Namma Metro: ಬೆಂಗಳೂರಲ್ಲಿ A.R ರೆಹಮಾನ್ ಸಂಗೀತ ರಸದೌತಣ; ಅ.3ರಂದು ಮೆಟ್ರೋ ಸಮಯ ವಿಸ್ತರಣೆ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗರು ಬೃಹತ್ ಸಂಗೀತ ಕಾರ್ಯಕ್ರಮ ವೀಕ್ಷಿಸಲು ಸಜ್ಜಾಗಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ಎ. ಆರ್.ರೆಹಮಾನ್ ಅವರ ಕಾರ್ಯಕ್ರಮದ ಅಂಗವಾಗಿ ಅಕ್ಟೋಬರ್ 3ರಂದು ಬೆಂಗಳೂರು ಮೆಟ್ರೋ ರೈಲು ಸೇವೆಯಲ್ಲಿ ಬದಲಾವಣೆ ಮಾಡಲಾಗಿದೆ. ಶನಿವಾರ ರಾತ್ರಿ ಮೆಟ್ರೋ ಸಂಚಾರ ಸಮಯ ವಿಸ್ತರಣೆ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ತಿಳಿಸಿದೆ.
ಈ ವರ್ಷದ 2026 ಅತ್ಯಂತ ದೊಡ್ಡ ಇವೆಂಟ್ ಬೆಂಗಳೂರಿನ ವೈಟ್‌ಫಿಲ್ಡ್‌ನಲ್ಲಿ ಜರುಗಲಿದೆ. ಈಗಾಗಲೇ ಬೃಹತ್ ವೇದಿಕೆ ಸಿದ್ದಗೊಂಡಿದೆ. ವಿವಿಧ ಭಾಷೆಯ ಅಭಿಮಾನಿಗಳನ್ನು ಹೊಂದಿರುವ ರೆಹಮಾನ್ ಅವರ ಲೈನ್ ಮ್ಯೂಸಿಕ್ ಕೇಳಲು ಬೆಂಗಳೂರಿನ ವಿವಿಧ ಮೂಲೆ ಮೂಲೆಗಳಿಂದ ಅಭಿಮಾನಿಗಳು ಆಗಮಿಸಲಿದ್ದಾರೆ. ಈ ಕಾರಣದಿಂದಾಗಿ ಅಕ್ಟೋಬರ್ 3ರಂದು ಕೊನೆ ಮೈಲಿ ಸಂಪರ್ಕದ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮತ್ತು ದಟ್ಟಣೆ ನಿವಾರಣೆಗಾಗಿ ತಡರಾತ್ರಿ ಮೆಟ್ರೋ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ತಿಳಿಸಿರುವ ಪ್ರಕಾರ, ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲು ಹೊರಡುವ ಸಮಯ ವಿಸ್ತರಣೆ ಆಗಿದ್ದು, ಅದರ ಪಟ್ಟಿ ಇಲ್ಲಿದೆ.
ವಿಸ್ತರಣೆಗೊಂಡ ಸಮಯ, ವೇಳಾಪಟ್ಟಿ
* ನೇರಳೆ ಮಾರ್ಗದ ಪ್ರಯಾಣಿಕರ ಗಮನಕ್ಕೆ
ವೈಟ್‌ಫೀಲ್ಡ್ (ಕಾಡುಗೋಡಿ) - ರಾತ್ರಿ 12:00ಗಂಟೆಗೆ ಕೊನೆ ರೈಲು ಹೊರಡಲಿದೆ.
ಚಲ್ಲಘಟ್ಟ - ರಾತ್ರಿ 12:20 ಗಂಟೆ
* ಹಸಿರು ಮಾರ್ಗ ರೈಲುಗಳ ಸಮಯ
ಮಾದಾವರ - ರಾತ್ರಿ 12:15
ಸಿಲ್ಕ್ ಇನ್‌ಸ್ಟಿಟ್ಯೂಟ್ - ರಾತ್ರಿ 12:20
* ಹಳದಿ ಮಾರ್ಗ
ಆರ್.ವಿ. ರಸ್ತೆ - ರಾತ್ರಿ 1:15
ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ - ರಾತ್ರಿ 11:55
ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ನಿಂದ ಕೊನೆಯ ಸಂಪರ್ಕ ರೈಲು ರಾತ್ರಿ 12:55ಕ್ಕೆ ಹೊರಡಲಿದೆ ಎಂದು ನಮ್ಮ ಮೆಟ್ರೋ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳು ತಿಳಿಸಿದ್ದಾರೆ.
ಟಿಕೆಟ್ ಕೌಂಟರ್‌ಗಳಲ್ಲಿ ಜನದಟ್ಟಣೆ ತಪ್ಪಿಸಲು ಪ್ರಯಾಣಿಕರು QR ಟಿಕೆಟ್, ಸ್ಮಾರ್ಟ್ ಕಾರ್ಡ್ ಅಥವಾ NCMC ಕಾರ್ಡ್‌ಗಳನ್ನು ಬಳಸುವಂತೆ ಮೆಟ್ರೋ ಅಧಿಕಾರಿಗಳು ವಿನಂತಿಸಿಕೊಂಡಿದ್ದರೆ. ಸುಗಮ ಪ್ರಯಾಣಿಕರ ಸಂಚಾರಕ್ಕಾಗಿ ಮೆಟ್ರೋ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯೊಂದಿಗೆ ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‌ಸಿಎಲ್ ಪ್ರಕಟಣೆ ಮೂಲಕ ವಿನಂತಿಸಿದೆ.
ಲೈವ್ ಸಂಗೀತ ಕಾರ್ಯಕ್ರಮ ಕುರಿತು
ಸಂಗೀತ ಕಾರ್ಯಕ್ರಮದ ಸ್ಥಳ: ಕೆಟಿಪಿಒ (KTPO) ಕನ್ವೆನ್ಷನ್ ಸೆಂಟರ್ (ಕೆಟಿಪಿಒ ಮೈದಾನ), ಇಪಿಐಪಿ (EPIP) ವಲಯ, ವೈಟ್‌ಫೀಲ್ಡ್, ಬೆಂಗಳೂರು
ಎ.ಆರ್. ರೆಹಮಾನ್ ಜೊತೆಗೆ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ವಿಜೇತ ಸಂಗೀತ ದಿಗ್ಗಜರು, ವಿಶ್ವದರ್ಜೆಯ ಲೈವ್ ಆರ್ಕೆಸ್ಟ್ರಾ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಅದ್ಭುತ ದೃಶ್ಯ ವೈಭವ ನೀವಿಲ್ಲಿ ಕಾಣಬಹುದಾಗಿದೆ. ಈ ತಂಡ ಎಂಟು ವರ್ಷಗಳ ನಂತರ ಬೆಂಗಳೂರಿಗೆ ಮರಳಿದ್ದು, ಅವರನ್ನು ಕಾಣಲು ಸಂಗೀತ ಪ್ರಿಯರು ಕಾತರರಾಗಿದ್ದಾರೆ.


Click it and Unblock the Notifications
