ಬೀದಿನಾಯಿಗಳಿಗೆ ಜಿಯೋಟ್ಯಾಗಿಂಗ್ ಮಾಡಲು ಬಿಬಿಎಂಪಿ ವಿರೋಧ
ಬೆಂಗಳೂರು, ಅಕ್ಟೋಬರ್ 04: ಬೆಂಗಳೂರಿನಲ್ಲಿ ಬೀದಿ ನಾಯಿಗಳಿಗೆ ಜಿಯೋಟ್ಯಾಗ್ ಅಳವಡಿಸುವ ಕಾರ್ಯಾಚರಣೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರೋಧ ವ್ಯಕ್ತಪಡಿಸಿದೆ ಎಂದು ಡಿಎಚ್ ವರದಿ ಮಾಡಿದೆ.
ಇದು ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ (ಎಎಚ್&ವಿಎಸ್) ಇಲಾಖೆಯಿಂದ ರಚಿಸಲ್ಪಟ್ಟ ಪ್ರಾಯೋಗಿಕ ಯೋಜನೆಯಾಗಿದ್ದು, ಅವರು ಮುಂಬೈ ಮೂಲದ PawFriend.in ಎಂಬ ಎನ್‌ಜಿಒನೊಂದಿಗೆ ಸಹಯೋಗ ಹೊಂದಿದೆ.

ಈ ಯೋಜನೆಯಲ್ಲಿ ಮುಂಬೈ ಸಕಾರಾತ್ಮಕ ಫಲಿತಾಂಶವನ್ನು ಹೊಂದಿದ್ದರೂ ಬಿಬಿಎಂಪಿ ಈ ಕಲ್ಪನೆಯನ್ನು ವಿರೋಧಿಸಿ ಪತ್ರವನ್ನು ಬಿಡುಗಡೆ ಮಾಡಿದೆ. ತಾನು ಬರೆದಿರುವ ಪತ್ರದಲ್ಲಿ "ಬಿಬಿಎಂಪಿ ನಿಯಮಿತವಾಗಿ ಎಬಿಸಿ-ಎಆರ್‌ವಿ (ಪ್ರಾಣಿಗಳ ಜನನ ನಿಯಂತ್ರಣ-ಆಂಟಿ ರೇಬೀಸ್ ವ್ಯಾಕ್ಸಿನೇಷನ್) ಕಾರ್ಯಕ್ರಮವನ್ನು ಮಾಡುತ್ತಿದೆ. ನಾವು ಜಿಯೋಟ್ಯಾಗ್ ಮಾಡುವ ಬದಲು ಮತ್ತೊಂದು ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಬೀದಿ ನಾಯಿಗಳ ಮೇಲೆ ಈ ಪ್ರಯೋಗವನ್ನು ಮಾಡಲಾಗುವುದಿಲ್ಲ. ಇದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ತಿಳಿಸಿದೆ.
ಮುಂಬೈನಲ್ಲಿ ಎನ್‌ಜಿಒ ಮತ್ತು ಪಶು ಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆ ಜಂಟಿಯಾಗಿ 100 ಬೀದಿ ನಾಯಿಗಳು ಮತ್ತು ಬೆಕ್ಕುಗಳನ್ನು ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನಲ್ಲಿರುವ ಕರುಣಾ ಪ್ರಾಣಿ ಕಲ್ಯಾಣ ಸಂಘದಲ್ಲಿ ಟ್ಯಾಗ್ ಮಾಡಿದೆ. ಈ ಜಿಯೋಟ್ಯಾಗ್ ಮಾಡುವ ಯೋಜನೆಯನ್ನು ಕೈಗೊಂಡ ನಂತರ ಎರಡು ದಿನಗಳ ಕಾಲ ಪ್ರಾಣಿಗಳನ್ನು ಮೇಲ್ವಿಚಾರಣೆ ಮಾಡಲಾಗಿದೆ.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಪ್ರಾಣಿ ಪ್ರೇಮಿಗಳು ಸ್ವಯಂಸೇವಕರಾಗಿ ನೀಡಿದ ಹಣದಿಂದ ಈ ಯೋಜನೆಗೆ ಹಣವನ್ನು ಸಂಗ್ರಹಿಸಲಾಗಿದೆ. ಈ ಕ್ರಮದ ನಂತರ ನಾಯಿಗಳು ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಜಿಯೋ ಐಡಿಗಳನ್ನು ಕಟ್ಟಿಕೊಂಡ ನಂತರ ಅವುಗಳಲ್ಲಿ ಯಾವುದೇ ವರ್ತನೆಯ ಬದಲಾವಣೆ ಕಂಡು ಬಂದಿಲ್ಲ. ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ನೊಂದಿಗಿನ ಇದೇ ರೀತಿಯ ಸಹಯೋಗವು ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ. ಹೆಬ್ಬಾಳದಲ್ಲಿ ಈ ರಕ್ಷಿಸಲ್ಪಟ್ಟ ನಾಯಿಗಳಲ್ಲಿ ಅದೇ ಕಂಡು ಬಂದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಬಿಬಿಎಂಪಿಯು ಈ ಹಿಂದೆ 2019 ರಲ್ಲಿ ಇದೇ ರೀತಿಯ ಯೋಜನೆಯನ್ನು ಹಮ್ಮಿಕೊಂಡಿತ್ತು. ಅಲ್ಲಿ ಕೆಲವು ಖಾಸಗಿ ಸಂಸ್ಥೆಗಳು ನಾಯಿಗಳಿಗೆ ಮೈಕ್ರೋಚಿಪ್‌ಗಳೊಂದಿಗೆ ಟ್ಯಾಗ್ ಮಾಡಿದ್ದು, ಇದು ಸಾಕುಪ್ರಾಣಿ ಮಾಲೀಕರಿಗೆ ವ್ಯಾಕ್ಸಿನೇಷನ್ ವಿವರಗಳು ಮತ್ತು ಜನನ ನಿಯಂತ್ರಣ ಕ್ರಮಗಳನ್ನು ಸ್ಕ್ಯಾನಿಂಗ್‌ನಲ್ಲಿ ಪತ್ತೆಹಚ್ಚಲು ಸಹಾಯ ಮಾಡಿತು.
ಈ ಪ್ರಾಯೋಗಿಕ ಅಧ್ಯಯನವನ್ನು ವಿರೋಧಿಸುವ ಕಾರಣವನ್ನು ಸಮರ್ಥಿಸಿಕೊಂಡ ಬಿಬಿಎಂಪಿ ಜಂಟಿ ನಿರ್ದೇಶಕ ಡಾ.ರವಿಕುಮಾರ್, "ಬೀದಿ ನಾಯಿಗಳು ಹಾಗೂ ಅಲ್ಲಿಂದ ರಕ್ಷಿಸಲ್ಪಟ್ಟ ನಾಯಿಗಳ ಸಂತತಿಗಿಂತ ಭಿನ್ನವಾಗಿದೆ, ನೀವು ಬೀದಿ ನಾಯಿಯನ್ನು ಜಿಯೋ ಕೋಡ್‌ಗಳೊಂದಿಗೆ ಪಟ್ಟಿ ಮಾಡಿದರೆ ಅದು ಕಚ್ಚುತ್ತದೆ ಮತ್ತು ಅಂತಿಮವಾಗಿ ಅದನ್ನು ಹರಿದು ಹಾಕುತ್ತದೆ ಎಂದು ತಿಳಿಸಿದರು.
ಇದು ದೀರ್ಘಕಾಲ ಬಾಳಿಕೆ ಬರುವುದಿಲ್ಲ. ಆದರೆ ನಮ್ಮ ಮೈಕ್ರೋಚಿಪ್‌ಗಳು ಸಬ್ಕ್ಯುಟೇನಿಯಸ್ ಆಗಿರುತ್ತವೆ. ಇದನ್ನು ಇಂಜೆಕ್ಷನ್ ಮೂಲಕ ಸೇರಿಸಲಾಗುತ್ತದೆ. ಹೀಗೆ ಸೇರಿಸಲಾದ ಮೈಕ್ರೋಚಿಪ್‌ಗಳು ದೀರ್ಘಕಾಲ ಉಳಿಯುತ್ತವೆ. ಹಾಗಾಗಿ ಎನ್‌ಜಿಒಗೆ ಅನುಮತಿಯನ್ನು ತಿರಸ್ಕರಿಸಿದ್ದೇವೆ. ಖಾಸಗಿ ಮತ್ತು ರಕ್ಷಿಸಲ್ಪಟ್ಟ ನಾಯಿಗಳಿಗೆ ಅದನ್ನು ಮಾಡಲು ಅವರು ಸ್ವತಂತ್ರರು. ಅವರು ಯಾವುದೇ ದಾರಿ ತಪ್ಪಿಸಿದರೆ, ನಾವು ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.












Click it and Unblock the Notifications