B Khata: ಬಿ ಖಾತಾ ನಿಯಂತ್ರಣ: ಎ - ಖಾತಾ ವಿತರಣೆ ಬಗ್ಗೆ ಮಹತ್ವದ ಆದೇಶ ಹೊರಡಿಸಿದ ಸರ್ಕಾರ!
B Khata: ಕರ್ನಾಟಕ ಸರ್ಕಾರವು ಬಿ - ಖಾತಾ ಆಸ್ತಿದಾರರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದೆ. ಇದರೊಂದಿಗೆ ಎ ಖಾತಾ ಹಾಗೂ ಬಿ ಖಾತಾಗೆ ಸಂಬಂಧಿಸಿದ ಮತ್ತೊಂದು ಮಹತ್ವದ ಗುಡ್‌ನ್ಯೂಸ್ ಅನ್ನು ರಾಜ್ಯ ಸರ್ಕಾರವು ನೀಡಿದೆ. ಕರ್ನಾಟಕದಲ್ಲಿ ಇದೀಗ ಎಲ್ಲಾ ಬಿ ಖಾತಾ ಆಸ್ತಿಗಳಿಗೂ ಕೆಲವು ನಿರ್ದಿಷ್ಟ ಎ ಖಾತಾ ಸೌಲಭ್ಯ ಸಿಗಲಿದೆ ಎಂದು ಕರ್ನಾಟಕ ಸರ್ಕಾರವೇ ಹೇಳಿದ್ದು. ಬಿ ಖಾತಾಗೆ ಸಂಬಂಧಿಸಿದಂತೆ ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗಿದ್ದ ಗೊಂದಲಕ್ಕೆ ಬ್ರೇಕ್ ಬಿದ್ದಂತೆ ಆಗಿದೆ. ಇದೀಗ ಎ ಖಾತಾ ಮತ್ತು ಬಿ ಖಾತಾಗೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಆದೇಶವನ್ನು ಹೊರಡಿಸಲಾಗಿದೆ ಅದರ ಸಂಪೂರ್ಣ ವಿವರ ಈ ಲೇಖನದಲ್ಲಿ ತಿಳಿಯೋಣ.
ಬೆಂಗಳೂರು ನಗರವು ದೇಶದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ನಗರವಾಗಿದೆ. ನಗರವು ಎದುರಿಸಬೇಕಾದ ಸವಾಲುಗಳು ಮತ್ತು ಅದರ ವ್ಯವಸ್ಥಿತ ಮತ್ತು ಸಂಘಟಿತ ಬೆಳವಣಿಗೆ, ಅಭಿವೃದ್ಧಿಯ ಅಗತ್ಯತೆಯನ್ನು ಕಡೆಗಣಿಸುವಂತಿಲ್ಲ. ಅನಿಯಂತ್ರಿತ ಮತ್ತು ಅವ್ಯವಸ್ಥಿತವಾದ ಬೆಳವಣಿಗೆಯು, ಈಗ ನಗರವು ಎದುರಿಸುತ್ತಿರುವ ಹೆಚ್ಚಿನ ತೊಂದರೆಗಳಾಗಿವೆ ಎಂದು ರಾಜ್ಯ ಸರ್ಕಾರ ಹೇಳಿದೆ. ಮುಂದುವರಿದು ಕರ್ನಾಟಕ ಸರ್ಕಾರದ ನಡವಳಿಗಳಲ್ಲಿ ಕೆಲವೊಂದು ಮಹತ್ವದ ಸೂಚನೆಯನ್ನು ನೀಡಲಾಗಿದೆ.

