2 ತಿಂಗಳಿನಲ್ಲಿ ಯಶವಂತಪುರ ಎಪಿಎಂಸಿ ಸ್ಥಳಾಂತರ
ಬೆಂಗಳೂರು, ಮಾರ್ಚ್ 18; ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಯನ್ನು ಎರಡು ತಿಂಗಳಿನಲ್ಲಿ ದಾಸನಪುರ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗುತ್ತದೆ. ಈ ಹಿಂದೆಯೇ ಈ ಕುರಿತು ಘೋಷಣೆ ಮಾಡಲಾಗಿತ್ತು.
ಗುರುವಾರ ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಎಸ್. ರವಿ ಪ್ರಶ್ನೆಗೆ ಉತ್ತರ ನೀಡಿದ ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, "ಯಶವಂತಪುರ ಎಪಿಎಂಸಿ ಮಾರುಕಟ್ಟೆಯನ್ನು ನಗರದ ಹೊರವಲಯದ ದಾಸನಪುರ ಮಾರುಕಟ್ಟೆಗೆ ಎರಡು ತಿಂಗಳಿನಲ್ಲಿ ಸ್ಥಳಾಂತರ ಮಾಡಲಾಗುತ್ತದೆ" ಎಂದರು.
"ಎಪಿಎಂಸಿ ಮಾರುಕಟ್ಟೆ ಸ್ಥಳಾಂತರ ವಿಳಂಬವಾಗುತ್ತಿದೆ. ಇದರ ಹಿಂದೆ ಷಡ್ಯಂತ್ರ ಅಡಗಿದೆ. ದಾಸನಪುರಕ್ಕೆ ಸ್ಥಳಾಂತರಗೊಳ್ಳಲು ಇಷ್ಟವಿಲ್ಲದ ವ್ಯಾಪಾರಿಗಳು ವಿಳಂಬ ಮಾಡುತ್ತಿದ್ದಾರೆ. ಆದರೆ ಎರಡು ತಿಂಗಳಿನಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ" ಎಂದು ಸಚಿವರು ಹೇಳಿದರು.

ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಆಗಮಿಸುವ ಸಾವಿರಾರು ಲಾರಿಗಳಿಂದ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಆದ್ದರಿಂದ ಈ ಹಿಂದೆಯೇ ಮಾರುಕಟ್ಟೆಯನ್ನು ದಾಸನಪುರಕ್ಕೆ ಸ್ಥಳಾಂತರ ಮಾಡಲು ತೀರ್ಮಾನ ಕೈಗೊಳ್ಳಲಾಗಿತ್ತು.
ಅಲ್ಲದೇ ಕೋವಿಡ್ ಪರಿಸ್ಥಿತಿ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಾಪಾಡುವುದು, ಜನದಟ್ಟಣೆ ಕಡಿಮೆ ಮಾಡಲು ಯಶವಂತಪುರ ಮಾರುಕಟ್ಟೆಯಿಂದ ತರಕಾರಿ, ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ಸಗಟು ವ್ಯಾಪಾರವನ್ನು ನೆಲಮಂಗಲ ಸಮೀಪದ ದಾಸನಪುರ ಮಾರುಕಟ್ಟೆಗೆ ಸ್ಥಳಾಂತರ ಮಾಡಲಾಗಿತ್ತು.
ದಾಸನಪುರ ಮಾರುಕಟ್ಟೆ ಸುಮಾರು 64 ಎಕರೆ ಪ್ರದೇಶದಲ್ಲಿದೆ. ಯಶವಂತಪುರ ಎಪಿಎಂಸಿ ಮಾರುಕಟ್ಟೆ ಅಲ್ಲಿಗೆ ಸ್ಥಳಾಂತರವಾಗುವುದರಿಂದ ನಗರಕ್ಕೆ ಆಗಮಿಸುವ ಲಾರಿಗಳ ಸಂಚಾರ ಕಡಿಮೆಯಾಗಲಿದೆ. ಇದರಿಂದಾಗಿ ಯಶವಂತಪುರ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.
2006ರಲ್ಲಿ ಭೂ ಸ್ವಾಧೀನ; ಬೆಂಗಳೂರು ನಗರದ ಬೆಳವಣಿಗೆಯನ್ನು ಗಮನಿಸಿದ ಸರ್ಕಾರ 2006ರಲ್ಲಿ ದಾಸನಪುರ ಬಳಿ 64 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು. ವಿಶಾಲವಾದ ಮಾರುಕಟ್ಟೆಯನ್ನು ನಿರ್ಮಾಣ ಮಾಡಿತು. ವ್ಯಾಪಾರಿಗಳಿಗೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಯಿತು.
ಕಾಮಗಾರಿ ಪೂರ್ಣಗೊಂಡು ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾದರೂ ಯಶವಂತಪುರದಿಂದ ಎಪಿಎಂಸಿ ಸ್ಥಳಾಂತರ ಕೇವಲ ಘೋಷಣೆಯಾಗಿಯೇ ಉಳಿಯಿತು. ಆದರೆ ಕೋವಿಡ್ ಸಂದರ್ಭದಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಆಲೂಗಡ್ಡೆ ವರ್ತಕರನ್ನು ಸಂಪೂರ್ಣವಾಗಿ ಯಶವಂತಪುರದಿಂದ ದಾಸನಪುರಕ್ಕೆ ಸ್ಥಳಾಂತರ ಮಾಡಲಾಯಿತು.
ಯಶವಂತಪುರದಲ್ಲಿ ಸ್ವಂತ ಮತ್ತು ಬಾಡಿಗೆ ಮಳಿಗೆ ಹೊಂದಿರುವ ವರ್ತಕರು ದಾಸನಪುರಕ್ಕೆ ಸ್ಥಳಾಂತರವಾಗಲು ಒಪ್ಪುತ್ತಿಲ್ಲ. ಕೆಲವು ವರ್ತಕರು ದಾಸನಪುರದಲ್ಲಿ ಈಗ ವಹಿವಾಟು ನಡೆಸುತ್ತಿದ್ದಾರೆ. ಯಶವಂತಪುರದಲ್ಲಿ ಸ್ವಂತ ಮಳಿಗೆ ಇಲ್ಲದ ವರ್ತಕರು ದಾಸನಪುರದಲ್ಲಿ ವಹಿವಾಟು ಮಾಡುತ್ತಿದ್ದಾರೆ. ಆದರೆ ಸಂಪೂರ್ಣ ಎಪಿಎಂಸಿ ಯಾವಾಗ ಸ್ಥಳಾಂತರವಾಗಲಿದೆ? ಎಂಬುದು ಜನರ ಪ್ರಶ್ನೆಯಾಗಿತ್ತು.
ಕೋವಿಡ್ ಪರಿಸ್ಥಿತಿ ಬಳಿಕ ಯಶವಂತಪುರ, ದಾಸನಪುರ ಎರಡೂ ಕಡೆ ವ್ಯಾಪಾರ ವಹಿವಾಟು ನಡೆಸಲು ಒಪ್ಪಿಗೆ ನೀಡಲಾಗಿತ್ತು. ಇದಕ್ಕೆ ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಸಾಲ ಮಾಡಿ ಮಳಿಗೆ ತೆರೆದಿದ್ದೇವೆ. ಹೀಗೆ ಎರಡು ಕಡೆ ಮಳಿಗೆ ನಡೆಸಲು ಸಾಧ್ಯವಿದೆಯೇ? ಎಂದು ಪಶ್ನೆ ಮಾಡಿದ್ದರು.
ಅಲ್ಲದೇ ಎರಡು ಕಡೆ ವ್ಯಾಪಾರ ವಹಿವಾಟು ನಡೆಯುತ್ತಿದ್ದರೆ ರೈತರು ಸಹ ಗೊಂದಲಕ್ಕೆ ಒಳಗಾಗಿದ್ದಾರೆ. ಎಲ್ಲಿ ಬೆಳೆಗೆ ಉತ್ತಮ ಬೆಲೆ ಸಿಗುತ್ತದೆ?. ಉತ್ಪನ್ನವನ್ನು ಎಲ್ಲಿಗೆ ತೆಗೆದುಕೊಂಡು ಹೋಗಬೇಕು? ಎಂಬುದು ಅವರ ಗೊಂದಲಕ್ಕೆ ಕಾರಣವಾಗಿದೆ.
ದಾಸನಪುರದ ಮಾರುಕಟ್ಟೆಯಲ್ಲಿ ಎ ಮ್ತು ಬಿ ಬ್ಲಾಕ್ ಸೇರಿ 252 ಮಳಿಗೆಗಳಿವೆ. ಬೆಂಗಳೂರು-ತುಮಕೂರು ರಸ್ತೆಯಿಂದ ಮಾರುಕಟ್ಟೆಗೆ 4 ಕಿ. ಮೀ. ದೂರವಿದೆ. ಆದರೆ ಯಶವಂತಪುರದಲ್ಲಿರುವ ಸ್ವಂತ ಮಳಿಗೆಗಳನ್ನು ಬಿಟ್ಟು ದಾಸನಪುರಕ್ಕೆ ಸ್ಥಳಾಂತರಗೊಳ್ಳಲು ವ್ಯಾಪಾರಿಗಳು ಒಪ್ಪುತ್ತಿಲ್ಲ.
ಸರ್ಕಾರ ವ್ಯಾಪಾರಿಗಳಿಗೆ ದಾಸನಪುರಕ್ಕೆ ಸ್ಥಳಾಂತರಗೊಳ್ಳಲು ಕೆಲವು ಷರತ್ತುಗಳನ್ನು ಹಾಕಿತ್ತು. ಆದರೆ ವ್ಯಾಪಾರಿಗಳು ಸ್ಥಳಾಂತರಕ್ಕೆ ಹಿಂದೇಟು ಹಾಕುವುದುದ ನೋಡಿ ಷರತ್ತುಗಳನ್ನು ಸಡಿಲಿಸಲಾಯಿತು. ಆದರೂ ಎಲ್ಲಾ ವ್ಯಾಪಾರಿಗಳು ಇನ್ನೂ ಸ್ಥಳಾಂತರಗೊಂಡಿಲ್ಲ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications