ನಿಷೇಧಿತ ಪ್ಲಾಸ್ಟಿಕ್ ಸಾಗಿಸುತ್ತಿದ ಲಾರಿ ಜಪ್ತಿ: ಪ್ಲಾಸ್ಟಿಕ್ ಮಾರುವವರಿಗಿದೆ ಹಬ್ಬ..!

ಬೆಂಗಳೂರು, ಮೇ 30: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಪಶ್ಚಿಮ ವಲಯ ವ್ಯಾಪ್ತಿಯ ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಲಾರಿ ಮೂಲಕ ಅಂಗಡಿಗಳಿಗೆ ಸಾಗಿಸುತ್ತಿದ್ದ 25 ಕೆ.ಜಿ ತೂಕದ 177 ಬ್ಯಾಗ್(ಚೀಲ)ಗಳನ್ನು ಪಾಲಿಕೆಯ ವಶಕ್ಕೆ ಪಡೆಯಲಾಗಿದೆ.

ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸಾಗಿಸಲು ಉಪಯೋಗಿಸುತ್ತಿದ್ದ ಟ್ರಕ್ ನೋಂದಣಿ ಸಂಖ್ಯೆ Tn24, ac7965 ಕಲಾಸಿಪಾಳ್ಯ ಮಾರುಕಟ್ಟೆಯಲ್ಲಿ ಅಪಾರ ಪ್ರಮಾಣದ ನಿಷೇಧಿತ ಪ್ಲಾಸ್ಟಿಕ್ ಸಾಗಿಸುತ್ತಿರುವುದು ಪತ್ತೆಯಾಗಿದೆ. ಈ ಸಂಬಂಧ ಮಾರ್ಷಲ್‌ಗಳು ಟ್ರಕ್ ಅನ್ನು ಪರಿಶೀಲನೆ ನಡೆಸಿದ ವೇಳೆ 25 ಕೆಜಿ ತೂಕದ 177 ಚೀಲಗಳೆಲ್ಲವೂ ನಿಷೇಧಿತ ಪ್ಲಾಸ್ಟಿಂಗ್ ಎಂಬುದನ್ನು ಗಮನಿಸಿ ಎಲ್ಲಾ ಪ್ಲಾಸ್ಟಿಕ್ ಉತ್ಪನ್ನಗಳನ್ನು ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ.

ಗುಜರಾತ್‌ನಿಂದ ಬಂದಿದ್ದ ಟ್ರಕ್

ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ಸಾಗಾಣೆಯ ಬಗ್ಗೆ ಟ್ರಕ್ ಚಾಲಕನನ್ನು ವಿಚಾರಿಸಿದಾಗ ಎಸ್‌ಎಸ್‌ವಿ ಟ್ರಾನ್ಸ್ಪೋರ್ಟ್, ಅಹಮದಾಬಾದ್ ಜಿಲ್ಲೆ, ಗುಜರಾತ್‌ನಿಂದ ಬಂದಿದ್ದು, ಪ್ಲಾಸ್ಟಿಕ್ ಉತ್ಪನ್ನಗಳನ್ನು ಎಸ್.ವಿ ರಸ್ತೆ, ಕಲಾಸಿಪಾಳ್ಯ, ಕೆ.ಆರ್ ಮಾರುಕಟ್ಟೆ ಹಾಗೂ ಇನ್ನಿತರೆ ಮಾರುಕಟ್ಟೆಯ ವಿವಿಧ ಅಂಗಡಿಗಳಿಗೆ ವಿತರಣೆ ಮಾಡುವುದಾಗಿ ತಿಳಿಸಿರುತ್ತಾರೆ.

BBMP Seized Banned Plastic Trasported by Truck in Kalasipalya

ಟ್ರಕ್ ಈಗ ಪಾಲಿಕೆಯ ಅಧೀನದಲ್ಲಿದ್ದು, ಲಾರಿ ಮಾಲೀಕರು ಹಾಗೂ ಪ್ಲಾಸ್ಟಿಕ್ ಉತ್ಪನ್ನಗಳನ್ನು ಉಪಯೋಗಿಸುತ್ತಿದ್ದವರ ವಿರುದ್ಧ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ 2016 ಮತ್ತು ರಾಜ್ಯ ಸರ್ಕಾರದ ಅಧಿಸೂಚನೆ ದಿನಾಂಕ: 11.03.2016ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಸೂಚಿಸಿರುತ್ತದೆ. ಅದರಂತೆ ಪಾಲಿಕೆಯ ವತಿಯಿಂದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಪರಶುರಾಮ್ ಶಿನ್ನಾಳ್ಕರ್ ರವರು ತಿಳಿಸಿರುತ್ತಾರೆ.

BBMP Seized Banned Plastic Trasported by Truck in Kalasipalya

ನಿಷೇಧಿತ ಪ್ಲಾಸ್ಟಿಕ್ ಖರೀದಿಸುತ್ತಿದ್ದವರಿಗೆ ಹಬ್ಬ

Recommended Video

      ಸೋತ್ವಿ ಅಂತ ಬೇಜಾರ್ ಆಗ್ದೆ ಚಹಲ್ ಪತ್ನಿ ಜೊತೆ ಕುಣಿದು ಕುಪ್ಪಳಿಸಿದ ಜೋಸ್ ಬಟ್ಲರ್ | OneIndia Kannada

      ಲಾರಿ ಚಾಲಕನ ಬಳಿಯಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಬಿಬಿಎಂಪಿ ಅಧಿಕಾರಿಗಳು ಪಡೆದಿದ್ದಾರೆ. ಈ ಮಾಹಿತಿಯ ಆಧಾರದಲ್ಲಿ ಮುಂದಿನ ದಿಗಳಲ್ಲಿ ನಿಷೇಧಿತ ಪ್ಲಾಸ್ಟಿಕ್ ಮಾರಾಟವನ್ನು ಮಾಡುತ್ತಿದ್ದ ಅಂಗಡಿ ಮತ್ತು ದಾಸ್ತಾನುಗಳ ಮೇಲೆ ದಾಳಿ ಮಾಡಲು ಬಿಬಿಎಂಪಿ ಅಧಿಕಾರಿಗಳು ನಿರ್ಧರಿಸಿದ್ದಾರೆೆ. ಇದರಿಂದ ಪ್ಲಾಸ್ಟಿಕ್ ಮಾರಾಟ ಮಾಡುತ್ತಿರುವ ಅಂಗಡಿಯವರಿಗೆ ಶಾಕ್ ನೀಡಲು ಬಿಬಿಎಂಪಿ ತಯಾರಾಗಿದ್ದು ಯಾವುದೇ ದಿನ ಬಿಬಿಎಂಪಿ ದಾಳಿ ಮಾಡುವ ಸಾದ್ಯತೆಗಳಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+