ಅಸುರಕ್ಷತೆ ಮತ್ತು ಅನಿಯಂತ್ರಿತ ಕಟ್ಟಡಗಳ ನಿರ್ಮಾಣಗಳು, ಅಸುರಕ್ಷಿತ ಕಟ್ಟಡಗಳಿಂದ ಪ್ರಾಣಕ್ಕೆ ತೊಂದರೆ, ಕಳಪೆ ನಾಗರಿಕ ಸೌಕರ್ಯಗಳು, ಪುವಾಹ ಮತ್ತು ಇಕ್ಕಟ್ಟು ಬೀದಿಗಳಿಂದ ಉಸಿರುಗಟ್ಟುವಿಕೆ, ಕಾವೇರಿ ನೀರು ಸರಬರಾಜು ಮಾಡುವ ಸವಾಲು, ಇತ್ಯಾದಿ ತೊಂದರೆಗಳು ಎದುರಾಗಿವೆ. ಅನಧಿಕೃತ ಕಟ್ಟಡಗಳು ಮತ್ತು ಯೋಜಿತವಲ್ಲದ ಅಭಿವೃದ್ಧಿಯಿಂದ ಲಕ್ಷಾಂತರ ಸ್ವತ್ತುಗಳಿಗೆ 'ಬಿ' ಖಾತಾ ನೀಡಬೇಕಾಗಿದೆ. ಇದನ್ನು ನಿಯಂತ್ರಿಸಿ, ಹಿಡಿತದಲ್ಲಿಡಬೇಕಾಗಿರುತ್ತದೆ. ಪ್ರಸ್ತುತ, 'ಬಿ' ಖಾತಾ ಆಸ್ತಿಯು, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961 (ಕೆ.ಟಿ.ಸಿ.ಪಿ. ಕಾಯ್)ಯ ವೀಕ್ಷಣೆ ಮತ್ತು ವ್ಯಾಪ್ತಿಯ ಹೊರಗಿರುತ್ತದೆ. '29' ಖಾತಾ ಆಸ್ತಿಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳನ್ನು ನಿಯಂತ್ರಿಸಲಾಗದೆ, ಅದು ಪೂರ್ಣ ಪ್ರಮಾಣದಲ್ಲಿ ನಿಯಮಗಳ ಉಲ್ಲಂಘನೆಯಾಗಿ, ಅಸುರಕ್ಷಿತ ಕಟ್ಟಡಗಳ ನಿರ್ಮಾಣಕ್ಕೆ ಕಾರಣವಾಗಿರುತ್ತದೆ.
ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಮಳೆಗಾಲದಲ್ಲಿ'ಬಿ' ಖಾತಾ ಆಸ್ತಿಗಳಲ್ಲಿ ನಿರ್ಮಿಸಿದ್ದ ಕಟ್ಟಡಗಳು ಕುಸಿದು ಬಿದ್ದು, ಕೆ.ಟಿ.ಸಿ.ಪಿ ಕಾಯ್ದೆ, 1961ರ ವಿರುದ್ಧವಾಗಿ, ನಿಯಂತ್ರಣವಿಲ್ಲದೆ ನಿರ್ಮಿಸಲಾಗಿರುತ್ತವೆ. ಇಂತಹ ಆಸ್ತಿಗಳು ಸಾಮಾನ್ಯವಾಗಿ ಎಲ್ಲಾ ಸೌಲಭ್ಯಗಳನ್ನು ಅಂದರೆ ರಸ್ತೆ, ಮೋರಿ ಮತ್ತು ಇತರೆ ಎಲ್ಲಾ ನಾಗರಿಕ (ಪೌರ) ಸೌಲಭ್ಯಗಳನ್ನು ಹೊಂದಿರುತ್ತವೆ. ಆದರೆ, ಕೆ.ಟಿ.ಸಿ.ಪಿ. ಕಾಯ್ದೆ, 1961ರ ನಿಯಂತ್ರಣ ಮತ್ತು ವ್ಯಾಪ್ತಿಯ ಹೊರಗಡೆ ಇರುತ್ತವೆ. ಆದ್ದರಿಂದ, ಇಂತಹ 'ಬಿ' ಖಾತಾ ಆಸ್ತಿಗಳನ್ನು ಸಹ ಕೆ.ಟಿ.ಸಿ.ಪಿ. ಕಾಯ್ದೆ, 1961ರ ನಿಯಂತ್ರಣ ಮತ್ತು ವ್ಯಾಪ್ತಿಗೆ ತರುವ ಅವಶ್ಯಕತೆ ಇರುತ್ತದೆ ಎಂದು ಸರ್ಕಾರ ಹೇಳಿದೆ.
ಅಲ್ಲದೇ ಮುಂದುವರಿದು ದಿನಾಂಕ: 30.09.20240 ನಂತರ ರಚಿಸಿರುವ ಅಥವಾ ನಿರ್ಮಿಸಲಾಗಿರುವ ಅನಧಿಕೃತ ಆಸ್ತಿಗಳಿಗೆ ಖಾತಾ ನೀಡುವುದನ್ನು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 (ಜಿ.ಬಿ.ಜಿ. ಕಾಯ್ದೆ-2024)ರ ಉಪ ಕಲಂ 3ರ ಕಲಂ 147 ನಿಷೇಧಿಸುತ್ತದೆ. ಈ ವಿಷಯಗಳನ್ನು ಸಮಗ್ರವಾಗಿ ಪರಿಶೀಲಿಸಲು ಮತ್ತು ಶಿಫಾರಸ್ಸನ್ನು ನೀಡುವ ಸಲುವಾಗಿ ಬಿ.ಬಿ.ಎಂ.ಪಿ. ಮುಖ್ಯ ಆಯುಕ್ತರ ನೇತೃತ್ವದಲ್ಲಿ ವಿಶೇಷ ಸಮಿತಿಯನ್ನು ರಚನೆ ಮಾಡಲಾಗಿದೆ.
