Bengaluru Police Arrest ಐಷಾರಾಮಿ ಕಳ್ಳ ಅಂಧರ್, ವಿಲ್ಲಾಗಳೇ ಇವನ ಟಾರ್ಗೆಟ್!
ಅವನು ಹೊರಗಿನಿಂದ ನೋಡುವುದಕ್ಕೆ ಶ್ರೀಮಂತ. ಕೈಯಲ್ಲಿ ದಿವವೂ ಡಿಸೈನ್, ಡಿಸೈನ್ ವಾಚ್. ಹೊಸ ಬಗೆಯ ಬಟ್ಟೆಗಳು. ಆದರೆ, ಅವೊಬ್ಬ ಕಳ್ಳ. ಬೆಂಗಳೂರಲ್ಲಿ ಐಷಾರಾಮಿ ಕಳ್ಳನೊಬ್ಬನನ್ನು ಪೊಲೀಸರು ತಮ್ಮ ಬಲೆಗೆ ಬೀಸಿದ್ದಾರೆ. ಈ ಐಷಾರಾಮಿ ಕಳ್ಳ ಟಾರ್ಗೆಟ್ ಮಾಡುವುದು ವಿಲ್ಲಾ ಹಾಗೂ ಐಷಾರಾಮಿ ಮನೆಗಳನ್ನೇ. ಆ ಕಳ್ಳನ ಬಳಿ ಐಷಾರಾಮಿ ವಸ್ತುಗಳು ಹಾಗೂ ವಾಚ್, ಅಮೆರಿಕನ್ ಡಾಲರ್‌ಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಐಷಾರಾಮಿ ವಿಲ್ಲಾ ಹಾಗೂ ಬಂಗಲೆಗಳನ್ನೇ ಗುರಿಯಾಗಿಸಿಕೊಂಡು ಅವನು ಕಳ್ಳತನ ಮಾಡುತ್ತಿದ್ದ. ಐಷಾರಾಮಿ ಖದೀಮ ತಾನು ಕಳ್ಳತನ ಮಾಡಿದ ವಸ್ತುಗಳನ್ನು ಎಲ್ಲಿ ಬಚ್ಚಿಟ್ಟಿದ್ದ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದಾಗ ಅವರಿಗೂ ಶಾಕ್ ಆಗಿತ್ತು. ಐಷಾರಾಮಿ ಖದೀಮನಿಂದ ಪೊಲೀಸರು 170 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಯ 32 ವಾಚ್‌ಗಳು, 3,900 ಅಮೆರಿಕನ್ ಡಾಲರ್ ಮತ್ತು 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯವು ಬರೋಬ್ಬರಿ 1.21 ಲಕ್ಷ ರೂಪಾಯಿ ಎಂದು ಹೇಳಲಾಗಿದೆ.

ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೆ.ನಾರಾಯಣಪುರದ ವಿಲ್ಲಾವೊಂದರಲ್ಲಿ ಕಳ್ಳ ತನ್ನ ಕರಾಮತ್ತು ಪ್ರದರ್ಶಿಸಿದ್ದ ಈ ಪ್ರಕರಣದ ಕಾರ್ಯಾಚರಣಗೆ ಇಳಿದಾಗ ಪೊಲೀಸರಿಗೆ ಈ ಐಷಾರಾಮಿ ಕಳ್ಳನ ಹಿನ್ನೆಲೆ ಗೊತ್ತಾಗಿದೆ. ವಿಲ್ಲಾಗಳಲ್ಲಿ ಕಳ್ಳತನ ಮಾಡುತ್ತಿದ್ದ ವಸ್ತುಗಳು ಹಾಗೂ ಹಣ, ಚಿನ್ನವನ್ನು ಎಲ್ಲಿ ಇರಿಸುತ್ತಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದಾರೆ.
ಕಳ್ಳ ವಿಲ್ಲಾಗೆ ಬಂದಿದ್ದು ಹೇಗೆ ?
ವಿಲ್ಲಾವೊಂದರಲ್ಲಿ ವಾಸವಿರುವವರು ರಾತ್ರಿ ಮಲಗು ಸಮಯದಲ್ಲಿ ಮುಂಬಾಗಿಲನ್ನು ಲಾಕ್ ಮಾಡಿದ್ದಾರೆ. ಆದರೆ, ಮನೆಯ ಮಹಡಿಯ ಮೇಲಿರುವ ಬಾಗಿಲ ಚಿಲಕವನ್ನು ಹಾಕದೆ ಮಲಗಿದ್ದಾರೆ. ಈ ಸಂದರ್ಭಕ್ಕಾಗಿಯೇ ಕಾದಿದ್ದ ಕಳ್ಳ ವಿಲ್ಲಾದ ಒಳಗೆ ನುಗ್ಗಿದ್ದಾನೆ. ಮನೆಯ ಡೈನಿಂಗ್ ಟೇಬಲ್‌ನ ಮೇಲೆಯೇ ಯಾವಾಗಲೂ ಹಿಡುವಂತೆ ವಾಚ್. ಪರ್ಸ್ ಹಾಗೂ ಮೊಬೈಲ್‌ಗಳನ್ನು ಅಲ್ಲೇ ಇರಿಸಿ ವಿಲ್ಲಾದ ಮಾಲೀಕರು ಮಲಗಿದ್ದಾರೆ. ಆದರೆ, ಬೆಳಿಗ್ಗೆ ಯಾವುದೂ ಡೈನಿಂಗ್ ಟೇಬಲ್‌ನ ಮೇಲೆ ಇರಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಇನ್ನು ವಿಲ್ಲಾದ ಮಾಲೀಕರು ಮಲಗುವಾಗ ಇರಿಸಿದ್ದ ಪರ್ಸ್‌ನಲ್ಲಿ 1,900 ಅಮೆರಿಕನ್ ಡಾಲರ್ ಸಹ ಇತ್ತು. ಇದನ್ನೂ ಸಹ ಕಳ್ಳ ಎಗರಿಸಿದ್ದ.
