ಬಿಡಿಎ ವಾಣಿಜ್ಯ ಮಳಿಗೆ ಇ ಹರಾಜು ಪ್ರಕ್ರಿಯೆ ಜೂ. 02 ರಿಂದ ಆರಂಭ

ಬೆಂಗಳೂರು, ಜೂ. 01: ನಗರದ ಕೆಂಗೇರಿಯ ವಲಗೇರಹಳ್ಳಿ ಮತ್ತು ಹಲಗ ವಡೇರಹಳ್ಳಿಯಲ್ಲಿ ನಿರ್ಮಿಸಿರುವ ವಾಣಿಜ್ಯ ಸಂಕೀರ್ಣಗಳ ಮಳಿಗೆಗಳನ್ನು ಗುತ್ತಿಗೆ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಇ- ಹರಾಜು ಪ್ರಕಟಣೆ ಹೊರಡಿಸಿದೆ.

ಕೆಂಗೇರಿ ಹೋಬಳಿಯ ವಲಗೇರಹಳ್ಳಿಯಲ್ಲಿರುವ ಬಿಡಿಎ ವಾಣಿಜ್ಯ ಸಂಕೀರ್ಣದ ಮಳಿಗೆಗಳನ್ನು ಹಾಗೂ ಹಲಗೇ ವಡೇರನಹನಹಳ್ಳಿಯ ವಸತಿ ಸಮುಚ್ಛಯದಲ್ಲಿರುವ ವಾಣಿಜ್ಯ ಮಳಿಗೆಗಳನ್ನು ಗುತ್ತಿಗೆ ನೀಡಲಾಗುತ್ತಿದೆ. ಈ ಕುರಿತು ಇ ಹರಾಜು ಮೂಲಕ ವಾಣಿಜ್ಯ ಮಳಿಗೆ ಪಡೆಯಲು ಬಿಡಿಎ ಅವಕಾಶ ಕಲ್ಪಿಸಿದೆ. ಒಂದೇ ಬಾರಿಗೆ ಬಿಡ್ ಮೊತ್ತ ಪಾವತಿಸಿ ವಾಣಿಜ್ಯ ಮಳಿಗೆಯಲ್ಲಿ ವಹಿವಾಟು ನಡೆಸಬಹುದು. ಬಿಡ್ ಮೊತ್ತ ಪಾವತಿಸಿದ ಬಳಿಕ ಯಾವುದೇ ಬಾಡಿಗೆ ಪಾವತಿ ಮಾಡುವಂತಿಲ್ಲ.

ಜೂ. 2 ರಂದು ಇ ಹರಾಜು ಪ್ರಕ್ರಿಯೆ ಹಾಗೂ ನೇರ ಬಿಡ್ಡಿಂಗ್ ಅರಂಭವಾಗಲಿದೆ. ಜೂ. 13 ರೊಳಗೆ ಆಸಕ್ತರು ಇ - ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು. ಜೂ. 14 ರಂದು ಸಂಜೆ ಆರು ಗಂಟೆಗೆ ಇ ಹರಾಜು ಪ್ರಕ್ರಿಯೆ ಮುಕ್ತಾಯವಾಗಲಿದೆ. ಹಲಗೇ ವಡೇರನಹಳ್ಳಿ ವಸತಿ ಸಮುಚ್ಛಯದಲ್ಲಿರುವ 37 ಮಳಿಗೆ ಹಾಗೂ ವಲಗೇರಹಳ್ಳಿ ವಾಣಿಜ್ಯ ಸಂಕೀರ್ಣದಲ್ಲಿರುವ 33 ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ಗುತ್ತಿಗೆ ಪಡೆಯಲು ಆಸಕ್ತಿ ಉಳ್ಳವರು ಇ- ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದು.

