ಇನ್ಮುಂದೆ 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೇ ಬರಲಿದೆ ಸಿಮ್ ಕಾರ್ಡ್!
ಸಿಮ್ ಖರೀದಿಗೆ ಸಂಬಂಧಿಸಿದಂತೆ ಇಲ್ಲೊಂದು ಭರ್ಜರಿ ಗುಡ್‌ನ್ಯೂಸ್ ಇದೆ. ಇನ್ಮುಂದೆ ನಿಮಗೆ ಸಿಮ್ ಬೇಕಾದರೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ಮುಂದೆ ಕೇವಲ 10 ನಿಮಿಷಗಳಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಇತ್ತೀಚಿನ ವರ್ಷಗಳಲ್ಲಿ ಸಿಮ್ ಖರೀದಿ ಪ್ರಕ್ರಿಯೆಯಲ್ಲಿ ಕೆಲವೊಂದು ಪ್ರಮುಖ ಹಾಗೂ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ಈ ರೀತಿ ಇರುವಾಗಲೇ ದಿನಸಿ ಮಾದರಿಯಲ್ಲಿ ಸಿಮ್ ಕಾರ್ಡ್ ನಿಮ್ಮ ಮನೆ ಬಾಗಿಲಿಗೆ ಬರುವ ಭರ್ಜರಿ ಗುಡ್‌ನ್ಯೂಸ್ ಇದೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಇಷ್ಟು ದಿನ ಪ್ರಮುಖ ಹಾಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದ ಬ್ಲಿಂಕಿಟ್ / blinkit ಇದೀಗ ಸಿಮ್ ಕಾರ್ಡ್ ವಿಚಾರದಲ್ಲಿ ಜನರಿಗೆ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಗ್ರಾಹಕರ ಮನೆ ಬಾಗಿಲಿಗೆ 10 ನಿಮಿಷದಲ್ಲಿ ಸಿಮ್ ಕಾರ್ಡ್ ತಲುಪಿಸುವುದಾಗಿ ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ (blinkit Albinder Dhindsa) ಅವರು ಹೇಳಿದ್ದಾರೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರು ಸೇರಿದಂತೆ ಪ್ರಮುಖ ಭಾಗಗಳಲ್ಲಿ ಸಿಮ್ ಪೂರೈಕೆ ಮಾಡುವ ಬಗ್ಗೆ ಮಾತನಾಡಿದ್ದಾರೆ.

ಬ್ಲಿಂಕಿಟ್‌ನಲ್ಲಿ 10 ನಿಮಿಷಗಳಲ್ಲಿ ಏರ್‌ಟೆಲ್ ಸಿಮ್ ಅನ್ನು ಪಡೆಯಿರಿ!
ನೀವು ಇಷ್ಟು ದಿನಗಳ ಕಾಲ ಸಿಮ್ ಪಡೆಯುವುದಕ್ಕೆ ಅಂಗಡಿಗಳಿಗೆ ಇಲ್ಲವೇ ಆಯಾ ಸಿಮ್ ಕಾರ್ಡ್ ಸರ್ವೀಸ್ ಕೇಂದ್ರಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ, ಇನ್ಮುಂದೆ ನಿಮ್ಮ ಮನೆಯ ಬಾಗಿಲಿಗೇ ಸಿಮ್ ಕಾರ್ಡ್ ಬರಲಿದೆ. ಗ್ರಾಹಕರು ಸಿಮ್‌ಗಳನ್ನು ಪಡೆದುಕೊಳ್ಳಬಹುದು. ಹೊಸ ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಸಂಪರ್ಕವನ್ನು (ಸಿಮ್ ಕಾರ್ಡ್) ಪಡೆಯಲು ಆಯ್ಕೆಗಳನ್ನು ನೀಡಲಿದ್ದೇವೆ ಎಂದು ಬ್ಲಿಂಕಿಟ್ ಸಹ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರು ತಿಳಿಸಿದ್ದಾರೆ.
