ಫುಕೆಟ್ ಸೇರಿ 7 ಹೊಸ ನಗರಗಳಿಗೆ ಬೆಂಗಳೂರಿನಿಂದ ವಿಮಾನ ಸೌಲಭ್ಯ
ಬೆಂಗಳೂರು, ಅಕ್ಟೋಬರ್ 27: ಫುಕೆಟ್ ಸೇರಿ ಹೊಸ ನಗರಗಳಿಗೆ ಬೆಂಗಳೂರಿನಿಂದ ವಿಮಾನ ಸೌಲಭ್ಯ ಆರಂಭವಾಗಲಿದೆ. ಅ.28ರಿಂದ ಮಾ.30ರವರೆಗೆ ಐದು ತಿಂಗಳ ಅವಧಿಯಲ್ಲಿ ಎರಡು ಹೊಸ ವಿಮಾನಯಾನ ಸಂಸ್ಥೆಗಳು ಕೆಐಎಎಲ್ ನಿಂದ ಕಾರ್ಯಾಚರಣೆ ಆರಂಭಿಸಲಿವೆ.
ಈ ಅವಧಿಯಲ್ಲಿ ಪ್ರತಿದಿನ ಸರಾಸರಿ 744ರಿಂದ 766 ವಿಮಾನಗಳು ಹಾರಾಟ ಮಾಡುವ ನಿರೀಕ್ಷೆ ಇದೆ. ಗೋ ಏರ್ ಸಂಸ್ಥೆಯು ಥೈಲ್ಯಾಂಡ್‌ನ ಫುಕೆಟ್ ಗೆ ನೇರ ವಿಮಾನ ಆರಂಭಿಸುತ್ತಿದೆ. ಉಳಿದಂತೆ ಇಂಡಿಗೋ ಸಂಸ್ಥೆಯು ಈಗಾಗಲೇ ವಿಮಾನ ಸಂಪರ್ಕ ಇರುವ ಮಾಲೆ, ಬ್ಯಾಂಕಾಕ್, ಕೌಲಾಲಂಪುರ, ಹಾಂಕಾಂಗ್ ಮತ್ತು ಕಟ್ಮಂಡುವಿಗೆ ವಿಮಾನ ಹಾರಾಟ ಆರಂಭಿಸಿದೆ.
ಇದೇ ಸಂದರ್ಭದಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಾರಕ್ಕೆ ನಾಲ್ಕು ದಿನಗಳಂತೆ ಅ.29ರಿಂದ ಸಿಂಗಾಪುರಕ್ಕೆ ವಿಮಾನಯಾನ ಆರಂಭಿಸುತ್ತಿದೆ. ಇದರೊಂದಿಗೆ ಬೆಂಗಳೂರು ನಗರವೂ ಸೇರಿ ಒಟ್ಟು 53 ದೇಶೀಯ ಮತ್ತು 29 ಅಂತಾರಾಷ್ಟ್ರೀಯ ಮಾರ್ಗ ಸೇರಿ ಒಟ್ಟು 82 ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದಂತಾಗಲಿದೆ.

ಹೊಸ ಮಾರ್ಗಗಳು ಯಾವುವು
ಫುಕೆಟ್(ಥೈಲ್ಯಾಂಡ್) ಹಾಗೂ ದೇಶೀಯ ಮಾರ್ಗದಲ್ಲಿ ಕಾನ್ಪುರ, ಗೋರಖಪುರ್, ಉದಯ್‌ಪುರ್, ಪ್ರಯಾಗ್ ರಾಜ್, ಐಜ್ವಾಲ್ ಮತ್ತು ಕೊಲ್ಲಾಪುರ ಮೂಲಕ ಸಂಚರಿಸುತ್ತವೆ.

