ಬೆಂಗಳೂರಿನ ಈ ಪ್ರದೇಶದಲ್ಲಿ ಇಂದಿನಿಂದ ರಸ್ತೆ ಸಂಚಾರ ಬಂದ್‌

ಸಿಲಿಕಾನ್‌ ಸಿಟಿ ಬೆಂಗಳೂರಿನ ಪ್ರಮುಖ ಭಾಗದಲ್ಲಿ ಇಂದಿನಿಂದ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ವೈಟ್‌ಟಾಪಿಂಗ್‌ ಕಾಮಗಾರಿ ಶುರು ಮಾಡಿರುವುದರಿಂದ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್‌ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್‌ವರೆಗಿನ ಪೀಣ್ಯ 100 ಅಡಿ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಟ್ರಾಫಿಕ್‌ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್‌ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್‌ವರೆಗೆ ಸುಮಾರು 200 ಮೀಟರ್ ರಸ್ತೆಯಲ್ಲಿ ಬಿಬಿಎಂಪಿ ವತಿಯಿಂದ ವೈಟ್‌ಟಾಪಿಂಗ್ ಕಾಮಗಾರಿ ಕೈಗೊತ್ತಿಕೊಳ್ಳಲಾಗಿದೆ. ಇಂದಿನಿಂದಲೇ ಕಾಮಗಾರಿ ಶುರುವಾಗಲಿದ್ದು, ವೈಟ್‌ಟಾಪಿಂಗ್ ಕಾಮಗಾರಿ‌ ಸಂಪೂರ್ಣವಾಗಿ ಮುಗಿಯುವವರೆಗೆ ಈ ಪ್ರದೇಶ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

BBMP Begins Whitetopping Work Traffic Restricted On Peenya 100 Feet Road In Bengaluru

ಅದರಂತೆ ಪೀಣ್ಯ 100 ಅಡಿ ರಸ್ತೆಯ ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್‌ನಿಂದ ಜಾಲಹಳ್ಳಿ ಕ್ರಾಸ್ ಜಂಕ್ಷನ್‌ವರೆಗೆ ವೈಟ್‌ಟಾಪಿಂಗ್‌ ಕಾಮಗಾರಿ ನಡೆಯಲಿದೆ. ಈ ಹಿನ್ನೆಲೆ ಸಂಚಾರ ಪೊಲೀಸರು ಬದಲಿ ಮಾರ್ಗಗಳನ್ನು ಕೂಡ ಸೂಚಿಸಿದ್ದಾರೆ. ಈ ರಸ್ತೆಯ ಬದಲಿಗೆ ಪೀಣ್ಯ 100 ಅಡಿ ರಸ್ತೆಯ ಮೂಲಕ ಜಾಲಹಳ್ಳಿ ಕ್ರಾಸ್ ಜಂಕ್ಷನ್ ಕಡೆಗೆ ಚಲಿಸುವ ವಾಹನಗಳು ಪೀಣ್ಯ ಇಂಡಸ್ಟ್ರಿಯಲ್ ಅಸೋಸಿಯೇಷನ್ ಜಂಕ್ಷನ್‌ನಲ್ಲೇ ಬಲಕ್ಕೆ ಚಲಿಸುವ ಮೂಲಕ ಮತ್ತೊಂದು ರಸ್ತೆಯ ಮೂಲಕ ಸಂಚರಿಸಬಹುದು. ಈ ರಸ್ತೆಯಲ್ಲಿ ಎರಡೂ ಬದಿಯಿಂದ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ಎಲ್ಲ ಸರಕು ಸಾಗಣೆ ವಾಹನಗಳು ಟಿ.ವಿ.ಎಸ್ ಕ್ರಾಸ್ ಜಂಕ್ಷನ್‌ನಿಂದ ಪೀಣ್ಯ ಪೊಲೀಸ್ ಠಾಣೆ ರಸ್ತೆಯ ಮಾರ್ಗವಾಗಿ ಸಾಗಬೇಕು. ಬಳಿಕ ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್‌ ಮುಖೇನ ತುಮಕೂರು ರಸ್ತೆಯ ಮೂಲಕ ಮುಂದಕ್ಕೆ ಸಂಚರಿಸಬಹುದು. ಸದ್ಯ ಪೀಣ್ಯ ಪೊಲೀಸ್ ಠಾಣೆ ರಸ್ತೆ, ಪೀಣ್ಯ 100 ಅಡಿ ರಸ್ತೆ, ಜಾಲಹಳ್ಳಿ ಕ್ರಾಸ್‌ನಿಂದ ಟಿ.ವಿ.ಎಸ್ ಕ್ರಾಸ್‌ವರೆಗೆ ಹಾಗೂ ಪೀಣ್ಯ 1ನೇ ಕ್ರಾಸ್ ರಸ್ತೆಯಲ್ಲಿ ಎಲ್ಲ ರೀತಿಯ ವಾಹನಗಳ ಪಾರ್ಕಿಂಗ್‌ ನಿಷೇಧಿಸಲಾಗಿದೆ. ವೈಟ್‌ಟಾಪಿಂಗ್‌ ಕಾಮಗಾರಿ ಪೂರ್ಣಗೊಳ್ಳುವವರೆಗೆ ತಾತ್ಕಾಲಿಕವಾಗಿ ಮಾತ್ರವೇ ಈ ಭಾಗದಲ್ಲಿ ವಾಹನ ನಿಲುಗಡೆ ನಿರ್ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಎಲ್ಲೆಲ್ಲಿ ವೈಟ್‌ಟಾಪಿಂಗ್?:‌ ರಾಜಾಜಿನಗರ ಮೊದಲನೇ ಎನ್ ಬ್ಲಾಕ್‌ನ ಮುಖ್ಯರಸ್ತೆಯಲ್ಲಿ ಕೂಡ ರಸ್ತೆ ವೈಟ್ ಟಾಪಿಂಗ್ ಹಾಗೂ ಒಳಚರಂಡಿ ವಾಟರ್ ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಸ್ಥಳೀಯ ಶಾಸಕ ಕೆ.ಗೋಪಾಲಯ್ಯ ಅವರು ಇತ್ತೀಚೆಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಿಸಿದ್ದರು. ಗುಣಮಟ್ಟ ಕಾಯ್ದುಕೊಂಡು, ಕಾಮಗಾರಿಯನ್ನು ಶೀಘ್ರದಲ್ಲಿ ಮುಕ್ತಾಯಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದರು.

BBMP Begins Whitetopping Work Traffic Restricted On Peenya 100 Feet Road In Bengaluru

ರಾಜ್‍ಕುಮಾರ್ ವಾರ್ಡ್ 106ರ ವ್ಯಾಪ್ತಿಯ ಪಶ್ಚಿಮ ಕಾರ್ಡ್‌ ರಸ್ತೆ ಹಾಗೂ ಟೋಲ್ ಗೇಟ್ ಮುಖ್ಯ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಅತ್ತಿಗುಪ್ಪೆ ವಾರ್ಡ್‌ನ 132ರ ವ್ಯಾಪ್ತಿಯಲ್ಲಿ ಕೂಡ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಈ ಹಿನ್ನೆಲೆ ಈ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ವಾಹನ ಸವಾರರಿಗೆ ಸೂಚಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+