Amazon ಲೇಆಫ್‌ ಬಳಿಕ ಕೋಳಿ ಸಾಕಾಣಿಕೆ ಆರಂಭಿಸಿ ಮೊಟ್ಟೆಯನ್ನೇ ಪ್ರೊಡಕ್ಟ್ ಮಾಡಿಕೊಂಡ ಮಹಿಳಾ ಟೆಕ್ಕಿ

ಟೆಕ್ ಕಂಪನಿಗಳೆಂದರೆ ಉದ್ಯೋಗ ಭದ್ರತೆ ಇಲ್ಲದ ಆಗಾಗ ಲೇಆಫ್‌ ಮಾಡುವ ಈ ಕಾಲದಲ್ಲಿ, ಕೆಲಸ ಕಳೆದುಕೊಂಡಾಗ ಆತಂಕ ಆಗುವುದು ಸಹಜ. ಆದರೆ, ಇದನ್ನೇ ಒಂದು ಅವಕಾಶವನ್ನಾಗಿ ಪರಿವರ್ತಿಸಿ ಯಶಸ್ಸು ಕಂಡ ಮಹಿಳೆಯೊಬ್ಬರ ಸ್ಫೂರ್ತಿದಾಯಕ ಕಥೆ ಇಲ್ಲಿದೆ.

ಹೌದು, ಅಮೆಜಾನ್ ಕಂಪನಿಯ ಕೆಲಸ ಕಳೆದುಕೊಂಡ ನಂತರ ಬೇರೊಂದು ಕಾರ್ಪೊರೇಟ್ ಉದ್ಯೋಗದ ಹಿಂದೆ ಓಡುವ ಬದಲು, ಕೋಳಿ ಸಾಕಾಣಿಕೆ ಆರಂಭಿಸಿ, ತಮ್ಮದೇ ಆದ ಒಂದು ಬಿಸ್ನೆಸ್ ಕಟ್ಟಿದ ಮಹಿಳೆಯ ಯಶೋಗಾಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Amazon Layoff Success Story Woman Starts Chicken Farm and Becomes Her Own Boss After Losing Job

ಇದೇ ವರ್ಷ, ಅಂದರೆ 2026ರ ಮಾರ್ಚ್ ನಲ್ಲಿ ಅಮೆಜಾನ್ ಕಂಪನಿಯು ಮಾರಿಯಾ ಹರ್ಷಿತಾ ಅವರನ್ನ ಕೆಲಸದಿಂದ ವಜಾಗೊಳಿಸಿತು. ತಮ್ಮ ಮ್ಯಾನೇಜರ್ ಈ ಸುದ್ದಿಯನ್ನ ತಿಳಿಸಿದಾಗ ಅವರು ಕುಗ್ಗಲಿಲ್ಲ, ಬದಲಿಗೆ ನಗುಮುಖದಿಂದಲೇ ಆ ಪರಿಸ್ಥಿತಿಯನ್ನ ಎದುರಿಸಿದರು. "ತನಗೆ ಅತ್ಯಂತ ಅಗತ್ಯವಿದ್ದಾಗ ಈ ಕೆಲಸ ಸಿಕ್ಕಿತ್ತು, ಖಂಡಿತ ಮುಂದೆಯೂ ಇನ್ನೊಂದು ಉತ್ತಮ ಅವಕಾಶ ಒದಗಿ ಬರುತ್ತದೆ" ಎಂದು ಅವರು ತಮ್ಮನ್ನು ತಾವೇ ಸಮಾಧಾನಪಡಿಸಿಕೊಂಡಿದ್ದರು.

ಕೆಲಸ ಹೋದ ನಂತರ, ಹರ್ಷಿತಾ ಅವರು ಬೇರೆ ಕಂಪನಿಗಳಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು. ತಮ್ಮ ಹಿರಿಯ ಸಹೋದ್ಯೋಗಿಗಳು ಹಾಗೂ ಸಂಬಂಧಿಕರ ಮೂಲಕ ಶಿಫಾರಸು ಪಡೆಯಲು ಪ್ರಯತ್ನಿಸಿದರು. ಪ್ರೊಡಕ್ಟ್ ಮ್ಯಾನೇಜ್ಮೆಂಟ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಅವರು, ತಮ್ಮ ಕೌಶಲ್ಯವನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಲು ಬಯಸಿದ್ದರು. ಆದರೆ, ಅವರ ಪ್ರಯತ್ನಗಳಿಗೆ ತಕ್ಷಣದ ನಿರೀಕ್ಷಿತ ಫಲ ಸಿಗಲಿಲ್ಲ.

