ಬೆಂಗಳೂರು ಟ್ರಾಫಿಕ್ ಇಳಿಕೆಗೆ 190 ಕಿಮೀ ಉದ್ದದ ಸುರಂಗ ಯೋಜನೆ: ಡಿಕೆಶಿ
ಬೆಂಗಳೂರು, ಅಕ್ಟೋಬರ್ 06: ಕರ್ನಾಟಕ ರಾಜ್ಯ ಸರ್ಕಾರ ಡಿಸೆಂಬರ್ 15 ರೊಳಗೆ ಉದ್ದೇಶಿತ ಸುರಂಗ ರಸ್ತೆ ಮಾರ್ಗಗಳಿಗೆ ಟೆಂಡರ್‌ಗಳನ್ನು ಕರೆಯಲು ಫ್ಲೋಟ್ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಹೇಳಿದ್ದಾರೆ. ಈ ರಸ್ತೆಗಳಲ್ಲಿ 190 ಕಿಲೋಮೀಟರ್ ಉದ್ದದ ಸುರಂಗವನ್ನು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ತಗ್ಗಿಸಲು ಆದ್ಯತೆಯ ಮೇಲೆ ತೆಗೆದುಕೊಳ್ಳಲಾಗುವುದು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಯೋಜನೆಯು ಅಂತಾರಾಷ್ಟ್ರೀಯ ಬಿಡ್ಡಿಂಗ್‌ಗೆ ತೆರೆದಾಗಿನಿಂದ ಎಂಟು ಕಂಪನಿಗಳು ಪ್ರಸ್ತಾವನೆಗೆ ಅರ್ಹತೆ ಪಡೆದಿವೆ. ಯೋಜನೆಗಾಗಿ ಕೇಲವ ಎರಡು ಕಂಪನಿಗಳು ಮುಂದೆ ಬಂದಿವೆ ಎಂದರು.

ಬೆಂಗಳೂರಿನ ರಸ್ತೆಗಳು ನಾಲ್ಕು ಲೇನ್ ಅಥವಾ ಆರು ಲೇನ್ ಮಾಡಬೇಕೆ ಎಂಬುದು ಇನ್ನೂ ಅಂತಿಮ ವಾಗಿಲ್ಲ. ಆ ಚರ್ಚೆ ಇನ್ನೂ ನಡೆಯುತ್ತಿದೆ. ಈ ಹಿಂದೆ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಹೊಂದಿರುವ ಕಾಂಗ್ರೆಸ್ ನಾಯಕರು ಈ ಸುರಂಗ, ರಸ್ತೆ ಅಭಿವೃದ್ಧಿ ಯೋಜನೆಗಾಗಿ ಒಟ್ಟು ಸುಮಾರು 50,000 ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜಿಸಿದ್ದರು.
ಯೋಜನೆ ಕುರಿತು ಶಿಫಾರಸು
ಇಷ್ಟೊಂದು ಪ್ರಮಾಣದಲ್ಲಿ ಅನುದಾ ಬಳಸಬೇಕು ಎಂಬ ನಿಲುವು ತಾಳಿದ್ದರಿಂದಲೇ ಬೆಂಗಳೂರಿನಾದ್ಯಂತ ಸುರಂಗ ರಸ್ತೆಯನ್ನು ನಿರ್ಮಿಸಬೇಕೇ ಅಥವಾ ಆರು ಲೈನ್ ರಸ್ತೆ ನಿರ್ಮಿಸಬೇಕೆ, ಪ್ರವೇಶ-ನಿರ್ಗಮನ ಸ್ಥಳಗಳ ಸ್ಥಳ, ಲೇನ್‌ಗಳ ಸಂಖ್ಯೆ ಹೆಚ್ಚಿಸುವ ಕುರಿತು ಶಿಫಾರಸು ಮಾಡಲಾಗಿದೆ.

