ಕೆಂಪೇಗೌಡ ಬಡಾವಣೆಯಲ್ಲಿ ಮತ್ತೆ 5 ಸಾವಿರ ನಿವೇಶನ ಹಂಚಿಕೆ ಸಾಧ್ಯತೆ
ಬೆಂಗಳೂರು, ಜನವರಿ 28: ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮತ್ತೆ ಐದು ಸಾವಿರ ನಿವೇಶನಗಳನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ. ಫೆ.8ರಂದು ನಡೆಯಲಿರುವ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಈಗಾಗಲೇ ಬಿಡಿಎ ಎರಡು ಹಂತಗಳಲ್ಲಿ 10 ಸಾವಿರ ನಿವೇಶನ ಹಂಚಿಕೆ ಮಾಡಲಾಗಿದೆ.ಮೂರನೇ ಹಂತದಲ್ಲಿ ಐದು ಸಾವಿರ ಸೈಟುಗಳನ್ನು ಹಂಚಿಕೆ ಮಾಡಲಿದೆ. ಇದಕ್ಕಾಗಿ ಬಡಾವಣೆಗೆ ಸ್ವಾಧೀನಪಡಿಸಿಕೊಂಡಿರುವ ಜಮೀನಿನಲ್ಲಿ ನಿವೇಶನಗಳನ್ನು ರಚಿಸಲು ಸಿದ್ಧತೆ ಆರಂಭಿಸಿದೆ.
ಮುಂಬರುವ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಬೆಂಗಳೂರಿನ ಮತದಾರರನ್ನು ಸೆಳೆಯಲು ಸೈಟ್ ಭಾಗ್ಯ ಜಾರಿಗೆ ಸರ್ಕಾರಿ ಗಮನ ಹರಿಸಿದೆ. ಹಿಂದಿನ ವರ್ಷವೂ ವಿಧಾನ ಸಭೆ ಚುನಾವಣೆ ವೇಳೆ ಎರಡನೇ ಹಂತದ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಿತ್ತು.

ಬಡಾವಣೆ 4,041 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದ್ದು, 40,539 ನಿವೇಶ ರಚಿಸಲಾಗಿದೆ. ಸದ್ಯ 2383 ಎಕರೆಯನ್ನು ಅಭಿಯಂತರ ವಿಭಾಗಕ್ಕೆ ಹಸ್ತಾಂತರಿಸಿದ್ದು, ಈ ಪೈಕಿ 20,500 ಸೈಟುಗಳನ್ನು ರಚಿಸಲಾಗಿದೆ. ಈ ಪೈಕಿ ಸಾರ್ವಜನಿಕರಿಗೆ 10 ಸಾವಿರ ಸೈಟು ಹಾಗೂ ಭೂ ಮಾಲೀಕರಿಗೆ ಪರಿಹಾರ ರೂಪದ 6 ಸಾವಿರ ನಿವೇಶನಗಳು ಒಟ್ಟು 16 ಸಾವಿರ ನಿವೇಶನಗಳನ್ನು ರಚಿಸಲಾಗಿದೆ.











Click it and Unblock the Notifications