ಸ್ವಂತ ಉದ್ದಿಮೆಯತ್ತ ಒಲವು: ಕೋಳಿ ಸಾಕಾಣಿಕೆ ಬಿಸ್ನೆಸ್ ಐಡಿಯಾ

ಹೊಸ ಉದ್ಯೋಗ ಸಿಗದಿದ್ದಾಗ, ಹರ್ಷಿತಾ ಅವರ ಪತಿ ಕನಿಷ್ಕ ಡೇವಿಡ್ ಅವರು ಒಂದು ಅದ್ಭುತ ಸಲಹೆ ನೀಡಿದರು. ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು, ನೀನೇ ಸ್ವಂತ ಬಾಸ್ ಆಗು ಎಂದು ಹುರಿದುಂಬಿಸಿದರು. ಸ್ವಂತವಾಗಿ ಒಂದು ಪ್ರೊಡಕ್ಟ್ ಸೃಷ್ಟಿಸುವಂತೆ ಪ್ರೇರೇಪಿಸಿದರು. ಈ ಆಲೋಚನೆಯೇ ಹರ್ಷಿತಾ ಅವರ ಬದುಕಿಗೆ ಹೊಸ ತಿರುವು ನೀಡಿತು ನೋಡಿ.

ದಂಪತಿ ಇಬ್ಬರೂ ಸೇರಿ ಒಂದು ಸಣ್ಣ ಕೋಳಿ ಗೂಡು ನಿರ್ಮಿಸಿ, ಆರು ಕೋಳಿ ಮರಿಗಳನ್ನ ತಂದರು. ಹರ್ಷಿತಾ ಒಂದು ಕಡೆ ಉದ್ಯೋಗಕ್ಕಾಗಿ ಅರ್ಜಿ ಹಾಕುತ್ತಲೇ, ಬಿಡುವಿನ ವೇಳೆಯಲ್ಲಿ ಕೋಳಿ ಮರಿಗಳ ಪಾಲನೆ ಮಾಡತೊಡಗಿದರು. ಆದರೆ, ಆ ಆರು ಮರಿಗಳೂ ಹುಂಜಗಳಾಗಿ ಬೆಳೆದಾಗ ಅವರಿಗೆ ಅಚ್ಚರಿಯಾಗಿತ್ತು.

ನಂತರ ತಮ್ಮ ಮಕ್ಕಳಿಗಾಗಿ ತಾಜಾ ಮೊಟ್ಟೆಗಳನ್ನ ಪಡೆಯುವ ಉದ್ದೇಶದಿಂದ, ತಮ್ಮ ಪತಿಯನ್ನು ಒಪ್ಪಿಸಿ ಮತ್ತೆ ಕೆಲವು ಹೆಂಟೆ (ಹೆಣ್ಣು ಕೋಳಿ)ಗಳನ್ನ ತಂದರು. ಗೂಡನ್ನು ಸ್ವಲ್ಪ ದೊಡ್ಡದು ಮಾಡಿದರು. ಈ ಮೂಲಕ ಅವರ ಕೋಳಿ ಫಾರಂ ನಿಧಾನವಾಗಿ ರೂಪುಗೊಳ್ಳಲು ಶುರುವಾಯಿತು.

