BBMP: ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರ ಪಟ್ಟಿ ಪ್ರಕಟಿಸಿದ ಬಿಬಿಎಂಪಿ, ವಲಯವಾರು ವಿವರ ಇಲ್ಲಿದೆ
ಬೆಂಗಳೂರು, ಮಾರ್ಚ್ 03: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದಲ್ಲಿ ಆಸ್ತಿ ತೆರಿಗೆ ಕಟ್ಟದೇ ಬಾಕಿ ಉಳಿಸಿಕೊಂಡ ಮೊದಲ 50 ಸುಸ್ತಿದಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಾರ್ಚ್ 1ರಂದು ಬಿಡುಗಡೆ ಮಾಡಲಾದ ಈ ಪಟ್ಟಿಯಲ್ಲಿ ಸಿಲಿಕಾನ್ ಸಿಟಿಯ ಎಂಟು ವಲಯಗಳಲ್ಲಿ 400 ತೆರಿಗೆ ಸುಸ್ತಿದಾರರಿಂದ ಒಟ್ಟು 130.79 ಕೋಟಿ ರೂಪಾಯಿ ಹಣ ಬಿಬಿಎಂಪಿಗೆ ತೆರಿಗೆ ಬರಬೇಕಿದೆ ಎಂದು ವರದಿಯಾಗಿದೆ.
ಬಿಬಿಎಂಪಿ ಬಿಡುಗಡೆ ಮಾಡಿದ ಪಟ್ಟಿಯಲ್ಲಿ ನಗರದ ಶಾಪಿಂಗ್ ಮಾಲ್‌ಗಳು, ರಿಯಲ್ ಎಸ್ಟೇಟ್ ಸಂಸ್ಥೆಗಳು, ಟೆಕ್ ಪಾರ್ಕ್‌ಗಳು, ಐಟಿ ಕಂಪನಿಗಳು ಹಾಗೂ ಸ್ಟಾರ್ ಹೋಟೆಲ್‌ಗಳು ಅಗ್ರಸ್ಥಾನದಲ್ಲಿದೆ. ಅತಿ ಹೆಚ್ಚು ವ್ಯಾಪಾರ ವಹಿವಾಟು ನಡೆಸುವ ಪ್ರತಿಷ್ಠಿತ ಕಂಪನಿಗಳು ಹಾಗೂ ಮಾಲ್‌ಗಳು ಹಾಗೂ ಹೋಟೆಲ್‌ಗಳು ಬಿಬಿಎಂಪಿಗೆ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿವೆ.

2023-24 ರ ಬಜೆಟ್‌ನಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ₹ 4,462.5 ಕೋಟಿ ತೆರಿಗೆ ಸಂಗ್ರಹ ಗುರಿಯನ್ನು ಹೊಂದಿತ್ತು. ಆಸ್ತಿ ತೆರಿಗೆ ಬಾಕಿ ಸಂಗ್ರಹಿಸಲು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಬಾರಿಯೂ ಸಹ ಶೇಕಡಾ 80ರಷ್ಟು ಮಾತ್ರ ತೆರಿಗೆ ಸಂಗ್ರಹವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ತೆರಿಗೆ ಸಂಗ್ರಹ ಗುರಿಯನ್ನು ₹3,535 ಕೋಟಿಗೆ ಪರಿಷ್ಕರಿಸಲಾಗಿದೆ. 2022-23ರಲ್ಲಿಯೂ ಬಿಬಿಎಂಪಿ ಆಸ್ತಿ ತೆರಿಗೆ ಸಂಗ್ರಹದ ಶೇ.80ರಷ್ಟು ಮಾತ್ರ ತಲುಪಿತ್ತು.
ಅಭಿಷೇಕ್ ಡೆವಲಪರ್ಸ್- ₹33.88 ಕೋಟಿ ರೂಪಾಯಿ ( ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ)
ಶ್ರೀನಿವಾಸ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್- 11.59 ಕೋಟಿ ರೂಪಾಯಿ
GSTAAD ಹೋಟೆಲ್ಸ್ ಪ್ರೈ. ಲಿಮಿಟೆಡ್- 2.75 ಕೋಟಿ ರೂಪಾಯಿ
ಬ್ರಿಗೇಡ್ ಫೌಂಡೇಶನ್- 1.46 ಕೋಟಿ ರೂಪಾಯಿ
ರಾಜರಾಜೇಶ್ವರಿನಗರ ವಲಯ ಸೌಜನ್ಯ ಪಟೇಲ್ ಟ್ರಸ್ಟ್-₹1.14 ಕೋಟಿ ರೂಪಾಯಿ
ಮಾನ್ಯತಾ ಪ್ರಮೋಟರ್ಸ್ ಪ್ರೈ. ಲಿ- 1.89 ಕೋಟಿ ರೂಪಾಯಿ ಸೇರಿದಂತೆ ಕೆಲವು ವ್ಯಕ್ತಿಗಳ ಹೆಸರು ಸಹ ಬಿಬಿಎಂಪಿ ಆಸ್ತಿ ತೆರಿಗೆ ಪಟ್ಟಿಯಲ್ಲಿದೆ ಎಂದು ವರದಿಯಾಗಿದೆ.
ವಲಯವಾರು ಆಸ್ತಿ ತೆರಿಗೆ ಬಾಕಿ ವಿವರ ಇಲ್ಲಿದೆ.
ಪೂರ್ವ ವಲಯ: ₹8.54 ಕೋಟಿ ರೂಪಾಯಿ
ಪಶ್ಚಿಮ ವಲಯ: ₹35.78 ಕೋಟಿ ರೂಪಾಯಿ
ದಕ್ಷಿಣ ವಲಯ: ₹12.55 ಕೋಟಿ ರೂಪಾಯಿ
ಬೊಮ್ಮನಹಳ್ಳಿ ವಲಯ: ₹31.80 ಕೋಟಿ ರೂಪಾಯಿ
ಯಲಹಂಕ ವಲಯ; ₹7.22 ಕೋಟಿ ರೂಪಾಯಿ
ದಾಸರಹಳ್ಳಿ ವಲಯ: ₹25.10 ಕೋಟಿ ರೂಪಾಯಿ
ಮಹದೇವಪುರ ವಲಯ: ₹8.69 ಕೋಟಿ ರೂಪಾಯಿ
ರಾಜರಾಜೇಶ್ವರಿನಗರ ವಲಯ: ₹8.33 ಕೋಟಿ ರೂಪಾಯಿ












Click it and Unblock the Notifications