ಬೇರೆ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಏನೆಲ್ಲ ದುಬಾರಿ?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈಗ ವಾಸಿಸುವುದು ದುಬಾರಿ ಎಂಬ ಚರ್ಚೆ ಶುರುವಾಗಿದೆ. ಸರ್ಕಾರಗಳಿಂದ ಬೆಲೆ ಏರಿಕೆ ಜೊತೆಗೆ ಇಲ್ಲಿನ ದುಬಾರಿ ಬೆಲೆಗಳಿಂದ ಜನಸಾಮಾನ್ಯರು ಜೀವನ ನಡೆಸುವುದು ಬಹಳ ಕಷ್ಟ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ನಿವಾಸಿಯೊಬ್ಬ ಬೇರೆ ನಗರಗಳೊಂದಿಗೆ ಹೋಲಿಸಿ ಇಲ್ಲಿನ ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಬೆಂಗಳೂರನ್ನು ವಾಸಕ್ಕೆ ಅತ್ಯಂತ ದುಬಾರಿ ನಗರ ಎಂದು ಅವರು ಕರೆದಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಗಂಭೀರ ಚರ್ಚೆ ಹುಟ್ಟುಹಾಕಿದೆ. ರೆಡ್ಡಿಟ್‌ನಲ್ಲಿ ಈನ ಪೋಸ್ಟ್ ಹಾಕಿದ ನಂತರ ಹಲವು ಮಂದಿ ಬೆಂಗಳೂರಿನ ದುಬಾರಿತನಕ್ಕೆ ಬೆಚ್ಚಿಬಿದ್ದಿದ್ದಾರೆ.
ರೆಡ್ಡಿಟ್‌ನಲ್ಲಿ ವ್ಯಕ್ತಿ ಪೋಸ್ಟ್ ಮಾಡಿಕೊಂಡಿದ್ದು, ಪುಣೆ, ಅಹಮದಾಬಾದ್, ಮುಂಬೈ, ಕೋಲ್ಕತ್ತಾ, ಹೈದರಾಬಾದ್ ಸೇರಿದಂತೆ ವಿವಿಧ ಪ್ರಮುಖ ನಗರಗಳಲ್ಲಿ ವಸತಿ ವೆಚ್ಚಗಳನ್ನು ಹೋಲಿಕೆ ಮಾಡಿದ್ದಾನೆ. ಬಳಿಕ ಬೇರೆ ನಗರಗಳಿಗೆ ಹೋಲಿಸಿದರೆ, ಬೆಂಗಳೂರಿನಲ್ಲಿನ ಹೆಚ್ಚಿನ ಜೀವನ ವೆಚ್ಚದ ಬಗ್ಗೆ ವಿವರವಾದ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿನ ಮನೆ ಬಾಡಿಗೆ ಬೆಲೆಗಳಿಂದ ಹಿಡಿದು ದುಬಾರಿ ಆಹಾರ, ದುಬಾರಿ ಜೀವನಶೈಲಿಯ ನಡುವೆ ನಗರದ ಆರ್ಥಿಕ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾನೆ.

