Metro Purple Line: ಬೆಂಗಳೂರು ಮೆಟ್ರೋ ಮೊದಲ ಲೈನ್ ವಿಸ್ತರಣೆಗೆ BMRCL ಒಪ್ಪಿಗೆ

ಬೆಂಗಳೂರು: ಐಟಿ ಕೇಂದ್ರ ಬೆಂಗಳೂರಿನಲ್ಲಿ ಹೊಸ ಮೆಟ್ರೋ ಮಾರ್ಗಗಳು, ಹಳೆಯ ಲೈನ್‌ ವಿಸ್ತರಣೆ ಆಗುತ್ತಿವೆ. ಈ ನಡುವೆ ನಮ್ಮ ಮೆಟ್ರೋ ಮೊದಲ ಲೈನ್ ನೇರಳೆ ಮಾರ್ಗದ ಕಿರು ವಿಸ್ತರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಒಪ್ಪಿಗೆ ನೀಡಿದೆ. ಎಲ್ಲಿಂದ ಎಲ್ಲಿಗೆ ವಿಸ್ತರಣೆ, ಹೊಸ ನಿಲ್ದಾಣಗಳು ಬರುತ್ತವೆಯೇ? ಅಂದಾಜು ವೆಚ್ಚ, ಟೆಂಡರ್ ಮಾಹಿತಿ ಇಲ್ಲಿದೆ.

ಪ್ರಸ್ತುತದಲ್ಲಿ ನಮ್ಮ ಮೆಟ್ರೋ ನೇರಳೆ ಮಾರ್ಗವು (Namma Metro Purple Line Expand) ಚಲಘಟ್ಟದಿಂದ ವೈಟ್‌ಫಿಲ್ಡ್‌ ವರೆಗೆ ಇದೆ. ಅದನ್ನು ವೈಟ್‌ಫಿಲ್ಡ್‌ನಿಂದ ಅಂದಾಜು 64 ಕೋಟಿ ರೂಪಾಯಿ ವೆಚ್ಚದಲ್ಲಿ ವಿಸ್ತರಣೆಗೆ ಬಿಡ್ ಸಲ್ಲಿಸಿದ ಕಂಪನಿಗೆ ಮೆಟ್ರೋ ನಿಗಮ ಅನುಮತಿ ನೀಡಿದೆ.

Namma Metro Purple Line

482 ಮೀಟರ್ ಉದ್ದ ವಿಸ್ತರಣೆ

ವೈಟ್‌ಫಿಲ್ಡ್‌ನಿಂದ ಆಚೆಗೆ ಮಿಲನ್ ರೋಡ್ ಬಿಲ್ಡ್‌ ಟೆಕ್ ಎಲ್‌ಎಲ್‌ಪಿವರೆಗೆ ಸುಮಾರು 482 ಮೀಟರ್ ಉದ್ದ ಮಾರ್ಗ ವಿಸ್ತರಣೆಗೆ ವರ್ಷಗಳ ಹಿಂದೆ ಟೆಂಡರ್ ಕರೆದಿತ್ತು. 2024ರಲ್ಲಿ ಟೆಂಡರ್‍‌ನಲ್ಲಿ ಕರೆಯಲಾಗಿತ್ತು. ಕಂಪನಿಯೊಂದಕ್ಕೆ ನೀಡಿದ್ದ ಅನುಮೋದನೆ ರದ್ದುಗೊಳಿಸಿತು.

2026ರ ಜೂನ್‌ನಲ್ಲಿ ಆಹ್ವಾನಿಸಿದ್ದ ಮರು ಟೆಂಡರ್ ನಲ್ಲಿ ಸುಮಾರು 7 ಕಂಪನಿಗಳು ಪಾಲ್ಗೊಂಡು ಬಿಡ್ ಸಲ್ಲಿಸಿದ್ದವು. ಕೆಲವು ತಾಂತ್ರಿಕ ಕಾರಣ ಸೇರಿ ವಿವಿಧ ಕಾರಣಗಳಿಗೆ ನಾಲ್ಕು ಕಂಪನಿಗಳನ್ನು ಬಿಎಂಆರ್ ಸಿಎಲ್ ತಿರಸ್ಕರಿಸಿತು. ಇನ್ನೆರಡು ಕಂಪನಿಗಳು ಸಲ್ಲಿಸಿದ್ದ ಕಾಮಗಾರಿಯ ಬಿಡ್ ಮೊತ್ತ ಅಂದಾಜು ವೆಚ್ಚಕ್ಕಿಂತ ಹೆಚ್ಚಾಗಿತ್ತು. ಹೀಗಾಗಿ ಅವೆಲ್ಲವು ಕೈ ಬಿಟ್ಟು ಇದೀಗ ಪಿಜೆಪಿ ಎಂಜನಿಯರ್ಸ್ ಕಂಪನಿಗೆ ಒಪ್ಪಿಗೆ ಸೂಚಿಸಿದೆ.

ಅಂದಾಜು ವೆಚ್ಚ ಏರಿಕೆ, 18 ತಿಂಗಳ ಗಡುವು

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಕಿರು ವಿಸ್ತರಣೆ ಮಾರ್ಗದ ಕಾಮಗಾರಿಗೆ 62.50ಕೋಟಿ ರೂಪಾಯಿ ಎಂದು ಅಂದಾಜಿಸಿತ್ತು. ಇದೀಗ ವೆಚ್ಚ ಶೇ.3.7ರಷ್ಟು ಅಧಿಕ ವೆಚ್ಚ ಅಂದರೆ 64.82 ಕೋಟಿ ರೂ. ಕಾಮಗಾರಿಗೆ ಅಂತಿಮವಾಗಿ ಒಪ್ಪಿಗೆ ನೀಡಿದೆ.

ವೈಟ್‌ಫಿಲ್ಡ್ ನಿಂದ ನೇರಳೆ ಮಾರ್ಗ ವಿಸ್ತರಣೆ ಕಾಮಗಾರಿಯು ಶೀಘ್ರವೇ ಆರಂಭವಾಗಲಿದೆ. ಮುಂದಿನ ಒಂದೂವರೆ ವರ್ಷದೊಳಗೆ (18 ತಿಂಗಳಲ್ಲಿ) ಪೂರ್ಣಗೊಳಿಸುವಂತೆ ತಿಳಿಸಿದೆ.

ಕಿರು ವಿಸ್ತರಣೆ ಏಕೆ? ರೈಲ್ವೆ ಅನುಮೋದನೆ ಬಾಕಿ

ಈ ವಿಸ್ತರಣೆ ಕಾಮಗಾರಿಯಲ್ಲಿ ಯಾವುದೇ ಮೆಟ್ರೋ ನಿಲ್ದಾಣ ನಿರ್ಮಾಣವಾಗುವುದಿಲ್ಲ. ಬದಲಾಗಿ ಮೆಟ್ರೋ ರೈಲುಗಳ ವೈಟ್‌ಫಿಲ್ಡ್ ತಲುಪಿ ಬಳಿಕ ಹಿಮ್ಮುಖ ಚಲನೆಗೆ ಅನುಕೂಲವಾಗುವಂತೆ (ಕ್ರಾಸ್ ಓವರ್) ಈ ಮಾರ್ಗ ವಿಸ್ತರಣೆಗೆ ನಿರ್ಧರಿಸಲಾಗಿದೆ. ಇನ್ನೂ ಉದ್ದೇಶಿತ ಮಾರ್ಗದಲ್ಲಿ ರೈಲುಗಳು ಸಂಚರಿಸುವ ಕಾರಣಕ್ಕೆ ಶೀಘ್ರವೇ ನೈಋತ್ಯ ರೈಲ್ವೆ ಅಧಿಕಾರಿಗಳಿಗೆ ಮೆಟ್ರೋ ಕಾಮಗಾರಿಗೆ ಅನುಮೋದನೆ ಪಡೆಯಲಾಗುವುದು ಎಂದು BMRCL ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+