ಆಂಬಿಡೆಂಟ್ ಹಗರಣ: ಚೆನ್ನೈನಿಂದ ಬೆಂಗಳೂರಿಗೆ ಚಿನ್ನ ಬಂದಿದ್ದು ಸತ್ಯ

ಬೆಂಗಳೂರು, ನವೆಂಬರ್ 28: ಆಂಬಿಡೆಂಟ್ ಕಂಪನಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಲಭ್ಯವಾಗಿದೆ. ಚೆನ್ನೈನಿಂದ ಬೆಂಗಳೂರಿಗೆ 3.5 ಕೋಟಿ ಮೌಲ್ಯದ ಚಿನ್ನ ಬಂದಿರುವುದು ಸತ್ಯ ಎನ್ನುವುದು ದಾಖಲೆಗಳ ಮೂಲಕ ಖಚಿತವಾಗಿದೆ.

ಈ ಕುರಿತು ಸಿಸಿಬಿ ವಶದಲ್ಲಿರುವ ಅಲಿಖಾನ್ ವಿಚಾರಣೆಯನ್ನೂ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ನಟ ಅಂಬರೀಶ್ ಅವರ ನಿಧನ ಮತ್ತು ಬಂದೋಬಸ್ತ್ ಕಾರ್ಯದಲ್ಲಿ ಎಲ್ಲಾ ಸಿಬ್ಬಂದಿಗಳು ತೊಡಗಿದ್ದರಿಂದ ಎರಡು ದಿನ ವಿಚಾರಣೆ ನಡೆಸಲು ಸಾಧ್ಯವಾಗಿರಲಿಲ್ಲ.

ಆಂಬಿಡೆಂಟ್ ಕಂಪನಿ ಮಾಲೀಕ ಮತ್ತು ಜಿಯಾ ಎನ್ನುವ ವ್ಯಕ್ತಿ ಸೇರಿ ಚೆನ್ನೈ ಮೂಲದ ಟೋಕಿಯೋ ಇನ್ಫೋಟೆಕ್ ಕಂಪನಿಯಿಂದ ಚಿನ್ನವನ್ನು ತರಿಸಿ ಹಣ ವರ್ಗಾಯಿಸಿದ್ದರು.

Ambident case: where is 3 crore worth of Gold?

ಆಂಬಿಡೆಂಟ್ ಕಂಪನಿ ಖಾತೆಯಿಂದ ಟೋಕಿಯೋ ಇನ್‌ಫೋಟೆಕ್ ಕಂಪನಿಗೆ ಹಣ ವರ್ಗಾವಣೆ ಆಗಿತ್ತು. ಈ ಹಣದ ಬದಲಿಗೆ ಅಷ್ಟೇ ಮೌಲ್ಯದ ಚಿನ್ನ ಆಂಬಿಡೆಂಟ್ ಕಂಪನಿ ವಿಳಾಸಕ್ಕೆ ಚೆನ್ನೈನಿಂದ ರವಾನೆಯಾಗಿತ್ತು.ಆದರೆ ಬೆಂಗಳೂರಿಗೆ ಬಂದ ಚಿನ್ನ ಎಲ್ಲಿಗೆ ಹೋಯಿತು ಎನ್ನುವುದು ಇನ್ನು ಬಹಿರಂಗಗೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+