ಸಿಮ್ ಕಾರ್ಡ್ ಮಾತ್ರವಲ್ಲ ಈಗಾಗಲೇ ನಿಮ್ಮ ಬಳಿ ಇರುವ ಸಿಮ್ ಕಾರ್ಡ್ ಅನ್ನು ಏರ್‌ಟೆಲ್‌ಗೆ ಬದಲಾಯಿಸಬಹುದು / ಸಿಮ್ ಪೋರ್ಟ್ ಮಾಡಿಕೊಳ್ಳುವುದಕ್ಕೂ ಅವಕಾಶ ಇರಲಿದೆ ಎಂದು ಬ್ಲಿಂಕಿಟ್ ಹೇಳಿದೆ. @airtelindia ಏರ್‌ಟೆಲ್ ಗ್ರಾಹಕರು ಮನೆಯಲ್ಲಿಯೇ ಆಧಾರ್ ಬಳಸಿ ಸರಳ ಸ್ವಯಂ ಪರಿಶೀಲನೆಯೊಂದಿಗೆ ಸಿಮ್ ಸಕ್ರಿಯಗೊಳಿಸಿಕೊಳ್ಳಬಹುದು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅನುವು ಮಾಡಿಕೊಡುವ ಹೊಸ ಸೇವೆಯನ್ನು ಪರಿಚಯಿಸುತ್ತಿದ್ದೇವೆ. ಅಂಗಡಿಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ ಹಾಗೂ ಡಾಕ್ಯುಮೆಂಟೇಷನ್ ಸಹ ಬೇಕಿಲ್ಲ ಎಂದು ಹೇಳಲಾಗಿದೆ.
Get an Airtel SIM delivered in 10 minutes on Blinkit!
— Albinder Dhindsa (@albinder) April 15, 2025
Starting today, customers can get a SIM delivered and choose to get a new prepaid or postpaid connection, or switch their existing number to Airtel.@airtelindia has also created a new flow which allows customers to complete… pic.twitter.com/ceYJueK4lm
ಈ ಪ್ರಮುಖ ನಗರಗಳಲ್ಲಿ ಸೇವೆ: ಇನ್ನು ಏರ್‌ಟೆಲ್ ಸಿಮ್ ಸೇವೆಯನ್ನು ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲ ಹಂತದಲ್ಲಿ ಪ್ರಾರಂಭಿಸುತ್ತಿರುವುದಾಗಿ ಬ್ಲಿಂಕಿಟ್ ಹೇಳಿದೆ. ಬೆಂಗಳೂರು, ದೆಹಲಿ ಎನ್‌ಸಿಆರ್, ಅಹಮದಾಬಾದ್, ಮುಂಬೈ, ಪುಣೆ ಹಾಗೂ ಲಕ್ನೋ ಸೇರಿದಂತೆ ಪ್ರಮುಖ ನಗರಗಳಲ್ಲಿ ಮೊದಲ ಹಂತದಲ್ಲಿ ಇದು ಪ್ರಾರಂಭವಾಗಲಿದೆ. ಇದಾದ ಮೇಲೆ ಇನ್ನುಳಿದ ನಗರಗಳಲ್ಲಿ ಪ್ರಾರಂಭಿಸುವುದಾಗಿ ಹೇಳಲಾಗಿದೆ.
-
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Arecanut Price: ಶಿವಮೊಗ್ಗ ಮಾರುಕಟ್ಟೆಲ್ಲಿ ಕ್ವಿಂಟಾಲ್ ಅಡಿಕೆ ಧಾರಣೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾರ್ಚ್ 23ರ ದರಪಟ್ಟಿ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
ಮಾರ್ಚ್ 23ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 22ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: ಬಿಡಿಎಗೆ 50ರ ಸಂಭ್ರಮ; ಹೊಸ ಲೋಗೋ, ಟ್ಯಾಗ್ಲೈನ್ ವಿನ್ಯಾಸ ಮಾಡಿ 1 ಲಕ್ಷ ರೂ. ಬಹುಮಾನ ಗೆಲ್ಲಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ












Click it and Unblock the Notifications