ಬೆಂಗಳೂರಿನ ಈ ಕೆಫೆಯಲ್ಲಿ ಲ್ಯಾಪ್‌ಟಾಪ್ ಓಪನ್ ಮಾಡಿದ್ರೆ ಬೀಳುತ್ತೆ ಗಂಟೆಗೆ 99 ರೂ. ದಂಡ! ನೆಟ್ಟಿಗರಿಂದ ಭಾರೀ ಚರ್ಚೆ

ಬೆಂಗಳೂರು: ಸಿಲಿಕಾನದದ ಸಿಟಿ ಬೆಂಗಳೂರಿನಲ್ಲಿ ವರ್ಕ್ ಫ್ರಮ್ ಹೋಮ್ ಅಥವಾ ಕೆಫೆಗಳು, ಹೋಟೆಲ್‌ಗಳಲ್ಲಿ ಕೆಲಸ ಮಾಡುವುದು ಬಹಳ ಸಾಮಾನ್ಯ. ಇದೆಲ್ಲ ಬಿಡಿ ಇತ್ತೀಚೆಗೆ ಒಬ್ಬರು ಟ್ರಾಫಿಕ್‌ ಅಲ್ಲೂ ಕೆಲಸ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿತ್ತು. ಐಟಿ ಉದ್ಯೋಗಿಗಳಿಗೆ ಹೇಗಾಗಿದೆ ಅಂದರೆ ಜಾಗ ಯಾವುದಾದರೇನು? ಒಟ್ಟಿನಲ್ಲಿ ಕೆಲಸ ಆಗಬೇಕು ಅಷ್ಟೇ. ಇನ್ನೂ ನಾವು ಕೆಲವೊಂದು ಹೊಟೇಲಿಗೆ ಅಥವಾ ಕೆಫೆಗಳಿಗೆ ಹೋದಾಗ ಅಲ್ಲಿ ಉದ್ಯೋಗಿಗಳು ಲ್ಯಾಪ್‌ಟಾಪ್ ಹಿಡಿದು ಗಂಟೆಗಟ್ಟಲೆ ಕೂತು ಕೆಲಸ ಮಾಡುವುದನ್ನು ನಾವು ನೋಡಿರುತ್ತೇವೆ.

ಆದರೆ, ವಿಶೇಷವೆಂದರೆ ಇಲ್ಲೊಂದು ಕೆಫೆ ಮಾಲೀಕರು ತಮ್ಮ ಕೆಫೆಯಲ್ಲಿ ಕುಳಿತು ಉಚಿತವಾಗಿ ಕೆಲಸ ಮಾಡುವವರಿಗೆ ಬ್ರೇಕ್ ಹಾಕಲು ಹೊಸ ನಿಯಮವೊಂದನ್ನ ಜಾರಿಗೆ ತಂದಿದ್ದಾರೆ. ಹೌದು, ಲ್ಯಾಪ್‌ಟಾಪ್ ಓಪನ್ ಮಾಡಿ ಕೆಲಸ ಮಾಡಿದರೆ ಗಂಟೆಗೆ 99 ರೂಪಾಯಿ ಶುಲ್ಕ ಪಾವತಿಸಬೇಕು ಎಂಬ ಬೋರ್ಡ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Bengaluru Cafe

