ಬಿಬಿಎಂಪಿ ಫಲಿತಾಂಶ: ಮತ ಎಣಿಕೆ ಕೇಂದ್ರಗಳ ಸಮಗ್ರ ಮಾಹಿತಿ

ಬೆಂಗಳೂರು, ಆಗಸ್ಟ್ 24: ಶನಿವಾರ ನಡೆದ ನೀರಸ ಮತದಾನದ ಬಿಬಿಎಂಪಿ ಚುನಾವಣೆಯ ಮತಎಣಿಕೆ ಮಂಗಳವಾರ (ಆ25) ಬೆಳಗ್ಗೆ ಎಂಟು ಗಂಟೆಯಿಂದ ಆರಂಭವಾಗಲಿದೆ.

ಮಂಗಳವಾರ ಮಧ್ಯಾಹ್ನದ ಹೊತ್ತಿಗೆ ಬಹುತೇಕ ಫಲಿತಾಂಶ ಹೊರಬೀಳುವ ಸಾಧ್ಯತೆಯಿದೆ. ಈ ಬಾರಿ 27 ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಿಸಿರುವ 197 ವಾರ್ಡಿನ ಮತಎಣಿಕೆ 27 ಕೇಂದ್ರಗಳಲ್ಲಿ ನಡೆಯುತ್ತಿದೆ.[ಸಚಿವರೇ, ಕಾಂಗ್ರೆಸ್ಸಿಗೆ ಮತ ಹಾಕಿದವರು ಅವಿದ್ಯಾವಂತರಾ?]

BBMP Election 2015: List and address of counting centers

ಒಂದು ವಾರ್ಡಿನಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 197 ವಾರ್ಡಿನ ಮತಎಣಿಕೆ ಕೇಂದ್ರಗಳ ಪಟ್ಟಿ ಇಂತಿದೆ:

