ಯಾರದ್ದೋ ಭವಿಷ್ಯ ಕೇಳಿ ಹೆಂಡತಿಗೆ ಗರ್ಭಪಾತ ಮಾಡಿಸಿದ ಉದ್ಯಮಿ, ಕಾರಣವೇನು?

ಬೆಂಗಳೂರು, ಜನವರಿ 4: ಯಾರದ್ದೋ ಭವಿಷ್ಯ ಕೇಳಿ ಉದ್ಯಮಿಯೊಬ್ಬ ಹೆಂಡತಿಗೆ ಗರ್ಭಪಾತ ಮಾಡಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

ಹೆಂಡತಿಯ ಗರ್ಭದಲ್ಲಿ ಹೆಣ್ಣುಮಗುವಿದೆ ಎಂದು ಯಾರೋ ಹೇಳಿದ್ದ ಭವಿಷ್ಯ ನಂಬಿಕೊಂಡು ಹೆಂಡತಿಗೆ ಗರ್ಭಪಾತ ಮಾಡಿಸಿದ್ದಾನೆ. ಒಂದೊಮ್ಮೆ ಹೆಣ್ಣುಮಗುವಾದರೆ ಎನ್ನುವ ಭಯಕ್ಕೆ ಕರುಳಿನ ಕುಡಿಯನ್ನೇ ಕಿವುಚಿ ಹಾಕಿದ್ದಾನೆ.

ವೈದ್ಯರಿಗೆ ಈ ಬಗ್ಗೆ ಹಲವಾರು ಆಮಿಷಗಳನ್ನು ಒಡ್ಡಿ ಮಗು ಯಾವುದೆಂದು ತಿಳಿದುಕೊಳ್ಳಲು ನೋಡಿದ, ಬಳಿಕ ಅದು ಸಾಧ್ಯವಾಗದಿದ್ದಾಗ ಆತ ಜ್ಯೋತಿಷಿಯೊಬ್ಬರ ಮೊರೆ ಹೋಗಿದ್ದಾನೆ, ತನಗೆ ಗಂಡು ಮಗು ಹುಟ್ಟುತ್ತೋ ಅಥವಾ ಹೆಣ್ಣು ಮಗುನಾ ಎಂದು ಕೇಳಿದಾಗ ಜ್ಯೋತಿಷಿ ನಿಮಗೆ ಹೆಣ್ಣುಮಗುವಾಗುತ್ತದೆ ಎಂದು ಹೇಳಿದ್ದಾರೆ.

ಯಾವ ಮಗುವಾದರೂ ಆಗಲಿ ಆರೋಗ್ಯವಾಗಿ ಹುಟ್ಟಲಿ ಎಂದು ಹಾರೈಸುವ ಈ ಕಾಲದಲ್ಲಿ ಹೆಣ್ಣು, ಗಂಡು ಎನ್ನುವ ತಾರತಮ್ಯ ಇನ್ನೂ ಹೊಗೆಯಾಡುತ್ತಿದೆ.

Astrologer predicts girl child, businessman forces wife to abort

ಅದಕ್ಕೆ ಹತಾಷೆಗೊಂಡ ಉದ್ಯಮಿ ಹೆಂಡತಿಗೆ ಚಿತ್ರಹಿಂಸೆ ನೀಡಿ ಕೊನೆಗೂ ಗರ್ಭಪಾತ ಮಾಡಿಸಿದ್ದಾನೆ. ಗರ್ಭಪಾತ ಮಾಡಿಸಿದ ಬಳಿಕವೂ ವಿಚ್ಛೇದನ ನೀಡುವಂತೆ ಒತ್ತಾಯಿಸಿದ್ದಾನೆ ಆಗ ಹೆಂಡತಿ ಮಹಿಳಾ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+