2 ಸ್ಟ್ರೋಕ್ ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಕೆಗೆ ಪ್ರಸ್ತಾವ

Recommended Video

      2 ಸ್ಟ್ರೋಕ್ ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಕೆಗೆ ಪ್ರಸ್ತಾವ | Oneindia Kannada

      ಬೆಂಗಳೂರು, ಜನವರಿ 29: 2 ಸ್ಟ್ರೋಕ್ ಆಟೋಗಳಿಗೆ ಎಲೆಕ್ಟ್ರಿಕ್ ಬ್ಯಾಟರಿ ಅಳವಡಿಸಿಕೊಳ್ಳು ಅನುಮತಿ ನೀಡುವಂತೆ ಕೋರಿ ಸಾರಿಗೆ ಇಲಾಖೆ ಆಯುಕ್ತ ಬಿ. ದಯಾನಂದ್ ಅವರು ಇಲಾಖೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

      ಏಪ್ರಿಲ್ ನಿಂದ 2ಸ್ಟ್ರೋಕ್ ಆಟೋಗಳನ್ನು ಗುಜರಿಗೆ ಹಾಕಬೇಕು ಎಂಬ ಸೂಚನೆಯನ್ನು ನೀಡಲಾಗಿತ್ತು. ಇದುವರೆಗೂ ಒಂದು ಆಟೋ ಚಾಲಕರೂ ಹೆಸರು ನೋಂದಾಯಿಸಿಕೊಳ್ಳದ ಕಾರಣ ಗುಜರಿಗೆ ಹಾಕಬೇಕೆಂಬ ಸೂಚನೆಗೆ ತಿದ್ದುಪಡಿ ತರಬೇಕು, ಆಟೋಗಳಲ್ಲಿ ಎಲೆಕ್ಟ್ರಿಕ್ ಬ್ಯಾಟರಿಯನ್ನು ಅಳವಡಿಸಿಕೊಳ್ಳುವಂತೆ ಅನುಮತಿ ನೀಡಬೇಕು ಎಂದು ಪತ್ರಬರೆದಿದ್ದಾರೆ.

      2017-18-ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದಂತೆ 2 ಸ್ಟ್ರೋಕ್ ಆಟೋಗಳ ಸಂಚಾರವನ್ನು ನಗರದಲ್ಲಿ ನಿಷೇಧಿಸಲಾಗುತ್ತಿದೆ. ಆ ಆಟೋಗಳನ್ನು ಗುಜರಿಗೆ ಹಾಕಿದರೆ ಮಾತ್ರ, ಹೊಸ ಆಟೋ ಖರೀದಿಗೆ 30 ಸಾವಿರ ಸಬ್ಸಿಡಿ ನೀಡುವುದಾಗಿ ಸಾರಿಗೆ ಇಲಾಖೆ ತಿಳಿಸಿತ್ತು.

      Battery adoption for 2 gear autos: proposal

      ಎಲೆಕ್ಟ್ರಿಕ್ ವಾಹನ ನೀತಿಯನ್ನು ಸರ್ಕಾರ ಜಾರಿಗೆ ತಂದಿದೆ. 2 ಸ್ಟ್ರೋಕ್ ಆಟೊಗಳನ್ನು ಗುಜರಿಗೆ ಹಾಕಲು ಇಷ್ಟವಿಲ್ಲದವರು ಎಲೆಕ್ಟ್ರಿಕ್‌ ಬ್ಯಾಟರಿ ಅಳವಡಿಸಿಕೊಳ್ಳಬಹುದು. ಅವರಿಗೂ 30 ಸಾವಿರ ಸಹಾಯಧನ ನೀಡಲು ಅವಕಾಶವಿದೆ. ಅದಕ್ಕೆ ಕಾರ್ಯದರ್ಶಿಯವರ ಅನುಮತಿ ಕೋರಿದ್ದೇವೆ ಎಂದು ಬಿ.ದಯಾನಂದ್ ಅವರು ತಿಳಿಸಿದ್ದಾರೆ.

      ಕಾರ್ಯದರ್ಶಿ ಅವರ ಒಪ್ಪಿಗೆ ಸಿಕ್ಕ ಬಳಿಕ ಪ್ರಸ್ತಾವವು ಹಣಕಾಸು ಇಲಾಖೆಯ ಅಧಿಕಾರಿಗಳಿಗೆ ಹೋಗಲಿದೆ. ಅವರ ಅನುಮತಿ ಸಿಕ್ಕ ನಂತರವೇ ಹೊಸ ಸೂಚನೆ ಜಾರಿಗೆ ಬರಲಿದೆ. ನಂತರವೇ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಿ, ಸಹಾಯಧನ ಬಿಡುಗಡೆ ಮಾಡಲಿದ್ದೇವೆ ಎಂದಿದ್ದಾರೆ.

      ಬ್ಯಾಟರಿ ಅಳವಡಿಕೆಗೆ 2.10 ಲಕ್ಷ: ಎಲೆಕ್ಟ್ರಿಕ್ ಬ್ಯಾಟರಿಯನ್ನು 2 ಸ್ಟ್ರೋಕ್ ಆಟೋಗಳಿಗೆ ಅಳವಡಿಸಲು 2.10 ಲಕ್ಷ ರೂ. ವೆಚ್ಚವಾಗಲಿದೆ. ಗುಣಮಟ್ಟದ ಬ್ಯಾಟರಿ ಒದಗಿಸುವ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದೇವೆ. ಪ್ರಸ್ತಾವಕ್ಕೆ ಒಪ್ಪಿಗೆ ಸಿಕ್ಕ ಬಳಿಕ ಅದನ್ನು ಬಿಡುಗಡೆ ಮಾಡಲಿದ್ದೇವೆ. ತಮ್ಮಿಷ್ಟದ ಕಂಪನಿ ಬ್ಯಾಟರಿ ಹಾಕಿಸಿಕೊಳ್ಳಬಹುದು. ಬಳಿಕವೇ ಸಹಾಯಧನಕ್ಕೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+