ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಟಿವಿ ಸಮೀಕ್ಷೆ: ಬೆಂಗಳೂರಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲ

By Manjunatha
|
Google Oneindia Kannada News

ಬೆಂಗಳೂರು, ಮೇ 09: ಮತದಾನ ಇನ್ನು ಮೂರು ದಿನ ಮಾತ್ರ ಬಾಕಿ ಉಳಿದಿರುವಾಗ ಕನ್ನಡ ಸುದ್ದಿ ವಾಹಿನಿ ಬಿಟಿವಿಯು ಚುನಾವಣೆ ಕುರಿತ ಜನಾಭಿಪ್ರಾಯ ಸಂಗ್ರಹಿಸಿದ್ದು ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಲಿದೆ.

ವಲಯವಾರು ಸಮೀಕ್ಷೆ ನಡೆದಿದ್ದು ಫಲಿತಾಂಶದ ಪ್ರಕಾರ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸಮಬಲ ಸಾಧಿಸಲಿವೆ. ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ 13, ಬಿಜೆಪಿ 13 ಸ್ಥಾನಗಳನ್ನು ಪಡೆದರೆ ಉಳಿದ ಒಂದು ಸ್ಥಾನ ಜೆಡಿಎಸ್‌ ಪಾಲಾಗಲಿದೆಯಂತೆ.

ಬಿಟಿವಿ ಸಮೀಕ್ಷೆ: ಫಲಿತಾಂಶ ನಿರ್ಧರಿಸುವ ಪ್ರಶ್ನೆಗಳಿಗೆ ಜನರ ಉತ್ತರಬಿಟಿವಿ ಸಮೀಕ್ಷೆ: ಫಲಿತಾಂಶ ನಿರ್ಧರಿಸುವ ಪ್ರಶ್ನೆಗಳಿಗೆ ಜನರ ಉತ್ತರ

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 13 ಸ್ಥಾನ, ಬಿಜೆಪಿ 12 ಸ್ಥಾನ ಮತ್ತು ಜೆಡಿಸ್ 3 ಸ್ಥಾನವನ್ನು ಗಳಿಸಿತ್ತು. ಆದರೆ ಈ ಬಾರಿ ಜೆಡಿಎಸ್‌ ಎರಡು ಸ್ಥಾನವನ್ನು ಕಳೆದುಕೊಳ್ಳಲಿದ್ದು ಬಿಜೆಪಿ ಒಂದು ಸ್ಥಾನ ಏರಿಕೆ ಆಗಲಿದೆ ಎನ್ನುತ್ತಿದೆ ಸಮೀಕ್ಷೆ.

As per BTv survey equal fight in Bengaluru between congress-BJP

ಪಬ್ಲಿಕ್ ಟಿವಿ ಸಮೀಕ್ಷೆ: ರಾಜ್ಯದ ಭವಿಷ್ಯ ನಿರ್ಧರಿಸಲಿರುವ ಆ 22 ಪ್ರಶ್ನೆಗಳು ಪಬ್ಲಿಕ್ ಟಿವಿ ಸಮೀಕ್ಷೆ: ರಾಜ್ಯದ ಭವಿಷ್ಯ ನಿರ್ಧರಿಸಲಿರುವ ಆ 22 ಪ್ರಶ್ನೆಗಳು

ಕಾಂಗ್ರೆಸ್‌ ತನ್ನ ಹಳೆಯ ಪ್ರದರ್ಶನವನ್ನೂ ಈ ಚುನಾವಣೆಯಲ್ಲೂ ಉಳಿಸಿಕೊಳ್ಳಲಿದ್ದರೆ, ಬಿಜೆಪಿ ಅಲ್ಪ ಪ್ರಗತಿಯನ್ನಷ್ಟೆ ಬೆಂಗಳೂರಿನಲ್ಲಿ ತೋರಿಸಿದೆ. ಜೆಡಿಎಸ್‌ ಪಕ್ಷವು ಇರುವ ಮೂರು ಸ್ಥಾನದಲ್ಲಿ ಒಂದನ್ನು ಕಳೆದುಕೊಳ್ಳಲಿದೆ. ಜೆಡಿಎಸ್‌ನ ಗೆಲ್ಲುವ ಕುದುರೆ ಜಮೀರ್ ಅಹ್ಮದ್ ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಿರುವುದು ಜೆಡಿಎಸ್‌ ತನ್ನ ಸ್ಥಾನ ಕಳೆದುಕೊಳ್ಳುವುದಕ್ಕೆ ಪ್ರಮುಖ ಕಾರಣ ಇರಲೂ ಬಹುದು.

English summary
Btv collected opinion poll on Karnataka assembly elections 2018. As per the survey in Bengaluru BJP and congress both will win in 13 seats equaly JDS will win in just one constituency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X