ಆದರೆ ಈ ವ್ಯಕ್ತಿಯು ಸುಖಾಸುಮ್ಮನೆ ಬೆಂಗಳೂರನ್ನು ದುಬಾರಿ ನಗರ ಎಂದು ಕರೆದಿಲ್ಲ. ಬೇರೆ ನಗರಗಳೊಂದಿಗೆ ಬೆಂಗಳೂರಿನ ವೆಚ್ಚಗಳನ್ನು ಅಳೆದು ತೂಗಿಯೇ ಈ ರೀತಿ ಹೇಳಿಕೆ ನೀಡಿದ್ದಾನೆ. ಬೆಂಗಳೂರಿಗೆ ಹೋಲಿಸಿದರೆ ವಸತಿ, ಆಹಾರ, ಸಾರಿಗೆ ಸೇರಿದಂತೆ ಪ್ರಮುಖ ವೆಚ್ಚಗಳು ಹೆಚ್ಚು ಕೈಗೆಟುಕುವಂತಿವೆ ಎಂದಿದ್ದಾರೆ. ಇನ್ನು ಬೆಂಗಳೂರಿನ ವಿಷಯಕ್ಕೆ ಬಂದಾಗ, ಯಾವುದೂ ಅಗ್ಗವಾಗಿಲ್ಲ. ಇಲ್ಲಿನ ಕುಟುಂಬ ನಿರ್ವಹಣೆಗೆ 50,000 ರಿಂದ 60,000 ರೂಪಾಯಿ ಮಾಸಿಕ ಸಂಬಳ ಕೂಡ ಸಾಕಾಗುವುದಿಲ್ಲ ಎಂದು ಹೇಳಿದ್ದಾನೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಪರ ವಿರೋಧದ ಚರ್ಚೆ ನಡೆಯುತ್ತಿದೆ. ಕೆಲವರು ಆ ವ್ಯಕ್ತಿಯ ಹೇಳಿಕೆಯನ್ನು ಒಪ್ಪಿಕೊಂಡರೆ, ಹೆಚ್ಚಿನವರು ತಮ್ಮದೇ ಆದ ಹೋಲಿಕೆಗಳೊಂದಿಗೆ ಇತರ ನಗರಗಳು ಮತ್ತು ಅವುಗಳ ವೆಚ್ಚಗಳನ್ನು ಉಲ್ಲೇಖಿಸಿ ವಾಸ್ತವವಾಗಿ ಬೆಂಗಳೂರು ಕೆಲವು ಅಂಶಗಳಲ್ಲಿ ಅಗ್ಗವಾಗಿದೆ ಎಂದು ವಾದಿಸಿದ್ದಾರೆ. ಬೆಲೆ ವಿಷಯಕ್ಕೆ ಬಂದಾಗ ಮುಂಬೈ ಬೀದಿ ಆಹಾರವು ಬೇರೆಯದೇ ಲೆವೆಲ್‌ನಲ್ಲಿದೆ. ಬೆಂಗಳೂರು ಮುಂಬೈನಷ್ಟು ದುಬಾರಿ ಅಲ್ಲ. ನಾನು ಎರಡೂ ನಗರಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇನೆ ಎಂದಿದ್ದಾರೆ.

ಅಲ್ಲದೆ ಬೆಂಗಳೂರಿನಂತೆಯೇ ಹೈದರಾಬಾದ್ ಕೂಡ ಭಾರೀ ದುಬಾರಿಯಾಗಿದೆ. ನಾನು ಕಳೆದ ಒಂದು ವರ್ಷದಿಂದ ಇದನ್ನು ಕಣ್ಣಾರೆ ನೋಡಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ನಾನು ಪುಣೆಯಲ್ಲಿ ವಾಸಿಸುತ್ತಿದ್ದೇನೆ, ಆದರೆ ನಾನು ಈಗ ಬೆಂಗಳೂರಿಗೆ ವಾಪಸ್ ಬರಲು ಪ್ಲ್ಯಾನ್ ಮಾಡುತ್ತಿದ್ದೇನೆ. ಇಲ್ಲಿನ ಆಹಾರ ವ್ಯವಸ್ಥೆಯು ತುಂಬಾ ಕಳಪೆಯಾಗಿದೆ ಎಂದು ಹಲವರು ಹೇಳಿದ್ದಾರೆ. ನಾನು ಮುಂಬೈ ಮತ್ತು ಬೆಂಗಳೂರಿನಲ್ಲಿ ಉಳಿದುಕೊಂಡಿದ್ದೇನೆ. ಮುಂಬೈನಲ್ಲಿ ಏಕೈಕ ಅಗ್ಗದ ವಸ್ತು ಎಂದರೆ ಮದ್ಯ, ಮಸಾಲ ದೋಸೆಗೆ 120 ರೂಪಾಯಿ ಪಾವತಿಸಿದ್ದನ್ನು ನಾನು ನೆನಪಿಸಿಕೊಳ್ಳುತ್ತೇನೆ ಎಂದು ಮತ್ತೊಬ್ಬರು ಹೇಳಿದ್ದಾರೆ.












Click it and Unblock the Notifications