Bengaluru Rent: ಬೆಂಗಳೂರಿನ ಅಪಾರ್ಟ್‌ಮೆಂಟ್‌ ಬಾಡಿಗೆ ₹2.7 ಲಕ್ಷ, ಅಡ್ವಾನ್ಸ್‌ ಕೇಳಿದ್ರೆ ತಲೆ ತಿರುಗುತ್ತೆ!

ಬೆಂಗಳೂರಿನಲ್ಲಿ ಕಡಿಮೆ ಬಾಡಿಗೆಗೆ ಮನೆ ಸಿಗುವ ವಾತಾವರಣವಿಲ್ಲ. ದಿನದಿಂದ ದಿನಕ್ಕೆ ಎಲ್ಲ ವಸ್ತುಗಳ ದರ ನಿಧಾನವಾಗಿ ಏರಿದರೆ, ಬಾಡಿಗೆ ದರ ಮಾತ್ರ ಆಕಾಶಕ್ಕೆ ಏಣಿ ಹಾಕಿದೆ. ಈ ದುಬಾರಿ ವಾತಾವರಣದಲ್ಲಿ ಬದುಕುವುದು ತುಂಬಾ ಕಷ್ಟ ಎಂದು ಲಕ್ಷ ಲಕ್ಷ ಸಂಬಳ ಪಡೆಯುವವರೇ ಇತ್ತೀಚೆಗೆ ಬೇಸರ ಹೊರಹಾಕಿದ್ದರು. ಇದೀಗ ಬೆಂಗಳೂರಿನಲ್ಲಿ ಅಪಾರ್ಟ್‌ಮೆಂಟ್‌ವೊಂದರ ತಿಂಗಳ ಬಾಡಿಗೆ ವಿಚಾರದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆ ಅಪಾರ್ಟ್‌ಮೆಂಟ್‌ನ ತಿಂಗಳ ಬಾಡಿಗೆ, ಅಡ್ವಾನ್ಸ್‌ ಕೇಳಿ ಬೆಂಗಳೂರಿಗರ ತಲೆ ತಿರುಗುತ್ತಿದೆ.

ಹೌದು ಬೆಂಗಳೂರಿನ ನಿವಾಸಿಯೊಬ್ಬರು ಈ ದುಬಾರಿ ಅಪಾರ್ಟ್‌ಮೆಂಟ್ ಬಗ್ಗೆ ವಿಚಾರ ಬಹಿರಂಗಪಡಿಸಿದ್ದಾರೆ. ಇದು ನೋಡಲು ಒಳ್ಳೆಯ ಫ್ಲಾಟ್ ಆಗಿ ಕಾಣುತ್ತಿತ್ತು. ಆದರೆ ಅಂತಹ ದುಬಾರಿ ಬೆಲೆಗೆ ಅದು ಯೋಗ್ಯವಾಗಿಲ್ಲ ಎಂದು ನೇರವಾಗಿ ಹೇಳಿದ್ದಾರೆ. ಬೆಂಗಳೂರಿನ ಹರಳೂರು ಬಳಿಯ 3 ಬಿಎಚ್‌ಕೆ ಅಪಾರ್ಟ್‌ಮೆಂಟ್‌ನ ದುಬಾರಿ ಬಾಡಿಗೆಯನ್ನು ಪ್ರಶ್ನಿಸಿ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ತೀವ್ರ ಚರ್ಚೆಗೆ ಕಾರಣವಾಗಿದ್ದು, ಬೆಂಗಳೂರಿನ ಅಸ್ಥಿರವಾದ ಬಾಡಿಗೆ ಮಾರುಕಟ್ಟೆಯ ಬಗ್ಗೆ ಹತಾಶೆಗೂ ಕಾರಣವಾಗಿದೆ.

bengaluru-3bhk-apartment-rent-2-lakh-per-month-sparks-online-debate

ರೆಡ್ಡಿಟ್‌ನಲ್ಲಿ ʼಹರಳೂರಿನಲ್ಲಿ 3 ಬಿಎಚ್‌ಕೆಗೆ ಮಾಸಿಕ 2.7 ಲಕ್ಷ ಬಾಡಿಗೆ?ʼ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಹಂಚಿಕೊಳ್ಳಲಾಗಿದೆ. ಸುಮಾರು 1,464 ಚದರ ಅಡಿ ಅಪಾರ್ಟ್‌ಮೆಂಟ್‌ಗೆ ತಿಂಗಳಿಗೆ ಬರೋಬ್ಬರಿ 2.7 ಲಕ್ಷ ರೂಪಾಯಿ ಬಾಡಿಗೆ ದರಪಟ್ಟಿಯ ಸ್ಕ್ರೀನ್‌ಶಾಟ್ ಅನ್ನು ಕೂಡ ಹಂಚಿಕೊಳ್ಳಲಾಗಿದ್ದು, ₹15 ಲಕ್ಷ ರೂಪಾಯಿ ಭದ್ರತಾ ಠೇವಣಿಯನ್ನು (ಅಡ್ವಾನ್ಸ್‌) ಸಹ ಹೊಂದಿದೆ. ಇದು ನಿಜವಾಗಿಯೂ ಜನರು ಪಾವತಿಸುವ ಬಾಡಿಗೆಯೇ ಎಂದು ಹಲವರು ಪ್ರಶ್ನೆ ಕೇಳಿದ್ದಾರೆ.

