ಇಡ್ಲಿ ವರ್ಲ್ಡ್ ಫೇಮಸ್; ತಿನ್ನುವವರ ಸಂಖ್ಯೆಯಲ್ಲಿ ದೇಶಕ್ಕೆ ಬೆಂಗಳೂರು ನಂಬರ್ 1

ಬೆಂಗಳೂರು, ಮಾರ್ಚ್ 28: ಇನ್ನೇನು ಮಾರ್ಚ್ 30ನೇ ತಾರೀಕು ವಿಶ್ವ ಇಡ್ಲಿ ದಿನ. ಅಪ್ಲಿಕೇಷನ್ ಆಧಾರಿತ ಉಬರ್ ಈಟ್ಸ್ ನಿಂದ ಸಮೀಕ್ಷೆಯೊಂದನ್ನು ಮಾಡಿದ್ದು, ಅತಿ ಹೆಚ್ಚು ಇಡ್ಲಿ ತಿನ್ನುವವರಲ್ಲಿ ಬೆಂಗಳೂರಿಗರು ಮೊದಲಿಗರು ಎಂಬ ಸಂಗತಿ ಬಯಲಾಗಿದೆ. ಆ ನಂತರ ಮುಂಬೈ, ಚೆನ್ನೈ, ಪುಣೆ ಹಾಗೂ ಹೈದರಾಬಾದ್ ನಲ್ಲಿ ಅತಿ ಹೆಚ್ಚು ಇಡ್ಲಿ ತಿನ್ನುತ್ತಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇನ್ನು ಜಾಗತಿಕ ಮಟ್ಟದಲ್ಲಿ ಹೇಳುವುದಾದರೆ ಸ್ಯಾನ್ ಫ್ರಾನ್ಸಿಸ್ಕೋ, ಲಂಡನ್ ಹಾಗೂ ನ್ಯೂಜೆರ್ಸಿಯಲ್ಲಿ ಇಡ್ಲಿ ತಿನ್ನುವವರ ಸಂಖ್ಯೆ ಹೆಚ್ಚಂತೆ. ಭಾರತದಲ್ಲಿ ಉಬರ್ ಈಟ್ಸ್ ಅಪ್ಲಿಕೇಷನ್ ನಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ತಿಂಡಿ ಕೂಡ ಇಡ್ಲಿಯೇ. ಬೆಳಗ್ಗೆ 7.30 ರಿಂದ ಬೆಳಗ್ಗೆ 11.30ರ ಮಧ್ಯೆ ಅತಿ ಹೆಚ್ಚು ಸೇವಿಸುವ ತಿಂಡಿ ಇಡ್ಲಿಯೇ ಎಂಬುದು ತಿಳಿದುಬಂದಿದೆ.

ಮಾರ್ಚ್ 10,2019ರಂದು ಭಾರತದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಡ್ಲಿಯನ್ನು ಆರ್ಡರ್ ಮಾಡಲಾಗಿದೆ. ಫೆಬ್ರವರಿ 23ನೇ ತಾರೀಕು ಮುಂಬೈನ ಒಬ್ಬರೇ ಗ್ರಾಹಕರು 110 ಪ್ಲೇಟ್ ಇಡ್ಲಿ ಆರ್ಡರ್ ಮಾಡಿದ್ದಾರೆ. ಭಾರತೀಯರು ಈ ಆಹಾರ ಪದಾರ್ಥ ಆರ್ಡರ್ ಮಾಡುವ ವೇಳೆ ಹೆಚ್ಚಿನ ಚಟ್ನಿ, ಸಾಂಬಾರ್ ಕೂಡ ಕೇಳಿದ್ದಾರೆ.

Bangaloreans most favorite morning breakfast Idli

ಬೆಂಗಳೂರಿಗರು ತಟ್ಟೆ ಇಡ್ಲಿ ಹೆಚ್ಚು ಆರ್ಡರ್ ಮಾಡಿದ್ದರೆ, ಚೆನ್ನೈನಲ್ಲಿ ಅಕ್ಕಿ ಇಡ್ಲಿ, ದೆಹಲಿ ಹಾಗೂ ಚಂಡೀಗಢದಲ್ಲಿ ವೆಜಿಟೆಬಲ್ ಇಡ್ಲಿ, ಹೈದರಾಬಾದ್ ನಲ್ಲಿ ಮಸಾಲೆ ಇಡ್ಲಿ, ಕೊಚ್ಚಿಯಲ್ಲಿ ಪೆಪ್ಪರ್ ಇಡ್ಲಿ, ಕೋಲ್ಕತ್ತಾದಲ್ಲಿ ಫಿಂಗರ್- ಫ್ರೈಡ್ ಇಡ್ಲಿ ಮತ್ತು ಮುಂಬೈನಲ್ಲಿ ಮಸಾಲ ಇಡ್ಲಿ ಹೆಚ್ಚಿನ ಪ್ರಮಾಣದಲ್ಲಿ ಆರ್ಡರ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+