Bengaluru 2nd Airport: ಬೆಂಗಳೂರು - ಹೊಸೂರು ವಿಮಾನ ನಿಲ್ದಾಣಗಳ ಬಿಗ್ ಅಪ್ಡೇಟ್ !
Bengaluru 2nd Airport:ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಈಗಾಗಲೇ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳನ್ನು ಕರ್ನಾಟಕ ಸರ್ಕಾರವು ಫೈನಲ್ ಮಾಡಿದೆ. ಆದರೆ, ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರವು ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ಹಾಗಾದರೆ ವಿಮಾನ ನಿಲ್ದಾಣ ವಿಚಾರದಲ್ಲಿ ಕರ್ನಾಟಕ ಅಥವಾ ತಮಿಳುನಾಡು ಯಾವ ರಾಜ್ಯ ಮುಂಚೂಣಿಯಲ್ಲಿ ಇದೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಎಲ್ಲಾ ಕಡೆಗಳಿಂದಲೂ ಪೈಪೋಟಿ ಎದುರಾಗಿದೆ. ಕರ್ನಾಟಕದಲ್ಲಿಯೇ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ಪೈಪೋಟಿ ಶುರುವಾಗಿದೆ. ಇದೀಗ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಆಗಿದೆ. ಆದರೆ, ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕಿಂತ ತಮಿಳುನಾಡಿನ ಹೊಸೂರು ವಿಮಾನ ನಿಲ್ದಾಣವು ಎರಡು ಹಂತ ಮುಂದಿದೆ. ಯಾವ ವಿಮಾನ ನಿಲ್ದಾಣದ ಪ್ರಕ್ರಿಯೆ ಯಾವ ಹಂತದಲ್ಲಿದೆ ಹಾಗೂ ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕಿಂತ ಹೊಸೂರು ವಿಮಾನ ನಿಲ್ದಾಣದ ಪ್ರಕ್ರಿಯೆ ಎಷ್ಟು ಮುಂದಿದೆ ಎನ್ನುವ ವಿವರ ನೋಡೋಣ..

ಕರ್ನಾಟಕದ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೂರು ಜಾಗಗಳನ್ನು ಕರ್ನಾಟಕ ಸರ್ಕಾರವು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಇನ್ನು ನೆರೆಯ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ಎರಡು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. ಈ ಎರಡು ಶಾರ್ಟ್ ಲಿಸ್ಟ್ ಜಾಗದಲ್ಲಿ ಭರ್ಜರಿ ಪ್ರಕ್ರಿಯ ನಡೆದಿದೆ. ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸದಸ್ಯರು ಈಗಾಗಲೇ ತಮಿಳುನಾಡಿನ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎಂದು ಶಾರ್ಟ್ ಲಿಸ್ಟ್ ಮಾಡಲಾಗಿರುವ ಎರಡೂ ಜಾಗಗಳನ್ನೂ ಪರಿಶೀಲನೆ ಮಾಡಿದ್ದು, ಈ ಎರಡೂ ಜಾಗಗಳೂ ಸಹ ವಿಮಾನ ನಿಲ್ದಾಣ ನಿಮಾರ್ಣಕ್ಕೆ ಸೂಕ್ತ ಎಂದು ವರದಿ ಕೊಟ್ಟಿದೆ.
ಇನ್ನು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮೂರು ಜಾಗಗಳನ್ನು ಶಾರ್ಟ್ ಲಿಸ್ಟ್ ಕೊಟ್ಟಿದ್ದು. ಈ ಜಾಗದಲ್ಲಿ ಕೇಂದ್ರ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸದಸ್ಯರು ಏಪ್ರಿಲ್ ಮೊದಲ ವಾರದಲ್ಲಿ ಪರಿಶೀಲನೆ ನಡೆಸಲಿದ್ದಾರೆ. ಈಗಾಗಲೇ ತಮಿಳುನಾಡು ಸರ್ಕಾರವು ನಿಗದಿ ಮಾಡಿರುವ ಯಾವ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮೊದಲ ಹಂತದ ಪ್ರಕ್ರಿಯೆಗಳನ್ನು ಶುರು ಮಾಡಿದೆ.
ಕರ್ನಾಟಕಕ್ಕೆ ಹೋಲಿಕೆ ಮಾಡಿದರೆ ತಮಿಳುನಾಡು ಸರ್ಕಾರವು ವೇಗವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಕೆ ಮಾಡುವಾಗಲೇ ತಮಿಳುನಾಡಿಗಿಂತ ತುಂಬಾ ವಿಳಂಬವಾಗಿ ಸಲ್ಲಿಕೆ ಮಾಡಿತ್ತು. ತಮಿಳುನಾಡು ಸರ್ಕಾರವು ಪ್ರಸ್ತಾವನೆ ಸಲ್ಲಿಸಿದ ಮೇಲಷ್ಟೇ ನಮ್ಮಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗ ಅಂತಿಮಗೊಳಿಸುವ ಪ್ರಕ್ರಿಯೆ ಚುರುಕು ಪಡೆದುಕೊಂಡಿತ್ತು.
ಕೇಂದ್ರ ತಂಡದಿಂದ ಪರಿಶೀಲನೆ: ಇನ್ನು ಇದೇ ವಾರದಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸದಸ್ಯರು ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ನಿಗದಿ ಮಾಡಲಾಗಿರುವ ಮೂರು ಜಾಗಗಳನ್ನು ಪರಿಶೀಲನೆ ಮಾಡಲಿದ್ದಾರೆ. ಈ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವೇ ಎಂದು ಪರಿಶೀಲನೆ ಮಾಡಲಿದ್ದಾರೆ. ಆದರೆ ಹೊಸೂರಿನ ವಿಮಾನ ನಿಲ್ದಾಣದ ವಿಚಾರದಲ್ಲಿ ಈಗಾಗಲೇ ಈ ಪ್ರಕ್ರಿಯೆಗಳು ಪೂರ್ಣಗೊಂಡಿದೆ.
ಬೆಂಗಳೂರು ವಿಮಾನ ನಿಲ್ದಾಣ ನಿರ್ಮಾಣವಾದರೆ ಭರ್ಜರಿ ಲಾಭವಾಗಲಿದೆ. ಅದರಲ್ಲೂ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರುವವರು ಹಾಗೂ ಹೊರ ವಲಯದಲ್ಲಿ ಇರುವವರಿಗೆ ಏಕಕಾಲದಲ್ಲಿ ಬಂಪರ್ ಲಾಟರಿ ಸಿಗಲಿದೆ. ಯಾಕೆಂದರೆ ಹೊಸೂರು ಹಾಗೂ ಬೆಂಗಳೂರು ಎರಡನೇ ವಿಮಾನ ನಿಲ್ದಾಣ ಎರಡರಿಂದಲೂ ರಿಯಲ್ ಎಸ್ಟೇಟ್‌ಗೆ ಭರ್ಜರಿ ಲಾಭವೇ ಆಗಲಿದೆ.












Click it and Unblock the Notifications