ಬಿಬಿಎಂಪಿ ಶಾಲಾ ಮಕ್ಕಳಿಗಾಗಿ ಹೊಸ ಚಾನೆಲ್ 'ಡಿಡಿ ರೋಶಿನಿ'
ಬೆಂಗಳೂರು, ಡಿಸೆಂಬರ್ 7: ಬಿಬಿಎಂಪಿ ಶಾಲಾ ಮಕ್ಕಳಿಗಾಗಿ ಹಾಗೂ ಶಿಕ್ಷಣದ ಗುಣಮಟ್ಟ ಉತ್ತಮವಾಗಿಸಲು ದೂರದರ್ಶನ ಹೊಸ ಕಲಿಕಾ ವಾಹಿನಿ 'ರೋಶಿನಿ'ಯನ್ನು ಆರಂಭಿಸಿದೆ.
ಮೈಕ್ರೋ ಸಾಫ್ಟ್ ಹಾಗೂ ಟೆಕ್ ಅವಾಂತ ಸಂಸ್ಥೆಯು ಸಹಯೋಗದಲ್ಲಿ ಬಿಬಿಎಂಪಿಯ ಎಲ್ಲಾ 156 ಶಾಲೆ ಮತ್ತು ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಯಾಟಲೈಟ್ ಶಿಕ್ಷಣ ನೀಡಲಾಗುತ್ತದೆ.
ಜತೆಗೆ ಮನೆಯಲ್ಲಿ ಕುಳಿತು ಪಾಠ ಕೇಳುವ ವ್ಯವಸ್ಥೆಗಾಗಿ ದೂರದರ್ಶನ ಸಂಸ್ಥೆ ರೋಶನಿ ಹೆರಿನಲ್ಲಿ ವಾಹಿನಿ ಆರಂಭಿಸಿದೆ.

ಡಿಡಿ ರೋಶಿನಿ ವಾಹಿನಿಯಲ್ಲಿ ಮೂರು ಕ್ಲಾಸ್‌ಗಳು ನಡೆಯಲಿವೆ., ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಪ್ರಿಪರೇಟರಿ ಪಠ್ಯ, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ನಿತ್ಯದ ಪಾಠ ಹಾಗೂ ಸಂಜೆ 5 ರಿಂದ ರಾತ್ರಿ 10ರವರೆಗೆ ಹಿಂದಿನ ತರಗತಿ ಮರು ಪ್ರಸಾರವಾಗಲಿದೆ.
ವಾಹಿನಿ ಪ್ರಸಾರಕ್ಕಾಗಿ ದೂರದರ್ಶನಕ್ಕೆ ಗಂಟೆ 2 ಸಾವಿರ ರೂ ನಂತೆ ದಿನವೊಂದಕ್ಕೆ 36 ಸಾವಿರ ರೂಗಳನ್ನು ನೀಡಲಾಗುತ್ತದೆ. ಒಟ್ಟು 5 ವರ್ಷಕ್ಕೆ 100 ಕೋಟಿ ವೆಚ್ಚ ಮಾಡಲಾಗುತ್ತದೆ.












Click it and Unblock the Notifications