ಬೆಂಗಳೂರಿನ ಈ ಭಾಗದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅಪಾರ್ಟ್‌ಮೆಂಟ್ & ಜಾಗ ಇಲ್ಲಿದೆ ಮಾಹಿತಿ!
ಬೆಂಗಳೂರಿನಲ್ಲಿ ಆಸ್ತಿ ಖರೀದಿ ಮಾಡಬೇಕು ಎನ್ನುವವರಿಗೆ ಇಲ್ಲೊಂದು ಭರ್ಜರಿ ನ್ಯೂಸ್ ಇದೆ. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಷೇರುಮಾರುಕಟ್ಟೆಯಂತೆ ಪುಟಿದೇಳುತ್ತಿದೆ. ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗುತ್ತಿದೆ. ಇದರ ನಡುವೆ ಕಡಿಮೆ ಬೆಲೆಗೆ ಭೂಮಿ ಸಿಗುವ ಬಗ್ಗೆಯೂ ಹೆಚ್ಚು ಚರ್ಚೆ ನಡೆದಿದೆ. 50 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಗೆ ಮನೆ ಖರೀದಿ ಮಾಡುವ ಆಫರ್ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಬೆಂಗಳೂರಿನ ಯಾವ ಭಾಗದಲ್ಲಿ ಕಡಿಮೆ ಬೆಲೆಗೆ ಭೂಮಿ ಹಾಗೂ ಮನೆಗಳು ಮಾರಾಟವಾಗುತ್ತಿವೆ ಎನ್ನುವ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಬೆಂಗಳೂರಿನಲ್ಲಿ ಭೂಮಿಗೆ ಮೊದಲಿನಿಂದಲೂ ಒಳ್ಳೆಯ ಬೆಲೆ ಇದೆ. ಆದರೆ, ಕೆಲವೊಂದು ಕಾರಣಕ್ಕೆ ಬೆಂಗಳೂರಿನಲ್ಲಿ ಭೂಮಿಯ ಬೆಲೆ ನಿರಂತರವಾಗಿ ಏರಿಕೆ ಆಗುತ್ತಲ್ಲೇ ಇದೆ. ನಗರದ ಪ್ರಮುಖ ಭಾಗಗಳಲ್ಲಿ ಆಸ್ತಿ ಬೆಲೆ ಗಗನಕ್ಕೆ ಏರಿಕೆಯಾಗುತ್ತಿದೆ. ಇದರ ನಡುವೆ ಬೆಂಗಳೂರಿನ ಯಾವ ಭಾಗದಲ್ಲಿ ಕಡಿಮೆ ಬೆಲೆಗೆ ಭೂಮಿ ಹಾಗೂ ಮನೆಗಳ ಮಾರಾಟವಾಗುತ್ತಿದೆ ಎಂದು ಜನ ಹುಡುಕುವುದಕ್ಕೆ ಪ್ರಾರಂಭಿಸಿದ್ದಾರೆ. ಇದೀಗ ನಗರದ ಹೊರ ವಲಯದಲ್ಲಿ ಭೂಮಿ ಮಾರಾಟ ಜೋರಾಗಿದ್ದು, ಕಡಿಮೆ ಬೆಲೆಗೆ ಬೆಂಗಳೂರಿನಲ್ಲಿ ಮನೆಯೊಂದನ್ನು ಮಾಡಿಕೊಳ್ಳಬೇಕು ಎನ್ನುವವರ ಕನಸು ಈಡೇರುವ ಲಕ್ಷಣಗಳು ಕಾಣಿಸುತ್ತಿವೆ. ಅದೇನು ಎನ್ನುವ ಗುಡ್‌ನ್ಯೂಸ್ ಇಲ್ಲಿದೆ.

ಬೆಂಗಳೂರಿನ ಹೊರ ವಲಯದಲ್ಲಿ ಕೈಗೆಟುಕುವ ಬೆಲೆಯಲ್ಲಿ ಅಪಾರ್ಟ್ಮೆಂಟ್‌ಗಳು ಇವೆ. ವಿಶೇಷವಾಗಿ ಸಣ್ಣ ಕುಟುಂಬಗಳು ಹಾಗೂ ಕಡಿಮೆ ಬೆಲೆಗೆ ಮನೆಗಳ ಸೇಲ್ ಸಹ ಜೋರಾಗಿದೆ. ಬೆಂಗಳೂರು ಪೂರ್ವ ವಲಯದ ಐಟಿ ಕಾರಿಡಾರ್ ವೈಟ್‌ಫೀಲ್ಡ್ ಹೊರವಲಯ, ದಕ್ಷಿಣ ಕನಕಪುರ ರಸ್ತೆ ಹಾಗೂ ಉತ್ತರ ಪ್ರದೇಶಗಳಲ್ಲಿನ ದೇವನಹಳ್ಳಿ ಭಾಗದಲ್ಲಿ ರಿಯಲ್ ಎಸ್ಟೇಟ್‌ಗೆ ಪೂರಕವಾದ ವಾತಾವರಣವಿದೆ. ಬೆಂಗಳೂರಿನ ಈ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಆಗಿದೆ. 50 ಲಕ್ಷಕ್ಕಿಂತ ಕಡಿಮೆ ಬಜೆಟ್ ಇರುವ ಮನೆ ಅಥವಾ ಅಪಾರ್ಟ್ಮೆಂಟ್‌ಗಾಗಿ ಜನ ಹುಡುಕುವುದಕ್ಕೆ ಶುರು ಮಾಡಿಕೊಂಡಿದ್ದಾರೆ.