ಕೆಐಎನಲ್ಲಿ ಮಹಿಳೆಯರು, ಪುರುಷರ ಪ್ರತ್ಯೇಕ ಸಾಲು ರದ್ದು
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲಗೇಜ್ ಹಾಗೂ ಭದ್ರತಾ ತಪಾಸಣೆ ವೇಳೆ ಉದ್ದದ ಸಾಲುಗಳು ಕಂಡುಬರುತ್ತಿತ್ತು. ಅದನ್ನು ತಪ್ಪಿಸಲು ಹಾಗೂ ಸಮಯವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲು ಸ್ಮಾರ್ಟ್ ಸೆಕ್ಯುರಿಟಿ ಲೇನ್ ಮತ್ತು ಆಟೋಮೆಟೆಡ್ ಟ್ರೇ ರಿಟ್ರೈವಲ್ ಸಿಸ್ಟಮ್ ಜಾರಿಗೆ ತರಲಾಗುತ್ತಿದೆ. ತಪಾಸಣೆ ಸಂದರ್ಭದಲ್ಲಿ ಮಹಿಳೆ ಮತ್ತು ಪುರುಷರನ್ನು ಪ್ರತ್ಯೇಕ ಸ್ಥಳದಲ್ಲಿ ತಪಾಸಣೆ ಮಾಡುವ ಬದಲು ಒಂದೇ ಸಾಲಿನಲ್ಲಿರುವಾಗಲೇ ತಪಾಸಣೆ ನಡೆಸಲು ಸಾಧ್ಯವಾಗಲಿದೆ.

ಕೆಂಪೇಗೌಡ ಏರ್‌ಪೋರ್ಟ್ ಮಾರ್ಗ ಮಹಿಳೆಯರಿಗೆ ಸೇಫ್
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮತ್ತೊಂದು ಮಾರ್ಗವು ಇನ್ನುಮುಂದೆ ಸುರಕ್ಷಿತವಾಗಿರಲಿದೆ. ಹೇಗೆ ಅಂತೀರಾ, ಇಷ್ಟು ದಿನ ಟೋಲ್ ನೀಡದೆ ಬೇಗೂರು-ಬಂದಿಕೊಡಿಗೇಹಳ್ಳಿ ಮಾರ್ಗವಾಗಿ ಏರ್‌ಪೋರ್ಟ್ ತಲುಪಬಹುದಿತ್ತು, ಇದು ಏರ್‌ಪೋರ್ಟ್‌ನ ಮತ್ತೊಂದು ಮಾರ್ಗ, ಆದರೆ ಈ ಮಾರ್ಗದಲ್ಲಿ ಎಲ್ಲಿಯೂ ಸ್ಟ್ರೀಟ್‌ಲೈಟ್‌ಗಳು ಇರದ ಕಾರಣ ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿತ್ತು.

ಕೆಂಪೇಗೌಡ ಏರ್‌ಪೋರ್ಟ್ ನಲ್ಲಿ ಲಗೇಜ್ ತಪಾಸಣೆಗೆ ಹೊಸ ತಂತ್ರಜ್ಞಾನ
ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಲಗೇಜ್ ತಪಾಸಣೆಗೆ ಸಸ್ಪೆಕ್ಟ್ ಬ್ಯಾಗ್ ಟ್ರ್ಯಾಂಕಿಂಗ್ ಸಿಸ್ಟಮ್ ಶೀಘ್ರದಲ್ಲೇ ಅಳವಡಿಸಲಾಗುತ್ತದೆ. ಇದರಿಂದ ಮಾದಕವಸ್ತು ಸೇರಿ ವಿವಿಧ ನಿಷೇಧಿತ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಸಂದೆ ತಪ್ಪಲಿದೆ, ಈ ಹೊಸ ವ್ಯವಸ್ಥೆಯಿಂದ ಪ್ರಯಾಣಿಕರು, ಭದ್ರತಾ ಅಧಿಕಾರಿಗಳು ಹಾಗೂ ಸೀಮಾ ಸುಂಕ ಅಧಿಕಾರಿಗಳ ಸಮಯ ಮತ್ತು ಶ್ರಮ ಉಳಿತಾಯವಾಗಲಿದೆ. ಅನುಮಾನಾಸ್ಪದ ವಸ್ತುಗಳನ್ನು ಮಾತ್ರ ಪತ್ತೆ ಮಾಡಿ ತಪಾಸಣೆ, ಬಂಧನ, ತನಿಖೆ ನಡೆಸಲು ಇದು ಸಹಕಾರಿಯಾಗಲಿದೆ.












Click it and Unblock the Notifications