Khata Updates: ಬೆಂಗಳೂರಿನಲ್ಲಿ ಖಾತಾ ಇಲ್ಲದವರಿಗೆ ಬಿಗ್‌ ಗುಡ್‌ನ್ಯೂಸ್‌ ಕೊಟ್ಟ ಬಿಬಿಎಂಪಿ!

Khata Updates: ಬೆಂಗಳೂರಿನಲ್ಲಿ ಖಾತಾ ಸಮಸ್ಯೆ ಸದ್ಯಕ್ಕೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದರ ನಡುವೆ ಸಮಾಧಾನಕರ ಸಂಗತಿ ಎನ್ನುವಂತೆ ಹೊಸ ಅಪ್ಡೇಟ್‌ವೊಂದನ್ನು ಬಿಬಿಎಂಪಿ ಕೊಟ್ಟಿದೆ. ಬೆಂಗಳೂರಿನಲ್ಲಿ ಇ - ಖಾತಾ ನೀಡುವ ಪ್ರಕ್ರಿಯೆಯನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಕಳೆದ 4-5 ತಿಂಗಳಿನಿಂದಲೂ ಮಾಡುತ್ತಿದೆ. ಆದರೆ, ಬೆಂಗಳೂರಿನಲ್ಲಿ ಜನರಿಗೆ ಇಲ್ಲಿಯ ವರೆಗೆ ಖಾತಾ ಸಿಕ್ಕಿಲ್ಲ. ಬೆಂಗಳೂರಿನಲ್ಲಿ ಸುಲಭವಾಗಿ ಎಲ್ಲರಿಗೂ ಇ - ಖಾತಾ ನೀಡುವಂತೆ ಮಾಡುವ ಉದ್ದೇಶದಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಆಸ್ತಿದಾರರೇ ಖಾತಾ ಡೌನ್‌ಲೋಡ್‌ ಮಾಡಿಕೊಳ್ಳಲು ಬೇಕಾದ ವ್ಯವಸ್ಥೆ ಮಾಡಿದೆ. ಇದರೊಂದಿಗೆ ಬೆಂಗಳೂರಿನಲ್ಲಿ ಬೃಹತ್‌ ಖಾತಾ ಮೇಳವನ್ನು ಸಹ ಆಯೋಜಿಸುತ್ತಿದೆ. ಖಾತಾಗೆ ಸಂಬಂಧಿಸಿದಂತೆ ಪಾಲಿಕೆಯ ಹೊಸ ಅಪ್ಡೇಟ್‌ ವಿವರ ಇಲ್ಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಬೆಂಗಳೂರಿನಲ್ಲಿ ಕೊನೆಗೂ ಯಾವುದೇ ಖಾತಾ ಇಲ್ಲದೆ ಇರುವವರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಬೆಂಗಳೂರಿನಲ್ಲಿ ಎಲ್ಲಾ ಆಸ್ತಿಗಳಿಗೂ ಕಡ್ಡಾಯವಾಗಿ ಇ - ಖಾತಾ ನೀಡಲು ಪಾಲಿಕೆ ಮುಂದಾಗಿದ್ದು. ಈಗಾಗಲೇ 1.5 ಲಕ್ಷಕ್ಕೂ ಹೆಚ್ಚು ಜನರಿಗೆ ಇ - ಖಾತಾ ಸೌಲಭ್ಯ ನೀಡಲಾಗಿದೆ. ಇದರ ನಡುವೆ ಬಿ- ಖಾತಾ, ಎ - ಖಾತಾ ಗೊಂದಲಗಳು ಸಹ ಸಾಕಷ್ಟಿವೆ. ಈ ಗೊಂದಲದಿಂದ ಕೆಲವರಿಗೆ ಇ - ಖಾತಾ ಸೌಲಭ್ಯ ಸಿಗುತ್ತಿಲ್ಲ. ಅಲ್ಲದೆ 5 ಲಕ್ಷಕ್ಕೂ ಹೆಚ್ಚು ಆಸ್ತಿದಾರರಿಗೆ ಯಾವುದೇ ಖಾತಾ ಇಲ್ಲ ಎನ್ನಲಾಗಿದ್ದು, ಇದೀಗ ಈ ರೀತಿಯ ಖಾತಾದಾರರಿಗೆ ಗುಡ್‌ನ್ಯೂಸ್‌ ಕೊಡಲಾಗಿದೆ.

BBMP Gives Big Good News to Those Without Khata in Bengaluru

ಖಾತಾ ಇಲ್ಲದವರಿಗೆ ಗುಡ್‌ನ್ಯೂಸ್‌: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು ಯಾವುದೇ ಖಾತಾ ಇಲ್ಲದವರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಆಸ್ತಿ ತೆರಿಗೆಯಿಂದ ಹೊರಗುಳಿದ ಆಸ್ತಿಗಳನ್ನು ಆಸ್ತಿ ತೆರಿಗೆ ವ್ಯಾಪ್ತಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಅಥವಾ ಇದುವರೆಗೆ ಖಾತೆ ಮಾಡಿಸಿಕೊಳ್ಳದೆ ಇರುವ ಆಸ್ತಿಗಳನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಹೊಸ ಖಾತಾ ಪಡೆಯಲು ವೆಬ್‌ಸೈಟ್ ಪರಿಚಯಿಸಲಾಗಿದೆ.

ಯಾವುದೇ ಖಾತಾ ಇಲ್ಲದೆ ಇರುವವರು https://BBMP.karnataka.gov.in/NewKhata ಮೂಲಕ ಹೊಸ ಖಾತಾ ಪಡೆದುಕೊಳ್ಳಬಹುದಾಗಿದೆ. ಈಗಾಗಲೇ ಈ ವೆಬ್‌ಸೈಟ್‌ನ ಮೂಲಕ ಹೊಸದಾಗಿ 10 ಸಾವಿರ ಆಸ್ತಿ ಮಾಲೀಕರು ಖಾತಾ ಪಡೆದಿದ್ದಾರೆ ಎಂದು ಬಿಬಿಎಂಪಿ ಹೇಳಿದೆ. ಒಂದು ಪರಿಹಾರ ಯೋಜನೆ(OTS) ಜಾರಿಯಿದ್ದ ವೇಳೆ ಸಹ ಖಾತೆ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು. ವೇಳೆ ಸುಮಾರು 80 ಸಾವಿರ ಆಸ್ತಿ ಮಾಲೀಕರು ಖಾತೆ ಮಾಡಿಸಿಕೊಂಡಿದ್ದಾರೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್ ಅವರು ಹೇಳಿದ್ದಾರೆ.

BBMP Gives Big Good News to Those Without Khata in Bengaluru

ಕೋಟಿ ಕೋಟಿ ಆದಾಯ: ಬಿಬಿಎಂಪಿಯ ಹೊಸ ಕ್ರಮದಿಂದ ಕೋಟ್ಯಾಂತರ ರೂಪಾಯಿ ಆದಾಯ ಬರಲಿದೆ ಎಂದು ನಿರೀಕ್ಷೆ ಮಾಡಲಾಗಿದೆ. ನಗರದಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಆಯಾ ವಲಯಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ. ಈ ಪೈಕಿ 1 ಲಕ್ಷ ಆಸ್ತಿಗಳನ್ನು ಸೇರ್ಪಡೆ ಮಾಡಿದಲ್ಲಿ ಸುಮಾರು 100 ಕೋಟಿ ರೂ. ಆಸ್ತಿ ತೆರಿಗೆ ಪಾಲಿಗೆಗೆ ಬರಲಿದೆ ಎಂದು ಆಯುಕ್ತರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+