ಈ ಪೋಸ್ಟ್‌ಗೆ ಜನ ಹೇಳಿದ್ದೇನು?

ಈ ಪೋಸ್ಟ್ ವೈರಲ್‌ ಆಗಿದೆ ಚರ್ಚೆಗೆ ಗ್ರಾಸವಾಗಿದೆ. ಬೆಂಗಳೂರಿನ ಇತರೆ ಬಾಡಿಗೆ ನಿವಾಸಿಗಳು ಮತ್ತು ಬಾಡಿಗೆದಾರರು ಇದಕ್ಕೆ ತಮ್ಮದೇ ಅಭಿಪ್ರಾಯಗಳ ಕಾಮೆಂಟ್‌ ಮಾಡಿದ್ದಾರೆ. ಬಹುಶಃ ಈ ಸುದ್ದಿ ಸುಳ್ಳಿರಬಹುದು ಎಂದೂ ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ನಮ್ಮ ಪ್ರಕಾರ ಇಷ್ಟು ಬಾಡಿಗೆ ಯಾರೂ ಪಾವತಿಸುವುದಿಲ್ಲ. 50,000 ರೂಪಾಯಿಗೆಲ್ಲ ಒಳ್ಳೆಯ ಫ್ಲಾಟ್‌ಗಳು ಬಾಡಿಗೆಗೆ ಸಿಗುತ್ತವೆ ಎಂದು ಉದಾಹರಣೆ ಕೊಟ್ಟಿದ್ದಾರೆ.

ನನ್ನ ಪ್ರಕಾರ ಈ ದರ ಪಟ್ಟಿಯನ್ನು ಎಡವಟ್ಟಿನಿಂದ ಮುದ್ರಿಸಿರಬಹುದು. ಒಂದು ಸೊನ್ನೆಯನ್ನು ತಪ್ಪಾಗಿ ಸೇರಿಸಿರುವ ಕಾರಣ ಸಾವಿರದ ದರ ಲಕ್ಷ ದಾಟಿದೆ. ಕೆಲವರು ಹೆಚ್ಚು ಉದ್ದೇಶಪೂರ್ವಕ ಈ ಬೆಲೆ ನಿಗದಿ ಆಟಗಳನ್ನು ಆಡುತ್ತಿರಬಹುದು ಎಂದು ಶಂಕಿಸಿದ್ದಾರೆ. ಇನ್ನೂ ಕೆಲವರು ಏಜೆಂಟ್‌ಗಳು ಬಾಡಿಗೆ ದರ ಹೆಚ್ಚಿಸಲು ಆಡುವ ನಾಟಕ ಇದು ಎಂದಿದ್ದಾರೆ. ಐಟಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ಬಾಡಿಗೆ ಹೊರೆಯೇನಲ್ಲ ಎಂದು ಗಮನಸೆಳೆದಿದ್ದಾರೆ.

ಒಟ್ಟಾರೆ ಬೆಂಗಳೂರಿನಲ್ಲಿ ಬಾಡಿಗೆ ದರ ದುಬಾರಿಯೇ, ಆದರೆ ಇಲ್ಲಿ ಹೇಳಿದಂತೆ ಅಷ್ಟು ದುಬಾರಿಯಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಲಕ್ಷಗಟ್ಟಲೆ ಬಾಡಿಗೆ ಕಟ್ಟಿದರೆ ಬೆಂಗಳೂರಿನಲ್ಲಿ ಬದುಕುವುದು ಹೇಗೆ? ಎಂದಿದ್ದಾರೆ. ಬರುವುದೇ ಸಾವಿರದ ಸಂಬಳ, ಇನ್ನು ಲಕ್ಷದ ಬಾಡಿಗೆ ಕಟ್ಟುವ ಧಮ್ಮು, ತಾಕತ್ತು ನಮಗಿಲ್ಲ ಬಿಡಿ ಎಂದು ಹಾಸ್ಯಚಟಾಕಿ ಹಾರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+