೇಟೆ, ಮಹದೇವಪುರ, ರಾಮಮೂರ್ತಿನಗರದಲ್ಲಿ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಅಕ್ರವಾಗಿ ಸಂಗ್ರಹಿಸಿಟ್ಟಿದ್ದ 1.45 ಕೋಟಿ ರೂ. ಮೌಲ್ಯದ ನಿಷೇಧಿತ ಹುಕ್ಕಾ, ನಿಕೋಟಿನ್ ಉತ್ಪನ್ನವನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳ ವಶಪಡಿಸಿಕೊಂಡಿದೆ.

ಅಲ್ಲದೇ ನಗರದಲ್ಲಿ ಅಕ್ರಮವಾಗಿ ನಿಕೋಟಿನ್ ಉತ್ಪನ್ನ ಮಾರುತ್ತಿದ್ದ ಒಂಬತ್ತು ಜನರನ್ನು ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 1.10 ಲಕ್ಷ ರೂಪಾಯಿ ನಗದು, ಟಾಟಾ ಏಸ್, ಹಾಗೂ 11 ಮೊಬೈಲ್ ಫೋನ್‌ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಬೆಂಗಳೂರು ನಗರ ಪೊಲೀಸರು ಸಿಲಿಕಾನ್ ಸಿಟಿಯನ್ನು ಡ್ರಗ್ಸ್ಮುಕ್ತವಾಗಿ ಮಾಡಲು ಸಾಲು ಸಾಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಗ್ಯಾಸ್ ಸಿಲಿಂಡರ್ ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೆ ಸಿಸಿಬಿ ದಾಳಿ
ಬೆಂಗಳೂರು: ಗ್ಯಾಸ್ ಸಿಲಿಂಡರ್ ಅಕ್ರಮ ರೀ ಫಿಲ್ಲಿಂಗ್ ಅಡ್ಡೆ ಮೇಲೆ ಬೆಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, 8 ಲಕ್ಷ ರೂಪಾಯಿ ಮೌಲ್ಯದ 110 ಗ್ಯಾಸ್ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ.

ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಅನಧಿಕೃತ ಕಂಪನಿಗಳ ಲೇಬಲ್ ಬಳಸಿ ಕಬ್ಬಿಣದ ರಾಡ್ ಮೂಲಕ ಅಕ್ರಮ ರೀ ಫಿಲ್ಲಿಂಗ್ ಮಾಡುತ್ತಿದ್ದರು. ಜನನಿಬಿಡ ಪ್ರದೇಶದಲ್ಲಿ ಯಾವುದೇ ಅನುಮತಿಯಿಲ್ಲದೆ ರೀ ಫಿಲ್ಲಿಂಗ್ ನಡೆಸಲಾಗುತ್ತಿತ್ತು. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಹಾಗೂ ಆರೋಪಿಗಳು ಕೃತ್ಯಕ್ಕೆ ಬಳಕೆ ಮಾಡಿದ್ದ 110 ಸಿಲಿಂಡರ್ ಹಾಗೂ ಎರಡು ಟಾಟಾ ಏಸ್ ವಾಹನವನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.












Click it and Unblock the Notifications