ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಮನರಂಜನಾ ತಾಣ: ವಿಶೇಷತೆಯೇನು?

|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಶೀಘ್ರ ಮನರಂಜನಾ ತಾಣವೊಂದು ನಿರ್ಮಾವಾಗಲಿದೆ.

ಸ್ಪೇಸ್ 1 ಎಕ್ಸ್‌ಪೀರಿಯನ್ಸ್ ಮತ್ತು ಎಂಬಸ್ಸಿ ಗ್ರೂಪ್ ಜಂಟಿಯಾಗಿ ಮುಂದಿನ 20 ತಿಂಗಳಲ್ಲಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವ್ಯಾಪ್ತಿಯಲ್ಲಿ ವಿಶ್ವದರ್ಜೆಯ ಸಂಗೀತಾನುಭವ ಮತ್ತು ಮನರಂಜನಾ ತಾಣವನ್ನು ನಿರ್ಮಿಸುವುದಾಗಿ ತಿಳಿಸಿದೆ.

 ಮನರಂಜನಾ ತಾಣ ನಿರ್ಮಾಣಕ್ಕೆ 6.3 ಎಕರೆ ಜಾಗ ಗುತ್ತಿಗೆ

ಮನರಂಜನಾ ತಾಣ ನಿರ್ಮಾಣಕ್ಕೆ 6.3 ಎಕರೆ ಜಾಗ ಗುತ್ತಿಗೆ

ಬಿಐಎಎಲ್‌ನ 6.3 ಎಕರೆ ಜಾಗವನ್ನು ದೀರ್ಘಾವಧಿ ಗುತ್ತಿಗೆಗೆ ಪಡೆಯಲಾಗಿದ್ದು, ಈ ಜಾಗದಲ್ಲಿ ಮುಂದಿನ 18-20 ತಿಂಗಳಲ್ಲಿ ಸುಮಾರು 100 ಕೋಟಿ ವೆಚ್ಚದಲ್ಲಿ ಜಾಗತಿಕ ಮನರಂಜನಾ ತಾಣ ನಿರ್ಮಾಣ ಮಾಡಲಾಗುವುದು ಎಂದು ಸ್ಪೇಸ್ 1 ವ್ಯವಸ್ಥಾಒಕ ನಿರ್ದೇಶಕ ಓಂ ಪ್ರದತ್ತ್ ತಿಳಿಸಿದ್ದಾರೆ.

ವಾಯುಪಡೆ ವಿಮಾನಗಳ ಮೇಲೆ ಏರ್‌ಪೋರ್ಟ್‌ ರಾಡಾರ್ ಕಣ್ಗಾವಲುವಾಯುಪಡೆ ವಿಮಾನಗಳ ಮೇಲೆ ಏರ್‌ಪೋರ್ಟ್‌ ರಾಡಾರ್ ಕಣ್ಗಾವಲು

 ಮನರಂಜನಾ ತಾಣದಲ್ಲಿ ಏನಿರಲಿದೆ?

ಮನರಂಜನಾ ತಾಣದಲ್ಲಿ ಏನಿರಲಿದೆ?

ಆರೂವರೆ ಎಕರೆ ಜಾಗದಲ್ಲಿ ಬಿಸಿನೆಸ್ ಪಾರ್ಕ್, ಹೋಟೆಲ್, ಕ್ರೀಡಾಂಗಣ, ಸಿನೆಮಾ ಥಿಯೇಟರ್, ರಂಗಭೂಮಿ ವೇದಿಕೆ, ಸಂಗೀತ ಸಭಾಂಗಣ, ವೇರ್‌ಹೌಸ್ ಇರಲಿದೆ. 9 ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಒಂದು ಬೃಹತ್ ಸಭಾಂಗಣ, ತಲಾ ಎರಡು ಸಾವಿರ ಸಾಮರ್ಥ್ಯದ ಎರಡು ಸಭಾಂಗಣ ಇರಲಿದೆ.

 ಸಂಗೀತ ಮತ್ತು ಮನರಂಜನೆ ಹಬ್ಬಗಳ ಸಂಯೋಜನೆ

ಸಂಗೀತ ಮತ್ತು ಮನರಂಜನೆ ಹಬ್ಬಗಳ ಸಂಯೋಜನೆ

ವ್ಯವಸ್ಥಿತವಾಗಿ ಈ ಯೋಜನೆ ನಿರ್ಮಾಣಕ್ಕೆ ವಿಶ್ವದ ಲೈವ್ ಮನರಂಜನಾ ಕಂಪನಿಯಾದ ಲೈವ್ ನೇಷನ್ ಒಕ್ಕೂಟದ ಸಲಹೆಗಾರನಾಗಿ ಕಾರ್ಯ ನಿರ್ವಹಿಸಲಿದೆ. ಸಂಗೀತ ಉದ್ಯಮಿ ನಿಖಿಲ್ ಚಿನ್ನಪ್ಪ ಅವರು ಸಂಗೀತ ಮತ್ತು ಮನರಂಜನೆ ಹಬ್ಬಗಳ ಸಂಯೋಜನೆ ಮತ್ತು ಸಂವಹನ ನಿರ್ವಹಿಸಲಿದ್ದಾರೆ.

 ಆರೂವರೆ ಎಕರೆಯಲ್ಲಿ ಬಿಸಿನೆಸ್ ಪಾರ್ಕ್

ಆರೂವರೆ ಎಕರೆಯಲ್ಲಿ ಬಿಸಿನೆಸ್ ಪಾರ್ಕ್

ಆರೂವರೆ ಎಕರೆಯಲ್ಲಿ ಬಿಸಿನೆಸ್ ಪಾರ್ಕ್, ಹೋಟೆಲ್, ಕ್ರೀಡಾಂಗಣ, ಸಿನೆಮಾ ಥಿಯೇಟರ್, ಕ್ರೀಡಾಂಗಣ, ಹೋಟೆಲ್, ಸಂಗೀತ ಸಭಾಂಗಣ, ವೇರ್‌ಹೌಸ್, 9ಸಾವಿರ ಪ್ರೇಕ್ಷಕರ ಸಾಮರ್ಥ್ಯದ ಎರಡು ಸಾವಿರ ಜನರ ಸಾಮರ್ಥ್ಯದ ಎರಡು ಸಭಾಂಗಣಗಳು ಸೇರಿದಂತೆ ಪರಿಪೂರ್ಣ ಮೂಲಸೌಕರ್ಯಗಳನ್ನು ಒಳಗೊಂಡಿರುತ್ತದೆ.

English summary
Kempegowda International Airport Will soon be a tourist destination.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X