ಕ್ರಮ ಸಂಖ್ಯೆ ಅಸೆಂಬ್ಲಿ ಕ್ಷೇತ್ರ ವಾರ್ಡ್ ನಂ ಮತಎಣಿಕೆ ಕೇಂದ್ರ
01 ರಾಜರಾಜೇಶ್ವರಿ ನಗರ 16,17,37,38,42,69,73,129,160 ಜ್ಞಾನಾಕ್ಷಿ ವಿದ್ಯಾನಿಕೇತನ,ಮಣಿಪಾಲ ಆಸ್ಪತ್ರೆ ರಸ್ತೆ,
ರಾಜರಾಜೇಶ್ವರಿ ನಗರ
02 ಶಿವಾಜಿ ನಗರ 62,63,93,110,90,91,92 ಕಮಲಾಬಾಯಿ ಶಾಲೆ,ಕ್ವೀನ್ಸ್ ರಸ್ತೆ, ವಸಂತನಗರ
03 ಶಾಂತಿನಗರ 89,112,114,115,111,116,117 ಸೈಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್,
ವಿಠಲಮಲ್ಯ ರಸ್ತೆ
04 ಗಾಂಧಿನಗರ 109,120,121,77,94,95,96 ವಿಎಚ್ಡಿ ಹೋಮ್ ಸೈನ್ಸ್ ಕಾಲೇಜ್,
ಮಹಾರಾಣಿ ಕಾಲೇಜ್ ಮುಂಬಾಗ, ಪ್ಯಾಲೇಸ್ ರಸ್ತೆ
05 ರಾಜಾಜಿನಗರ 99,100,101,107,97,98,108 ಜಗಜ್ಯೋತಿ ಬಾಲಕಿಯರ ಶಾಲೆ, ಪಿಯು ಕಾಲೇಜ್,
ಎರಡನೇ ಬ್ಲಾಕ್, ರಾಜಾಜಿನಗರ
06 ಚಾಮರಾಜ ಪೇಟೆ 135,136,137,138,139,140,141 ಬಿಬಿಎಂಪಿ ಪಿಯು ಕಾಲೇಜು,
ಎರಡನೇ ಮುಖ್ಯರಸ್ತೆ, ಚಾಮರಾಜಪೇಟೆ
07 ಚಿಕ್ಕಪೇಟೆ 118,119,142,143,144,145,153 ಬಿಎಂಎಸ್ ಮಹಿಳಾ ಕಾಲೇಜ್, ಬಸವನಗುಡಿ ರಸ್ತೆ, ಬಸವನಗುಡಿ
08 ಕೆ ಆರ್ ಪುರಂ 25,26,51,56,87,81,52,53,55 ಐಟಿಐ ಸೆಂಟರ್ ಶಾಲೆ, ಐಟಿಐ ಕಾಲೋನಿ, ದೂರವಾಣಿ ನಗರ
09 ಮಹಾಲಕ್ಷ್ಮಿ ಲೇಔಟ್ 43,44,68,74,67,75,102 ಕರ್ನಾಟಕ ಮರಾಠ ಕ್ಷೇಮಾಭಿವೃದ್ದಿ ಸಂಘ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರ
10 ಮಲ್ಲೇಶ್ವರಂ 64,65,66,76,35,36,45 ಸರಕಾರೀ ಜ್ಯೂನಿಯರ್ ಕಾಲೇಜ್, ಎರಡನೇ ಮೈನ್, 18ನೇ ಕ್ರಾಸ್, ಮಲ್ಲೇಶ್ವರಂ
11 ಹೆಬ್ಬಾಳ 18,19,20,21,22,33,34,46 ಪಶು ವೈದ್ಯಕೀಯ ಕಾಲೇಜ್, ಬಳ್ಳಾರಿ ರಸ್ತೆ, ಹೆಬ್ಬಾಳ
12 ಪುಲಿಕೇಶಿ ನಗರ 31,32,48,60,47,61,78 ಬಿಬಿಎಂಪಿ ಪಿಯು ಬಾಲಕಿಯರ ಕಾಲೇಜ್, ಫ್ರೇಜರ್ ಟೌನ್
13 ಸರ್ವಜ್ಞ ನಗರ 27,28,49,59,23,24,29,30 ಮರಿಯಾ ನಿಕೇತನ ಹೈಸ್ಕೂಲ್, ಡಿಕೋಸ್ಟಾ ಲೇಔಟ್, ಕುಕ್ ಟೌನ್
14 ಸಿ ವಿ ರಾಮನ್ ನಗರ 80,88,113,50,57,58,79 ಸೈಂಟ್ ಅಲೋಶಿಯಸ್ ಶಾಲೆ, ಕಾಕ್ಸ್ ಟೌನ್
15 ಗೋವಿಂದರಾಜ ನಗರ 103,104,105,106,125,126,127,128,131 ಅಂಬೇಡ್ಕರ್ ಸ್ಟೇಡಿಯಂ, ಅಗ್ರಹಾರ ದಾಸರಹಳ್ಳಿ, ಬಸವೇಶ್ವರ ನಗರ
16 ವಿಜಯನಗರ 122,123,124,134,133,157,158 ಸರಕಾರೀ ಪ್ರಥಮ ದರ್ಜೆ ಕಾಲೇಜು, ಮೂರನೇ ಮುಖ್ಯರಸ್ತೆ, ಎರಡನೆ ಹಂತ, ವಿಜಯನಗರ
17 ಬಸವನಗುಡಿ 154,155,164,156,162,163 ಪಿಇಎಸ್ ಕಾಲೇಜು, ಶ್ರೀನಗರ
18 ಪದ್ಮನಾಭ ನಗರ 161,165,182,183,181,183,166,167,180 ಕೆಂಪೇಗೌಡ ಮೆಡಿಕಲ್ ಕಾಲೇಜ್, ಬಿಎಸ್ಕೆ ಎರಡನೇ ಹಂತ
19 ಬಿಟಿಎಂ ಲೇಔಟ್ 146,152,172,176,147,148,151,173 ಫ್ರಾನ್ಸಿಸ್ ಹೈಸ್ಕೂಲ್, ಸರ್ಜಾಪುರ ಮುಖ್ಯರಸ್ತೆ, ಮೂರನೇ ಬ್ಲಾಕ್, ಕೋರಮಂಗಲ
20 ಜಯನಗರ 168,169,170,171,177,178,179 ಬಿಇಎಸ್ ಕಾಲೇಜ್, ನಾಲ್ಕನೇ ಬ್ಲಾಕ್, ಜಯನಗರ
21 ಬೊಮ್ಮನಹಳ್ಳಿ 175,188,189,186,187,193,174,190 ಜೆಎಸ್ಎಸ್ ಪಬ್ಲಿಕ್ ಸ್ಕೂಲ್, ಆರನೇ ಸೆಕ್ಟರ್, ಎಚ್ಎಸ್ಆರ್ ಲೇಔಟ್
22 ಯಲಹಂಕ 1,2,3,4 ಬಿಇಎಲ್ ಪ್ರೈಮರಿ ಶಾಲೆ, ಯಲಹಂಕ
23 ಬ್ಯಾಟರಾಯನಪುರ 5,6,7,8,9,10,11,40,72 ಕರ್ನಾಟಕ ಕಾಲೇಜ್ - ತಿರುಮೇನಹಳ್ಳಿ, ಬಿಇಎಲ್ ಪ್ರಾಥಮಿಕ ಶಾಲೆ - ಯಲಹಂಕ ಮತ್ತು ಕೆಂಗೇರಿ ಎಜುಕೇಶನ್ ಸೊಸೈಟಿ
24 ಯಶವಂತಪುರ 130,159,198 ಕೆಂಗೇರಿ ಎಜುಕೇಶನ್ ಸೊಸೈಟಿ, ಬೆಂಗಳೂರು - ಮೈಸೂರು ರಸ್ತೆ, ಕೋಟೆ, ಕೆಂಗೇರಿ
25 ದಾಸರಹಳ್ಳಿ 12,13,14,15,39,41,70,71 ಸರಕಾರೀ ಹೈಸ್ಕೂಲ್, ಕಾಳಹಸ್ತಿ ನಗರ, ಟಿ ದಾಸರಹಳ್ಳಿ
26 ಮಹದೇವಪುರ 54,82,85,86,150,83,84,149 ಐಟಿಐ ವಿದ್ಯಾಮಂದಿರ, ದೂರವಾಣಿ ನಗರ, ಕೆ ಆರ್ ಪುರ
27 ಬೆಂಗಳೂರು ದಕ್ಷಿಣ 191,192,194,195,196,184,185,197 ನ್ಯಾಷನಲ್ ಕಾಲೇಜ್, ಜಯನಗರ, ಏಳನೇ ಬ್ಲಾಕ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+