ವಿಡಿಯೋ: ಸುದೀಪ್ ನಿರ್ಧಾರಕ್ಕೆ ಅಭಿಮಾನಿಗಳಿಂದ ಸಿಕ್ತು ಬೆಂಬಲ
ಬೆಂಗಳೂರು, ಮೇ 09: ಕನ್ನಡ ಚಿತ್ರರಂಗದ ಸ್ಟಾರ್ ನಟ ಕಿಚ್ಚ ಸುದೀಪ ಅವರು ಇನ್ಮುಂದೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ನಿರ್ಧರಿಸಿರುವುದು ಗೊತ್ತಿರುವ ವಿಚಾರ. ಸುದೀಪ ಅವರ ನಿರ್ಧಾರಕ್ಕೆ ಅಭಿಮಾನಿಗಳಿಂದ ಭರಪೂರ ಬೆಂಬಲ ವ್ಯಕ್ತವಾಗಿದೆ.
ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಕಿಚ್ಚ ಸುದೀಪ್ ಅವರಿಗೆ ವಿಡಿಯೋ ಸಂದೇಶ ಕಳಿಸಿರುವ ಅಭಿಮಾನಿಗಳು ತಮ್ಮ ಬೆಂಬಲ ತಿಳಿಸಿದ್ದಾರೆ. ಕಿಚ್ಚ ಸುದೀಪ ಅವರು ಪ್ರಚಾರದ ಬಗ್ಗೆ ಬರೆದುಕೊಂಡಿದ್ದು ಈ ಕೆಳಗಿನಂತಿದೆ:

ಪ್ರಚಾರ....
ನಾನು ಪ್ರಚಾರಕ್ಕೆ ಸೇರಿದ್ದು ಸುಮಾರು ವರ್ಷಗಳ ಪರಿಚಯದ ನನ್ನ ಕೆಲವು ಗೆಳೆಯರಿಗಾಗಿ,, ಇವರು ಒಂದಲ್ಲ ಒಂದು ರೀತಿ ನನ್ನೊಟ್ಟಿಗೆ ನನ್ನ ಕಠಿಣ ಸಮಯದಲ್ಲಿ ನಿಂತವರು,, ಸಣ್ಣದು ಅಥವ ದೊಡ್ಡದು ಎಂಬುದು ವಿಷಯವಲ್ಲ,, ಅವರು ಅಂದು ನಿಂತದ್ದು ವಿಷಯ.. ಈಗ ಅವರಿಗಾಗಿ ನಾನು ಅಲ್ಲಿರುವುದು ಬಹುಶಃ ಅವರು ನನ್ನಿಂದ ಪಡೆಯುವ ಒಂದು ಸಣ್ಣ ಬೆಂಬಲ,, ಇದು ಕನಿಷ್ಠ ನಾನು ಅವರಿಗಾಗಿ ಮಾಡಬಹುದಾದದ್ದು...ಅದರಲ್ಲಿ ಯಾವುದೇ ವಿಷಾದವಿಲ್ಲ.
ಪ್ರಚಾರಕ್ಕೆ ಹೋಗಲ್ಲ ಎಂದು ಬಹಿರಂಗ ಪತ್ರ ಬರೆದ ಸುದೀಪ್
ನನ್ನ ಗೆಳೆಯರ ಹಾಗು ಅಭಿಮಾನಿಗಳ ಸಲುವಾಗಿ,,ನಾನು ಮುಂದಿನ ಯಾವುದೇ ಪ್ರಚಾರದಲ್ಲಿ ಭಾಗವಹಿಸುವುದಿಲ್ಲ.ಎಲ್ಲರಿಗೂ ನನ್ನ ಅವಶ್ಯಕತೆ ಇದೆ ಹಾಗು ನನ್ನ ಉಪಸ್ಥಿತಿಯಿಂದ ಫಲಿತಾಂಶಗಳು ಬದಲಾಗುತ್ತದೆ ಎಂದು ನಾನು ನನ್ನನ್ನು ಅಂತಹ ದೊಡ್ಡ ಮಟ್ಟಕ್ಕೆ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ..
ನಾನು ಒಬ್ಬ ಕಲಾವಿದ ನನ್ನ ಪಯಣದಲ್ಲಿ ನನ್ನೊಟ್ಟಿಗೆ ಇದ್ದಂತಹ ಗೆಳೆಯರು ಹಾಗು ಅಭಿಮಾನಿಗಳ ಅಭಿಪ್ರಾಯ ಮುಖ್ಯವಾಗುತ್ತದೆ..
ಇದು ನಾನು ತೆಗೆದುಕೊಳ್ಳುತ್ತಿರುವ ಕಠಿಣ ನಿರ್ಧಾರ,,,,ಆದರೂ,,ಈ ನಿರ್ಧಾರ ನನ್ನೊಟ್ಟಿಗೆ ನಿಂತ ನನ್ನ ಅಭಿಮಾನಿಗಳು ಹಾಗು ಗೆಳೆಯರ ಸಲುವಾಗಿ ಕೈಗೊಳ್ಳುತ್ತಿದ್ದೇನೆ...
ನಾನು ಯಾವುದೇ ರೀತಿ ನನ್ನ ಕ್ರಮಗಳಲ್ಲಿ ಅವರಿಗೆ ನೋವುಂಟು ಮಾಡಲು ಇಚ್ಛಿಸುವುದಿಲ್ಲ...
ತುಂಬು ಪ್ರೀತಿಯಿಂದ.
ಕಿಚ್ಚ

