ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಏರ್ ಇಂಡಿಯಾ ಸಿಬ್ಬಂದಿಗೆ ಇಂಡಿಗೋ ಬಸ್ ಡಿಕ್ಕಿ, ಗಾಯ
ಬೆಂಗಳೂರು, ಫೆಬ್ರವರಿ 25: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಡಿಗೋ ಬಸ್ ಡಿಕ್ಕಿ ಹೊಡೆದ ಪರಿಣಾಮ ಏರ್ ಇಂಡಿಯಾ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಎರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯೊಬ್ಬರು ವಿಮಾನ ಎಐ265ರಿಂದ ಇಳಿದು ಬರುವ ವೇಳೆ ಇಂಡಿಗೋ ಬಸ್ ಅವರಿಗೆ ಡಿಕ್ಕಿ ಹೊಡೆದಿದ್ದು ಮಾತ್ರವಲ್ಲದೆ ಸ್ವಲ್ಪ ದೂರ ಎಳೆದುಕೊಂಡು ಬಂದಿದೆ ಎಂದು ಏರ್ ಇಂಡಿಯಾ ಹಿರಿಯ ಅಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಅವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಇಂಡಿಗೋ ಅತಿದೊಡ್ಡ ವಿಮಾನ ಎನ್ನುವ ಖ್ಯಾತಿಗೆ ಪಾತ್ರವಾಗಿದೆ.ತನಿಖೆ ಮುಂದುವರೆದಿದೆ. ಇನ್ನುಮುಂದೆ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತದೆ.

ಚಾಲಕನ ಕಣ್ತಪ್ಪಿನಿಂದ ಆಗಿರುವ ಅಪಘಾತವಾಗಿದೆ. ಸಾಮಾನ್ಯವಾಗಿ ವಿಮಾನ ನಿಲ್ದಾಣದಿಂದ ವಿಮಾನ ಇರುವ ಕಡೆಗೆ ಸಂಚರಿಸುವಾಗ ಯಾರೂ ಆ ಜಾಗದಲ್ಲಿ ಇರುವುದಿಲ್ಲ ಮತ್ತು ಬಸ್‌ಗಳು ವೇಗದಲ್ಲಿರುತ್ತವೆ ಏಕಾಏಕಿ ಅಡ್ಡ ಬಂದಿರುವ ಕಾರಣ ಚಾಲಕನಿಗೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications