ಹೊಂಗಸಂದ್ರದಲ್ಲಿ ಎರಡನೇ ಮಹಡಿಯಿಂದ ಬಿದ್ದು ಹೆಣ್ಣು ಮಗು ಸಾವು
ಬೆಂಗಳೂರು, ಜನವರಿ 19: ಎರಡನೇ ಮಹಡಿಯಿಂದ ಬಿದ್ದು ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ಬೇಗೂರು ರಸ್ತೆಯ ಹೊಂಗಸಂದ್ರದಲ್ಲಿ ನಡೆದಿದೆ.
ಒಂದೂವರೆ ವರ್ಷದ ಮಗು ಎರಡನೇ ಮಹಡಿಯಿಂದ ಬಿದ್ದು ಮೃತಪಟ್ಟಿದೆ. ಚೆನ್ನೈ ಮೂಲದ ಬಾಲಸುಬ್ರಮಣಿ, ಲಾವಣ್ಯ ದಂಪತಿಯ ಮಗು ಸೋಫಿಯಾ ಮೃತಪಟ್ಟವಳು.

ಬೇಗೂರು ರಸ್ತೆಯ ಹೊಂಗಸಂದ್ರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದಾರೆ. ಗುರುವಾರ ರಾತ್ರಿ ಲಾವಣ್ಯ ಅವರು ಮಗುವಿಗೆ ಊಟ ತರಲು ಮನೆಯೊಳಗೆ ಹೋಗಿದ್ದರು. ಈ ವೇಳೆ ಮಹಡಿಗೆ ಹಾಕಿದ್ದ ಕಬ್ಬಿಣದ ಗ್ರಿಲ್‌ನ ಸಂಧಿಯಲ್ಲಿ ನುಗ್ಗಿದ ಮಗು ಕೆಳಗೆ ಬಿದ್ದಿದೆ.
ಗಾಯಗೊಂಡಿದ್ದ ಮಗುವನ್ನು ಸ್ಥಳೀಯರು ಸೇಂಟ್ ಜಾನ್ಸ್ ಆಸ್ಪತ್ರೆಗೆ ಸೇರಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಅಸು ನೀಗಿದೆ. ಗ್ರಿಲ್‌ಗಳ ನಡುವೆ ಮಗು ತೂರಬಾರದು ಎಂದು ವೈಡಿಂಗ್ ವೈರ್‌ಗಳನ್ನು ಸುತ್ತಿದ್ದರು, ಆದರೂ ಅದರ ನಡುವೆಯೇ ಹೋಗಿ ಮಗು ಕೆಳಗೆ ಬಿದ್ದಿದೆ.












Click it and Unblock the Notifications