ಬೆಂಗಳೂರಿನ ಬಳ್ಳಾರಿ ರಸ್ತೆ, ಹಳೇ ಮದ್ರಾಸ್ ರಸ್ತೆ, ಎಸ್ಟೀಮ್ ಮಾಲ್ ಜಂಕ್ಷನ್‌ನಿಂದ ಮೇಖ್ರಿ ವೃತ್ತ, ಮಿಲ್ಲರ್ ರಸ್ತೆ, ಚಾಲುಕ್ಯ ವೃತ್ತ, ಹೊಸೂರು ರಸ್ತೆ, ಟ್ರಿನಿಟಿ ವೃತ್ತ, ಸರ್ಜಾಪುರ ರಸ್ತೆ, ಕನಕಪುರ ರಸ್ತೆಯಿಂದ ಕೃಷ್ಣರಾವ್ ಪಾರ್ಕ್, ಮೈಸೂರು ರಸ್ತೆಯಿಂದ ಶಿರಸಿ ವೃತ್ತದವರೆಗೆ ಸುರಂಗ ಮಾರ್ಗ ನಿರ್ಮಾಣದ ಚಿಂತನೆ ಇದೆ.
ಇನ್ನೂ ಮಾಗಡಿ ರಸ್ತೆ, ತುಮಕೂರು ರಸ್ತೆಯಿಂದ ಯಶವಂತಪುರ ಜಂಕ್ಷನ್, ಹೊರ ವರ್ತುಲ ರಸ್ತೆ, ಗೊರಗುಂಟೆಪಾಳ್ಯ, ಕೆಆರ್ ಪುರಂ, ಮತ್ತು ಸಿಲ್ಕ್ ಬೋರ್ಡ್ ಪ್ರದೇಶಗಳಲ್ಲಿ ರಸ್ತೆಗಳು ಅಭಿವೃದ್ಧಿ ಆಗಲಿವೆ.
ರಾಜ್ಯದಲ್ಲಿ ಟಿಬಿಎಂ ಯಂತ್ರಗಳು ಲಭ್ಯವಿಲ್ಲ
ಪ್ರಸ್ತುತದಲ್ಲಿ ರಸ್ತೆಗಾಗಿ ಸುರಂಗ ಕೊರೆಯುವ ಯಂತ್ರಗಳು (TBM) ರಾಜ್ಯದಲ್ಲಿ ಲಭ್ಯವಿಲ್ಲ. ಸುರಂಗ ರಸ್ತೆಗಳ ಕಾಮಗಾರಿಗೆ ಇವುಗಳ ಅಗತ್ಯವಿದೆ. ಮುಂಬೈ ಮತ್ತು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಇಂತಹ ಯಂತ್ರಗಳನ್ನು ನಿಯೋಜಿಸಲಾಗಿದೆ. ನಾವು ಕನಿಷ್ಟ ನಾಲ್ಕು ಲೇನ್‌ಗಳನ್ನು ನಿರ್ಮಿಸಲು ನೋಡುತ್ತಿರುವ ಕಾರಣ ಯೋಜನೆಗೆ ದೊಡ್ಡ TBM ಗಳ ಅವಶ್ಯಕತೆ ಇದೆ ಎಂದು ಸಚಿವರು ಮಾಹಿತಿ ನೀಡಿದರು.
ಒಂದು ವಾರದ ಹಿಂದೆ ಬೆಂಗಳೂರಿನ ರಿಂಗ್ ರಸ್ತೆ ಬಳಿಕ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಈ ಕುರಿತು ಪ್ರಸ್ತಾಪಿಸಿದ ಶಿವಕುಮಾರ್, ದಟ್ಟಣೆ ನಿವಾರಣೆಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಂಚಾರ ಪೊಲೀಸರ ಜತೆಗೆ ಚರ್ಚಿಸಿದ್ದೇನೆ. ಅಕ್ಟೋಬರ್ 7 ರಂದು ಹೊರ ವರ್ತುಲ ರಸ್ತೆಗೆ ಭೇಟಿ ನೀಡಲಾಗುವುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂಜಿನಿಯರ್‌ಗಳು ಸಂಚಾರ ಪೊಲೀಸರ ಸಹಕಾರದೊಂದಿಗೆ ಗುಂಡಿಗಳ ಸಮಸ್ಯೆ ನಿವಾರಣೆಗೆ ಶ್ರಮಿಸಬೇಕು ಸೂಚಿಸಿದರು. ಅಲ್ಲದೇ ಟ್ರಾಫಿಕ್ ಪೊಲೀಸರು ಸೂಚಿಸಿದ ಸ್ಥಳಗಳಲ್ಲಿ ತ್ವರಿತಗತಿಯಲ್ಲಿ ರಸ್ತೆ ಗುಂಡಿ ಮುಚ್ಚಲು ಬಿಬಿಎಂಪಿ ಸಿದ್ಧವಾಗಬೇಕು ಎಂದು ತಿಳಿಸಿದರು.












Click it and Unblock the Notifications