ಇದಾದ ಬಳಿಕ ಸುದೀಪ್ ಅವರು ಈ ನಿರ್ಧಾರ ಕೈಗೊಂಡರು
ರಾಜುಗೌಡ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಅವರ ಪರವಾಗಿ ಮತಯಾಚನೆ ಮಾಡಿದ ಸುದೀಪ್ ಅವರು ಈ ನಿರ್ಧಾರ ಕೈಗೊಳ್ಳಲು ಅಭಿಮಾನಿಗಳೇ ಕಾರಣ. ಸುದೀಪ್ ಅವರನ್ನ ನಾವು ನಟನಾಗಿ ಮಾತ್ರ ನೋಡಲು ಇಷ್ಟಪಡುತ್ತೇವೆ. ಆದ್ರೆ, ನೀವು ಅಭ್ಯರ್ಥಿಗಳ ಪರ ಪ್ರಚಾರ ಮಾಡೋಕೆ ಹೋಗಿದ್ದೀರಾ. ಇದು ತಪ್ಪು. ಹೀಗೆ ಮಾಡಬಾರದಿತ್ತು ಎಂಬ ಟೀಕೆಗಳು, ಬೇಸರದ ಮಾತುಗಳು ಅಭಿಮಾನಿ ವಲಯದಿಂದ ಕೇಳಿ ಬಂದಿತ್ತು. ಇದಾದ ಬಳಿಕ ಸುದೀಪ್ ಅವರು ಈ ನಿರ್ಧಾರ ಕೈಗೊಂಡರು.
|
ಅಣ್ಣಾ ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲ
ಅಣ್ಣಾ ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲ, ಸದಾ ಇರುತ್ತದೆ ಎಂದ ಕುಮಾರ್ ರಾವ್
— Harsha kiccha (@Harsha_sj) May 8, 2018 |
ತುಂಬಾ ಒಳ್ಳೆಯ ನಿರ್ಧಾರ
ತುಂಬಾ ಒಳ್ಳೆಯ ನಿರ್ಧಾರ, ನೀವು ಯಾವುದೇ ನಿರ್ಧಾರ ಕೈಗೊಂಡರೂ ಸಾಕಷ್ಟು ಯೋಚನೆ ಮಾಡಿ, ನಿರ್ಧರಿಸುತ್ತೀರಿ ಎಂದು ಗೊತ್ತು, ನಿಮ್ಮ ನಿರ್ಧಾರಕ್ಕೆ ನಮ್ಮ ಬೆಂಬಲವಿರುತ್ತದೆ ಎಂದ ಹರ್ಷ.
|
ಕಿಚ್ಚ ಬಾಸ್ ಗೆ ನನ್ನ ಒಂದು ಪುಟ್ಟ ಮಾತು
ಕಿಚ್ಚ ಬಾಸ್ ಗೆ ನನ್ನ ಒಂದು ಪುಟ್ಟ ಮಾತು ಎಂಬ ಕಿಚ್ಚನ ಅಭಿಮಾನಿ ನೇತ್ರಾಗೌಡ.
|
ಕಿಚ್ಚ ಸುದೀಪ್ ಅಭಿಮಾನಿ ಶಾರದಾ ಮೌಳಿ
ನನ್ನ ಜೀವನದಲ್ಲಿ ಅತ್ಯಂತ ಪ್ರೀತಿಸುವ ಗೌರವಿಸುವ ವ್ಯಕ್ತಿ ಸುದೀಪ್ ಸರ್ ಗೆ ಒಂದು ಮಾತು- ಶಾರದಾ ಮೌಳಿ












Click it and Unblock the Notifications