ನಿರ್ಜನ ಪ್ರದೇಶದ ಮರವೊಂದರಲ್ಲಿ ನೇತಾಡುತ್ತಿತ್ತು ಅಮೆರಿಕ ಪ್ರಜೆಯ ಶವ
ಬೆಂಗಳೂರು, ಫೆಬ್ರವರಿ 23: ಅಮೆರಿಕ ಪ್ರಜೆಯೊಬ್ಬ ಬೆಂಗಳೂರಿನ ಇಂದಿರಾನಗರದಲ್ಲಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಪಾಂಡವಪುರದಲ್ಲಿ ಕಚೇರಿಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಈಗ ಸ್ಕಾಟ್ಟೌಲ್ ಬೀ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಫೆ.11ರಂದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ವಿಡಿಯೋದಿಂದ ತಿಳಿದುಬಂದಿದೆ. ಆವಲಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ಆತ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿ ಸ್ಕಾಟ್ ಟೌನ್ ಬೀ(45) ಮೃತರು. ಸಾಯುವ ಮೊದಲು ತಮ್ಮ ಹೆಲ್ಮೆಟ್ ಕ್ಯಾಮರಾದಲ್ಲಿ ವಿಡಿಯೋ ಒಂದನ್ನು ಮಾಡಿದ್ದಾರೆ. ತಮಗೆ ಬದುಕಲು ಇಷ್ಟವಿಲ್ಲ, ಸಾವು ಬೇಗ ಬರಲಿ ಎಂದು ಹೇಳಿದ್ದಾರೆ. ಬೆಂಗಳೂರು ಹೊರವಲಯದ ಆವಲಹಳ್ಳಿ ಕೆರೆಯ ನಿರ್ಜನ ಪ್ರದೇಶದಲ್ಲಿ ಮರಕ್ಕೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ.