ಬೆಂಗಳೂರಿನ 5 ಸ್ಮಾರ್ಟ್ ರಸ್ತೆಗಳು ಜನವರಿ 21ರಂದು ಓಪನ್
ಬೆಂಗಳೂರು, ಜನವರಿ 11: ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಿರ್ಮಾಣ ಅಭಿವೃದ್ಧಿಪಡಿಸಲಾಗಿರುವ ಐದು ರಸ್ತೆಗಳು ಜನವರಿ 21 ರಂದು ಸಾರ್ವಜನಿಕರ ಬಳಕೆಗೆ ಲಭ್ಯವಾಗಲಿದೆ.
ಹಯಾಸ್ ರಸ್ತೆ, ಮಗ್ರತ್ ರಸ್ತೆ, ವುಡ್ ಸ್ಟ್ರೀಟ್ ರಸ್ತೆ, ಟೇಟ್ ಲೇನ್, ರೇಸ್‌ಕೋರ್ಸ್‌ನ ಕೆಲವು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕುರಿತು ಬಿಬಿಎಂಪಿ ಅಟ್ಮಿನಿಸ್ಟ್ರೇಟರ್ ಗೌರವ್ ಗುಪ್ತಾ ಪರಿಶೀಲನೆಗೆಂದು ಬಂದಿದ್ದಾಗ ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಮುಗಿಯಬೇಕೆಂದು ಹೇಳಿದ್ದರು, ಆದರೆ ಕೆಲವು ಕೆಲಸಗಳು ಬಾಕಿ ಇದ್ದ ಕಾರಣ ಜನವರಿ 21 ರಂದು ಸಾರ್ವಜನಿಕರ ಬಳಕೆಗೆ ನೀಡಲಾಗುತ್ತಿದೆ.
ಸ್ಮಾರ್ಟ್ ಸಿಟಿಯ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ಚೋಳನ್ ಮಾತನಾಡಿ, ಕೆಲವೇ ದಿನಗಳಲ್ಲಿ ರಸ್ತೆಯು ಬಳಕೆ ದೊರೆಯಲಿದೆ. ಇಷ್ಟು ದಿನ ತಡವಾಗಿದ್ದಕ್ಕೆ ಕ್ಷಮೆ ಕೋರುತ್ತೇನೆ ಎಂದಿದ್ದಾರೆ.

ಬಿಡಬ್ಲ್ಯೂಎಸ್‌ಎಸ್‌ಬಿ, ಬಿಬಿಎಂಪಿ, ಬೆಸ್ಕಾಂ, ಕೆಪಿಟಿಸಿಎಲ್ ನಡುವೆ ಹೊಂದಾಣಿಕೆ ಇಲ್ಲದಿರುವುದು ಕಾಮಗಾರಿ ತಡವಾಗಲು ಕಾರಣವಾಗಿದೆ. ರಸ್ತೆ ಕಾಮಗಾರಿ ನಡೆಯುವಾಗ ಒಳಚರಂಡಿ ಕಾಮಗಾರಿಗಳನ್ನು ಜಲ ಮಂಡಳಿ ಬೇಗ ನಿರ್ವಹಿಸಬೇಕಿತ್ತು, ಅದನ್ನೂ ಕೂಡ ತಡ ಮಾಡಿದೆ.
ರಾಜ್‌ಭವನ್, ಮಿಲ್ಲರ್ಸ್ ರಸ್ತೆ, ರೆನಿಯಸ್ ಸ್ಟ್ರೇಟ್, ರೇಸ್‌ಕೋರ್ಸ್ ರಸ್ತೆಯ ಕಾಮಗಾರಿ ಜನವರಿ 16 ರಿಂದ 31ರ ಒಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ.












Click it and Unblock the Notifications