BDA Commercial Complexes E Auction Process to starts from June 2

ಇ ಹರಾಜು ಷರತ್ತುಗಳು:

ಜೂ. 2 ರಂದು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿರುವ ಇ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವರು ಭಾರತೀಯ ಪ್ರಜೆ ಆಗಿರಬೇಕು. ಮತದಾರರ ಗುರುತಿನ ಚೀಟಿ, ವಾಹನ ಚಾಲನ ಪರವಾನಗಿ, ಆಧಾರ್ ಕಾರ್ಡ್ ನ್ನು ಕಡ್ಡಾಯವನ್ನು ಇ ಹರಾಜು ಪೋರ್ಟ್ ನಲ್ಲಿ ಅಪ್‌ಲೋಡ್ ಮಾಡಬೇಕು. ಅನಿವಾಸಿ ಭಾರತೀಯ ಆಗಿದ್ದಲ್ಲಿ ನೋಟರಿ ಮಾಡಿಸಿ ಇ ಹರಾಜಿನಲ್ಲಿ ಪಾಲ್ಗೊಳ್ಳಬಹುದು. ಇ ಹರಾಜಿನಲ್ಲಿ ಪಾಲ್ಗೊಳ್ಳುವರು ಭಾವಚಿತ್ರವನ್ನು ಇ ಪೋರ್ಟಲ್ ನಲ್ಲಿ ಅಪ್‌ಲೋಡ್ ಮಾಡಬೇಕು. ಅಲ್ಲದೆ ಖರೀದಿದಾರರು ಇ ಮೇಲ್ ವಿಳಾಸ, ಮೊಬೈಲ್ ನಂಬರ್, ಸ್ಥಿರ ದೂರವಾಣಿ, ನಮೂದಿಸಿದವರು ಮಾತ್ರ ಇ ಹರಾಜಿನಲ್ಲಿ ಮಳಿಗೆ ಪಡೆಯಲು ಅರ್ಹರಾಗಿರುತ್ತಾರೆ.

BDA Commercial Complexes E Auction Process to starts from June 2

ಜಂಟಿ ನೋಂದಣಿ ಮಾಡಿಸಲು ಇಚ್ಛಿಸುವರು ತಮ್ಮ ರಕ್ತ ಸಂಬಂಧಿಗಳ ಹೆಸರನ್ನು ಮಾತ್ರ ಉಲ್ಲೇಖಿಸಬೇಕು. ಇಎಂಡಿ ಮೊತ್ತ 1 ಲಕ್ಷ ರೂ. ಹಣವನ್ನು ಇ ಪ್ರಕ್ಯೂರ್‌ಮೆಂಟ್ ನಿಯಮದಂತೆ ಪಾವತಿ ಮಾಡಬೇಕು. ಯಾವ ಕಾರಣಕ್ಕೂ ಬಿಡಿಎಗೆ ಪಾವತಿ ಮಾಡುವಂತಿಲ್ಲ. ಕೊನೆಯ ಕ್ಷಣದಲ್ಲಿ ಪಾಲ್ಗೊಳ್ಳುವ ಬಿಡ್‌ದಾರರಿಗೆ ಡೆಲ್ಟಾ ಟೈಮ್ ಐದು ನಿಮಿಷ ವಿಸ್ತರಣೆಯಾಗುತ್ತದೆ. ಹರಾಜಿನಲ್ಲಿ ಪ್ರಕಟಿಸಿದ ಮಳಿಗೆಯನ್ನು ಹಿಂಪಡೆಯುವ ಹಕ್ಕು ಬಿಡಿಎಗೆ ಇರುತ್ತದೆ. ಬಿಡ್‌ದಾರರ ಬಿಡ್ ಪುರಸ್ಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಬಿಡಿಎಗೆ ಇರುತ್ತದೆ. ಅತಿ ಹೆಚ್ಚು ಬಿಡ್ ಮಾಡಿದ ಬಿಡ್‌ದಾರರು ಶೇ.25 ರಷ್ಟು ಬಿಡ್ ಮೊತ್ತವನ್ನು ಪ್ರಕ್ರಿಯೆ ಮುಗಿದ 72 ತಾಸಿನೊಳಗೆ ಪಾವತಿಸಬೇಕು. ಹೀಗೆ ನಾನಾ ಷರತ್ತುಗಳನ್ನು ವಿಧಿಸಲಾಗಿದೆ.

ಹೆಚ್ಚಿನ ಮಾಹಿತಿಗೆ www.bdabangalore.org ಗೆ ಸಂಪರ್ಕಿಸಬಹುದು. ಇಲ್ಲವೇ 080-23368036 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಬಿಡಿಎ ಪ್ರಕಟಣೆ ತಿಳಿಸಿದೆ.

Recommended Video

      Siddaramaiah ಅವೆನ್ಯೂ ರಸ್ತೆಯಲ್ಲಿ ಪಂಚೆ ಖರೀದಿಸಿದ್ದು ಹೀಗೆ | #Politics | OneIndia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+