ಈಗ ಮೊಟ್ಟೆಯೇ ಬಂಡವಾಳ

ಕೋಳಿಗಳು ಮೊಟ್ಟೆ ಇಡಲು ಪ್ರಾರಂಭಿಸಿದಾಗ, ಹರ್ಷಿತಾ ಆ ಮೊಟ್ಟೆಗಳನ್ನ ಮಾರಾಟ ಮಾಡಲು ಮುಂದಾದರು. ಆಗಲೇ ಅವರಿಗೆ ತಾವು ಒಂದು ಹೊಸ ಉದ್ಯಮವನ್ನ ಹುಟ್ಟುಹಾಕಿರುವ ಸ್ಪಷ್ಟ ಅರಿವಾದದ್ದು. "ನನ್ನ ಬಳಿ ಈಗ ನನ್ನದೇ ಆದ ಒಂದು ಪ್ರೊಡಕ್ಟ್ (ಮೊಟ್ಟೆಗಳು) ಇದೆ. ಮಾರುಕಟ್ಟೆಯಲ್ಲಿ ಅದಕ್ಕೆ ಬೇಡಿಕೆಯೂ ಇದೆ, ನಾನು ಆ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುತ್ತಿದ್ದೇನೆ" ಎಂದು ಅವರು ಹೆಮ್ಮೆಯಿಂದ ತಮ್ಮ ಲಿಂಕ್ಡ್‌ಇನ್ ಪೋಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಹಳೆಯ ಕಾರ್ಪೊರೇಟ್ ವೃತ್ತಿಯನ್ನೇ ಹೊಸ ಬಿಸ್ನೆಸ್‌ಗೆ ಹೋಲಿಸಿರುವ ಅವರು, "ನಾನೀಗ ಮೊಟ್ಟೆಗಳ ಜೊತೆ ಪ್ರೊಡಕ್ಟ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದೇನೆ" ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಾವು ಎಂದಿಗೂ ಬಳಸುವುದಿಲ್ಲ ಎಂದುಕೊಂಡಿದ್ದ ಪವರ್ ಬಿಐ ಡೇಟಾ ಟೂಲ್ ಅನ್ನು ಈಗ ತಮ್ಮ ಕೋಳಿ ಫಾರಂನ ದೈನಂದಿನ ಲೆಕ್ಕಾಚಾರಗಳಿಗೆ ಬಳಸಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ.

ಕಾರ್ಪೊರೇಟ್ ಲೈಫ್‌ಗಿಂತ ಭಿನ್ನ

ಮೊದಲು ವೀಕೆಂಡ್‌ಗಳಲ್ಲಿ ದಿಢೀರ್ ಮೀಟಿಂಗ್‌ಗಳು, ಚೈಮ್ ಕಾಲ್‌ಗಳು, ಕ್ವಿಪ್ ಶೀಟ್‌ಗಳಂತಹ ಕಾರ್ಪೊರೇಟ್ ಒತ್ತಡಗಳನ್ನು ಎದುರಿಸುತ್ತಿದ್ದ ಹರ್ಷಿತಾ ಅವರಿಗೆ ಈಗಿನ ಸಮಸ್ಯೆಗಳೇ ಕಂಪ್ಲೀಟ್‌ ಭಿನ್ನವಾಗಿವೆ. "ಈಗ ನನ್ನ ಸಮಸ್ಯೆಗಳೆಂದರೆ ಗದ್ದೆಯಲ್ಲಿರುವ ಹೆಗ್ಗಣಗಳು ಮತ್ತು ಹಾವುಗಳು" ಎಂದು ಅವರು ವಾಸ್ತವವನ್ನ ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ನ ಕೊನೆಯಲ್ಲಿ ಅವರು "ಕ್ರಿಸ್ತನನ್ನ ನಂಬುವವರಿಗೆ ಎಲ್ಲವೂ ಒಳ್ಳೆಯದಕ್ಕೇ ಆಗುತ್ತದೆ, ಬದುಕಿನ ಈ ಹೊಸ ದಿಕ್ಕಿಗೆ ನಾನು ಕೃತಜ್ಞಳಾಗಿದ್ದೇನೆ" ಎಂದು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್‌ಗೆ ಲಿಂಕ್ಡ್‌ಇನ್‌ನಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಕಮೆಂಟ್ ಮಾಡಿರುವ ಬಳಕೆದಾರರೊಬ್ಬರು ಇಂತಹ ಉದ್ಯೋಗಿಗಳನ್ನ ಟೆಕ್ ರೆಫ್ಯೂಜಿ ಅಥವಾ ಟೆಕ್ ಎಕ್ಸ್‌ಪ್ಯಾಟ್ ಎಂದು ಕರೆದಿದ್ದಾರೆ. ಮತ್ತೆ ಕೆಲವರು "ಹಿಂದೆ ಬಿದ್ದಾಗ ಅದನ್ನೇ ಅವಕಾಶವನ್ನಾಗಿ ಪರಿವರ್ತಿಸಲು ನಿಜವಾದ ಧೈರ್ಯ ಬೇಕು. ನೀವೀಗ ನಿಮ್ಮದೇ ಸ್ವಂತ ಪ್ರೊಡಕ್ಟ್ ಕಟ್ಟಿದ್ದೀರಿ" ಎಂದು ಪ್ರಶಂಸಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+