ಪೊಲೀಸ್ ಕಾರ್ಯಾಚರಣೆ ಹೇಗಿತ್ತು ?
ಈ ಪ್ರಕರಣದ ತನಿಖೆ ಪ್ರಾರಂಭಿಸಿದ ಪೊಲೀಸರು, ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಿ ಕ್ರಾಸ್ ಬಳಿ ತ್ರಿಪುರ ರಾಜ್ಯದ ಐಷಾರಾಮಿ ಕಳ್ಳನಿಗೆ ಬಲೆ ಬೀಸಿದ್ದಾರೆ. ವಿಲ್ಲಾದಲ್ಲಿ ಕಳ್ಳತನ ಮಾಡಿದ್ದ 1 ವಾಚ್, 1 ಮೊಬೈಲ್ ಫೋನ್ ಮತ್ತು 1,900 ಅಮೆರಿಕನ್ ಡಾಲರ್ ವಶಪಡಿಸಿಕೊಳ್ಳಲಾಗಿದೆ.
ಐಷಾರಾಮಿ ವಿಲ್ಲಾಗಳೇ ಇವನ ಟಾರ್ಗೆಟ್
ತ್ರಿಪುರ್‌ದ ಈ ಕಳ್ಳ ಐಷಾರಾಮಿ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದ. ಬೆಂಗಳೂರಿನಲ್ಲಿ ಐಷಾರಾಮಿ ವಿಲ್ಲಾ ಹಾಗೂ ಮನೆಗಳನ್ನೇ ಆತ ಟಾರ್ಗೆಟ್ ಆಗಿತ್ತು. ಬೆಂಗಳೂರು ನಗರದ ವಿವಿಧ ಕಡೆಗಳಲ್ಲಿರುವ ಐಷರಾಮಿ ವಿಲ್ಲಾಗಳಲ್ಲಿ ಚಿನ್ನಾಭರಣ, ಮೊಬೈಲ್ ಫೋನ್‌ಗಳನ್ನು ಕಳ್ಳತನ ಮಾಡಿರುವುದಾಗಿ ಪೊಲೀಸ್ ವಿಚಾರಣೆಯಲ್ಲಿ ಕಳ್ಳ ತಪ್ಪೊಪ್ಪಿಕೊಂಡಿದ್ದಾನೆ. ಹನುಮಂತನಗರದ ಬಿಳಿಶಿವಾಲಯ ಗ್ರಾಮದಲ್ಲಿರುವ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಕಳ್ಳ ಇರಿಸಿದ್ದ ಒಟ್ಟು 31 ವಾಚ್‌ಗಳು ಹಾಗೂ 4 ಮೊಬೈಲ್ ಫೋನ್‌ಗಳನ್ನು ವಶಪಡಿ ಸಿಕೊಳ್ಳಲಾಗಿದೆ.
ಅಲ್ಲದೇ ಈ ಕಳ್ಳನಿಂದ ಪೊಲೀಸರು ಹೆಣ್ಣೂರು ಬಾಗಲೂರು ಮುಖ್ಯರಸ್ತೆಯಲ್ಲಿರುವ ನಿರ್ಮಾಣದ ಹಂತದ ಕಟ್ಟಡವೊಂದರಲ್ಲಿ ಕಳ್ಳ ಇರಿಸಿದ್ದ 125 ಗ್ರಾಂ ಚಿನ್ನಾಭರಣಗಳು, ಒಂದು ವೈಟ್ ಗೋಲ್ಡ್ ವಾಚ್ ಮತ್ತು 2,000 ಅಮೆರಿಕನ್ ಡಾಲರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ರೀತಿ ವಿವಿಧ ಐಷಾರಾಮಿ ಕಟ್ಟಡಗಳಲ್ಲಿ ಕಳ್ಳತನ ಮಾಡಲಾಗಿದ್ದ 45 ಗ್ರಾಂ ಚಿನ್ನಾಭರಣವನ್ನು ಮಾರಾಟ ಮಾಡಿದ್ದಾನೆ. ಒಟ್ಟಾರೆ ಈ ಐಷಾರಮಿ ಆರೋಪಿಯಿಂದ ಒಟ್ಟು 170 ಗ್ರಾಂ ಚಿನ್ನಾಭರಣ, ವಿವಿಧ ಕಂಪನಿಯ ಬೆಲೆ ಬಾಳುವ 33 ವಾಚ್‌ಗಳು, 3,900 ಅಮೇರಿಕನ್ ಡಾಲರ್ ಹಾಗೂ 5 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ 21 ಲಕ್ಷಕ್ಕೂ ಹೆಚ್ಚು ಎಂದು ಅಂದಾಜಿಸಲಾಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications