ಬಿಎಂಟಿಸಿಯಲ್ಲಿ ಇಟಿಎಸ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರ

ಬೆಂಗಳೂರು, ಏ.9: ಟ್ರೈಮ್ಯಾಕ್ಸ್ ಇನ್‌ಫ್ರಾಸ್ಟ್ರಕ್ಚರ್ ಅಂಡ್ ಸರ್ವೀಸ್ ಕಂಪನಿ ಆರ್ಥಿಕ ದಿವಾಳಿಯಾಗಿರುವುದರಿಂದ ಬಿಎಂಟಿಸಿ ಮೇಲೆ ಪರಿಣಾಮ ಬೀರಿದ್ದು, ಕೆಲ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಇಟಿಎಂ ಟಿಕೆಟ್ ಬದಲು ಹಿಂದಿನ ಕಾಗದದ ಟಿಕೆಟ್ ನೀಡಲಾಗುತ್ತಿದೆ.

ಇದೀಗ ಇಟಿಎಂ ಟಿಕೆಟ್ ಬದಲು ಆಂಡ್ರಾಯ್ಡ್ ಟಿಕೆಟ್ ಯಂತ್ರವನ್ನು ಬಳಸುವ ಕುರಿತು ಬಿಎಂಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈಗಾಗಲೇ 1800 ಆಂಡ್ರಾಯ್ಡ್ ಟಿಕೆಟ್ ಯಂತ್ರವಿದೆ.ಆದರೆ ಹವಾನಿಯಂತ್ರಿತ ಬಸ್‌ಗಳಲ್ಲಿ ಮಾತ್ರ ಬಳಕೆ ಮಾಡಲಾಗುತ್ತಿದೆ.

ಈ ವರ್ಷವೇ ಉಳಿದ ಬಿಎಂಟಿಸಿ ಬಸ್‌ಗಳಲ್ಲೂ ಅಳವಡಿಸಲಾಗುತ್ತದೆ. ಖಾಸಗಿ ಕಂಪನಿಯೊಂದು 10 ಸಾವಿರ ಟಿಕೆಟ್ ನೀಡುವ ಯಂತ್ರಗಳನ್ನು ಬಿಎಂಟಿಸಿಗೆ ನೀಡಿದೆ. ಆದರೆ ಅದರಲ್ಲೂ ಕೆಲವು ತೊಡಕುಗಳಿರುವ ಕಾರಣ ಅದೆಲ್ಲವೂ ಬಗೆ ಹರಿದ ಬಳಿಕ ಬಿಎಂಟಿಸಿಯ ಎಲ್ಲಾ ಬಸ್‌ಗಳಿಗೂ ಅಳವಡಿಸಲಾಗುತ್ತದೆ.

Android ticketing machines for buses

ಇಟಿಎಸ್ ನಿರ್ವಹಣೆ ಗುತ್ತಿಗೆ ಪಡೆದಿದ್ದ ಕಂಪನಿ ವೆಂಪೋನ್ ಎಂಬ ಕಂಪನಿಗೆ ಇಟಿಎಂ ಮಿಷನ್ ನಿರ್ವಹಣೆಯ ಉಪಗುತ್ತಿಗೆ ನೀಡಿತ್ತು, ಈಗಾಗಲೇ ಆ ಕಂಪನಿಯೊಂದಿಗೆ ಸಂಪರ್ಕ ಸಾಧಿಸಿದ್ದು, ಸೇವೆ ಮುಂದುವರೆಯುವಂತೆ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+