50 ಲಕ್ಷಕ್ಕಿಂತ ಕಡಿಮೆ ಬೆಲೆಯ ಅಪಾರ್ಟ್‌ಮೆಂಟ್ ಬೆಂಗಳೂರಿನಲ್ಲಿ ಎಲ್ಲಿ ಸಿಗಲಿದೆ ?
ಬೆಂಗಳೂರಿನಲ್ಲಿ 50 ಲಕ್ಷಕ್ಕಿಂತ ಕಡಿಮೆ ಬೆಲೆಯ ಅಪಾರ್ಟ್‌ಮೆಂಟ್ ಎಲ್ಲಿ ಸಿಗಲಿದೆ ಎನ್ನುವುದನ್ನು ಜನ ಹುಡುಕುವುದಕ್ಕೆ ಶುರು ಮಾಡಿಕೊಂಡಿದ್ದಾರೆ. ವೈಟ್‌ಫೀಲ್ಡ್ ಹಾಗೂ ಉತ್ತರ ಬೆಂಗಳೂರಿನ ಪೂರ್ವ ಐಟಿ ಕಾರಿಡಾರ್‌ನಲ್ಲಿ ಅಪಾರ್ಟ್‌ಮೆಂಟ್ ರಿಯಲ್ ಎಸ್ಟೇಟ್ ಜೋರಾಗಿದೆ. ಕೆಲವು ಅಪಾರ್ಟ್‌ಮೆಂಟ್‌ಗಳು 50 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ 50 ಲಕ್ಷ ರೂಪಾಯಿಗಿಂತ ಕಡಿಮೆ ಬೆಲೆಯು ಅಪಾರ್ಟ್‌ಮೆಂಟ್‌ಗಳು ಹೊರ ವಲಯದ ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿಯ ಫಸ್ಟ್ 1 & ಸೆಕೆಂಡ್ ಸ್ಟೇಜ್ 2, ಜೆಪಿ ನಗರ 7 ನೇ ಹಂತ ಮತ್ತು ಪುಟ್ಟೇನಹಳ್ಳಿಯಂತಹ ಭಾಗದಲ್ಲಿ ಬಜೆಟ್ ಸ್ನೇಹಿ ಅಪಾರ್ಟ್‌ಮೆಂಟ್‌ಗಳು ಸಿಗುತ್ತಿವೆ.
ಇನ್ನು ಸರ್ಜಾಪುರ ಮತ್ತು ವೈಟ್‌ಫೀಲ್ಡ್ ಹೊರವಲಯಗಳು ಕಡಿಮೆ ಬೆಲೆಗೆ ಆಸ್ತಿಗಳು ಸಿಗುತ್ತಿವೆ. ಎಲೆಕ್ಟ್ರಾನಿಕ್ ಸಿಟಿಯ ಚಂದಾಪುರ ಭಾಗದಲ್ಲೂ ರಿಯಲ್ ಎಸ್ಟೇಟ್ ಬೂಮ್ ಆಗಿದೆ.
ಭೂಮಿ ಮೇಲೆ ಹೂಡಿಕೆ ಹೆಚ್ಚಳ: ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜನ ಭೂಮಿಯ ಮೇಲೆ ಹೂಡಿಕೆ ಮಾಡುವ ಪ್ರಮಾಣ ಹೆಚ್ಚಳವಾಗಿದೆ. ಜನ ಹೆಚ್ಚಾಗಿ ಭೂಮಿಯ ಮೇಲೆ ಹೂಡಿಕೆ ಮಾಡುವುದು ಹಾಗೂ ಜಾಗ ಖರೀದಿ ಮಾಡುವುದನ್ನು ಮುಂದುವರಿಸಿದ್ದಾರೆ.












Click it and Unblock the Notifications