ಇಂದಿರಾನಗರ ಕೆಫೆ ಖಾಲಿ ಖಾಲಿ: ಲಿಂಕ್ಡ್‌ಇನ್ ಪೋಸ್ಟ್ ವೈರಲ್

ಬೆಂಗಳೂರಿನ ಪ್ರತಿಷ್ಠಿತ ಹಾಗೂ ದುಬಾರಿ ಕಮರ್ಶಿಯಲ್‌ ಪ್ರದೇಶವಾದ ಇಂದಿರಾನಗರದಲ್ಲಿರುವ ಕೆಫೆಯೊಂದರಲ್ಲಿ ಈ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಬೆಂಗಳೂರು ಮೂಲದ ವೃತ್ತಿಪರರಾದ ಕಾರ್ತಿಕ್ ಸೂರೋಜು ಎಂಬುವವರು ಈ ಕುರಿತು ಲಿಂಕ್ಡ್‌ಇನ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಕೆಫೆಯ ಪ್ರವೇಶದ್ವಾರದಲ್ಲೇ 'ಕೆಫೆಯನ್ನ ವರ್ಕ್‌ಸ್ಪೇಸ್ ಆಗಿ ಬಳಸಿದರೆ ಗಂಟೆಗೆ 99 ರೂ. ಶುಲ್ಕ ವಿಧಿಸಲಾಗುವುದು' ಎಂಬ ದೊಡ್ಡ ಬೋರ್ಡ್ ಹಾಕಲಾಗಿತ್ತು. ನಾನು ಕುತೂಹಲದಿಂದ ಒಳಗೆ ಹೋಗಿ ನೋಡಿದಾಗ ಇಡೀ ಕೆಫೆ ಬಹುತೇಕ ಖಾಲಿಯಾಗಿತ್ತು. ಅಲ್ಲಿ ಯಾರೊಬ್ಬರೂ ಕುಳಿತು ಕೆಲಸ ಮಾಡುತ್ತಿರಲಿಲ್ಲ. ಕೆಫೆ ಮಾಲೀಕರು ಈ ಬೋರ್ಡ್ ಹಾಕುವ ಮೂಲಕ ತಮ್ಮ ಸಮಸ್ಯೆಗೆ ಪರಿಹಾರ ಹುಡುಕುತ್ತಿದ್ದಾರೆ ಎನಿಸಿತು" ಎಂದು ಕಾರ್ತಿಕ್ ತಮ್ಮ ಪೋಸ್ಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಟಿ ಉದ್ಯೋಗಿಗಳು ರಿಮೋಟ್ ವರ್ಕ್ ಮಾಡುವಾಗ ಒಂದೇ ಒಂದು ಕಾಫಿ ಆರ್ಡರ್ ಮಾಡಿ ಐದಾರು ಗಂಟೆಗಳ ಕಾಲ ಟೇಬಲ್ ಆಕ್ರಮಿಸಿಕೊಳ್ಳುತ್ತಾರೆ ಎಂಬುದನ್ನು ಕಾರ್ತಿಕ್ ಕೂಡ ಒಪ್ಪಿಕೊಳ್ಳುತ್ತಾರೆ. ಇಂದಿರಾನಗರದಂತಹ ದುಬಾರಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ಬಾಡಿಗೆ ವಿಪರೀತವಾಗಿರುತ್ತದೆ. ಒಂದು ಟೇಬಲ್‌ ಅಲ್ಲಿ ಒಬ್ಬರೇ ಗಂಟೆಗಟ್ಟಲೆ ಕುಳಿತುಕೊಂಡರೆ, ಹೊಸ ಗ್ರಾಹಕರಿಗೆ ಕೂರಲು ಜಾಗವಿಲ್ಲದೆ ಕೆಫೆಯ ದಿನದ ಆದಾಯಕ್ಕೆ ನೇರ ಹೊಡೆತ ಬೀಳುತ್ತದೆ. ಆದರೆ, "ಗ್ರಾಹಕರಿಗೆ ನೇರವಾಗಿ ಗಂಟೆಗೆ ಇಷ್ಟು ಹಣ ಕೊಡಿ ಎಂದು ಬೋರ್ಡ್ ಹಾಕುವುದರಿಂದ ಗ್ರಾಹಕರಿಗೆ ಬರಲು ಮನಸ್ಸು ಒಪ್ಪುದಿಲ್ಲ. ಬದಲಿಗೆ ಅದು ಗ್ರಾಹಕರನ್ನು ಮುಜುಗರಕ್ಕೀಡು ಮಾಡಿ, ದೂರ ತಳ್ಳಿದಂತಾಗುತ್ತದೆ" ಎಂದು ಅವರು ವಾದಿಸಿದ್ದಾರೆ.

ಪರ-ವಿರೋಧ ಚರ್ಚೆಗಳೇನು?

ಕಾರ್ತಿಕ್ ಅವರ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಪರ ಹಾಗೂ ವಿರೋಧ ಚರ್ಚೆಗಳು ಶುರುವಾಗಿವೆ. ಹಲವು ಮಂದಿ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಕೆಲವರು ಕೆಫೆಯ ನಿರ್ಧಾರವನ್ನು ಬೆಂಬಲಿಸಿದ್ದು, "ಯಾವುದೇ ಬಿಸಿನೆಸ್ ಆಗಲಿ, ಉಚಿತ ಕೋ-ವರ್ಕಿಂಗ್ ಸ್ಪೇಸ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಅತ್ಯಂತ ಕಡಿಮೆ ಬಿಲ್ ಮಾಡಿ ಹೆಚ್ಚು ಹೊತ್ತು ಕೂರುವುದರಿಂದ ರಶ್ ಇರುವ ಸಮಯದಲ್ಲಿ ಕೆಫೆಗೆ ನಷ್ಟವಾಗುತ್ತದೆ" ಎಂದು ಹೇಳಿದ್ದಾರೆ.

ಮತ್ತೆ ಕೆಲವರು, "ಗ್ರಾಹಕರು ಒಳಬರುವ ಮುನ್ನವೇ ಇಂಥದ್ದೊಂದು ಬೋರ್ಡ್ ನೋಡಿ ಬೇರೆ ಕೆಫೆಗಳತ್ತ ಮುಖ ಮಾಡುತ್ತಾರೆ. ಇದು ಬಿಸಿನೆಸ್‌ಗೆ ನಷ್ಟ" ಎಂದಿದ್ದಾರೆ. ನೇರವಾಗಿ ಗಂಟೆ ಲೆಕ್ಕದಲ್ಲಿ ಶುಲ್ಕ ವಿಧಿಸುವ ಬದಲು, ಕನಿಷ್ಠ ಇಷ್ಟು ಬಿಲ್ ಮಾಡಲೇಬೇಕೆಂಬ ನಿಯಮ, ಲ್ಯಾಪ್‌ಟಾಪ್ ಬಳಕೆದಾರರಿಗೆಂದೇ ಪ್ರತ್ಯೇಕ ವಲಯಗಳನ್ನು ಮೀಸಲಿಡುವುದು ಅಥವಾ ರಶ್ ಇರುವಾಗ ಮಾತ್ರ ಸಮಯದ ಮಿತಿ ಹೇರುವುದು ಉತ್ತಮ ಎಂಬ ಸಕಾರಾತ್ಮಕ ಸಲಹೆಗಳು ಕೂಡ ವ್ಯಕ್ತವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+