ಈ ಸಮಿತಿಯು ಸುದೀರ್ಘವಾಗಿ ಪರಿಶೀಲಿಸಿ, ಕರ್ನಾಟಕ ಮಹಾನಗರ ಪಾಲಿಕೆಗಳ ಕಾಯ್ದೆ, 1976ಕ್ಕೆ ತಿದ್ದುಪಡಿ ಮಾಡಿ ಸೆಕ್ಷನ್ 108ಎ ಅನ್ನು ಸೇರ್ಪಡೆ ಮಾಡಿ ಜಾರಿಗೆ ತಂದ ನಂತರ, ಬಿ.ಬಿ.ಎಂ.ಪಿ.ಯಲ್ಲಿ ಅನಧಿಕೃತ ಆಸ್ತಿಗಳಿಗೆ ಬಿ-ಖಾತಾವನ್ನು ನೀಡುವ ಕ್ರಮವು 2009ನೇ ಸಾಲಿನಲ್ಲಿಯೇ ಜಾರಿಗೆ ಬಂದಿರುವುದಾಗಿ ತಿಳಿಸಲಾಗಿದೆ. ಆದ್ದರಿಂದ, ಅನಧಿಕೃತ ಆಸ್ತಿಗಳಿಗೆ ಬಿ-ಖಾತಾವನ್ನು ನೀಡುವ ಪರಿಕಲ್ಪನೆ ಅಥವಾ ಆಯ್ಕೆ ಇರಲಿಲ್ಲವಾದ್ದರಿಂದ, 2009ರ ಒಳಗೆ ನೀಡಿರುವ ಎಲ್ಲಾ ಖಾತಾಗಳು ಎ-ಖಾತಾ ಅಥವಾ ಕ್ರಮಬದ್ಧವಾದ ಖಾತಾಗಳಾಗಿರುತ್ತದೆ ಎಂದು ತಿಳಿಸಿಲಾಗಿದೆ.
ಮುಂದುವರೆದು, ದಿನಾಂಕ: 05.07.2021 ರಂದು ಕೆ.ಟಿ.ಸಿ.ಪಿ., ಕಾಯ್ದೆಗೆ ತಿದ್ದುಪಡಿ ಮೂಲಕ ಸೆಕ್ಷನ್ 17ಕ್ಕೆ ಉಪ ಕಲಂ 2-ಇ ಅನ್ನು ಸೇರ್ಪಡೆ ಮಾಡಿ, ಇದರಲ್ಲಿ ಕೆ.ಟಿ.ಸಿ.ಪಿ. ಕಾಯ್ದೆ, 1961 ರಡಿ ಯೋಜನಾ ಪ್ರಾಧಿಕಾರದಿಂದ ಬಿಡುಗಡೆ ಮಾಡದಿರುವ ಯಾವುದೇ ನಿವೇಶನ ಕಟ್ಟಡಗಳಿಗೆ (building site) ಖಾತಾ ಅಥವಾ ಇ-ಖಾತಾ ನೀಡುವುದನ್ನು ನಿಷೇಧಿಸಲಾಗಿದೆ.
ಆದಾಗ್ಯೂ, ಈ ತಿದ್ದುಪಡಿಗಳನ್ನು ತರುವ ಮೊದಲೇ ಕೆ.ಟಿ.ಸಿ.ಪಿ. ಕಾಯ್ದೆ, 1961ರ ಪಕಾರ ಮಂಜೂರಾದ ಬಡಾವಣೆಗಳ ನಿವೇಶನಗಳಿಗೆ, ಎ-ಖಾತಾವನ್ನು ನೀಡುವುದರ ಜೊತೆಗೆ, ಬಿ.ಬಿ.ಎಂ.ಪಿ.ಯು "ಏಕ ನಿವೇಶನ (Single Plot)"ಗಳಿಗೂ ಸಹ ಎ-ಖಾತಾವನ್ನು ನೀಡಲಾಗಿರುತ್ತದೆ.












Click it and Unblock the Notifications