ಟೌನ್‌ಹಾಲ್ ನವೀಕರಣದಲ್ಲಿ ಪ್ರಮುಖವಾಗಿದ್ದನ್ನೇ ಮರೆತುಬಿಟ್ಟಿತ್ತು ಬಿಬಿಎಂಪಿ
ಬೆಂಗಳೂರು, ಜೂನ್ 19: ಬಿಬಿಎಂಪಿಯು ಐದು ವರ್ಷಗಳ ಹಿಂದೆ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ಟೌನ್‌ಹಾಲ್ ನವೀಕರಣ ಮಾಡಿತ್ತು. ಆದರೆ ಪ್ರಮುಖವಾಗಿದ್ದನ್ನೇ ಮರೆತುಬಿಟ್ಟಿತ್ತು.
ಏನೇ ಕಾರ್ಯಕ್ರಮಗಳು ನಡೆಯಲಿ ಹಾಲ್ ಸುಂದರವಾಗಿ ಕಾಣುವುದು ಎಷ್ಟು ಮುಖ್ಯವೋ ಧ್ವನಿ ವ್ಯವಸ್ಥೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಆದರೆ ನವೀಕರಣ ಕಾಮಗಾರಿ ನಡೆಸುವಾಗ ಬಿಬಿಎಂಪಿಗೆ ಅದು ಪ್ರಮುಖ ಸಮಸ್ಯೆ ಅನಿಸಲೇ ಇಲ್ಲ, ಹೀಗಾಗಿ ಐದು ವರ್ಷಗಳ ಬಳಿಕ ಮತ್ತೆ ಟೆಂಡರ್ ಕರೆದಿದೆ.

ಟೌನ್‌ಹಾಲ್ ಬಾಡಿಗೆಗೆ ಪಡೆದವರಿಂದ ಸಾಕಷ್ಟು ದೂರುಗಳು ಕೇಳಿಬಂದಿದ್ದವು. ಹಾಗಾಗಿ ಮತ್ತೆ ಟೆಂಡರ್ ಕರೆಯಲಾಗಿದೆ. 2014ರಲ್ಲಿ ನವೀಕರಣ ಕಾರ್ಯದ ನಿಮಿತ್ತ ಟೌನ್‌ಹಾಲ್ ಅನ್ನು ಮೂರು ತಿಂಗಳುಗಳ ಕಾಲ ಬಂದ್ ಮಾಡಲಾಗಿತ್ತು.
ತಿಂಗಳಲ್ಲಿ ಕನಿಷ್ಠ ಎಂದರೂ 30 ಕಾರ್ಯಕ್ರಮವಾದರೂ ಟೌನ್‌ಹಾಲ್‌ನಲ್ಲಿ ನಡೆಯುತ್ತದೆ.
ಹಾಗಿದ್ದರೂ ಕಳೆದ ಬಾರಿ ಟೆಂಡರ್ ಪಡೆದುಕೊಂಡಿದ್ದ ಕಂಪನಿಗೆ ಧ್ವನಿ ವ್ಯವಸ್ಥೆಯ ಅರಿವು ಯಾಕಾಗಲಿಲ್ಲ ಎನ್ನುವುದೇ ಆಶ್ಚರ್ಯಕರ ಸಂಗತಿಯಾಗಿದೆ. ಧ್ವನಿ ವ್ಯವಸ್ಥೆ ಸರಿ ಇದ್ದರೆ ಮಾತ್ರ ಕಾರ್ಯಕ್ರಮವೂ ಸುಗಮವಾಗಿ ನಡೆಯಲು ಸಾಧ್ಯ.
445 ವಸ್ತುಗಳನ್ನು ಹೊಸದಾಗಿ ಸೇರಿಸಲಾಗಿತ್ತು. ಟೌನ್‌ಹಾಲ್‌ನ್ನು 1935ರಲ್ಲಿ ಲೋಕಾರ್ಪಣೆ ಮಾಡಲಾಗಿತ್ತು.












Click it and Unblock the Notifications